GT vs SRH: ಸನ್ ವಿರುದ್ಧ 82 ರನ್ ಜಯ ಸಾಧಿಸಿದ ಗುಜರಾತ್‌ಗೆ ಅಗ್ರಸ್ಥಾನ
ಅಹಮದಾಬಾದ್: ಭರವಸೆಯ ಬೌಲರ್ ಕಗಿಸೋ ರಬಾಡ ಹಾಗೂ ಜೇಸನ್ ಹೋಲ್ಡರ್ ಅವರ ಮಾರಕ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ 19ನೇ ಆವತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 56ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು 82 ರನ್‌ಗಳಿಂದ ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡಿದಿದೆ. ಆಡಿದ 12 ಪಂದ್ಯಗಳಲ್ಲಿ 8 ಜಯ ಸಾಧಿಸಿರುವ ಟೈಟಾನ್ಸ್ 16 ಅಂಕಗಳನ್ನು ಕಲೆ ಹಾಕಿ ಈ ಲೀಗ್‌ನಲ್ಲಿ ಮೊದಲ ಬಾರಿಗೆ ಅಗ್ರಸ್ಥಾನವನ್ನು ಪಡೆದಿದೆ. ಸನ್ ತಂಡ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಅರಂಭಿಕ ನಾಯಕ ಶುಭಮನ್ ಗಿಲ್ (5) ಹಾಗೂ ಜೋಸ್ ಬಟ್ಲರ್ (7) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ನಿಶಾಂತ್ ಸಿಂಧು ಜೋಡಿ 26 ಎಸೆತಗಳಲ್ಲಿ 38 ರನ್ ಸೇರಿಸಿತು.

ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಜೋಡಿ 41 ಎಸೆತಗಳಲ್ಲಿ 60 ರನ್ ಸೇರಿಸಿತು. ಈ ವೇಳೆ 5 ಬೌಂಡರಿ, 2 ಸಿಕ್ಸರ್ ಬಾರಿಸಿದ 61 ರನ್ ಸಿಡಿಸಿದ ಸಾಯಿ ಸುದರ್ಶನ್ 61 ರನ್ ಸಿಡಿಸಿದರು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 7 ಬೌಂಡರಿ, 1 ಸಿಕ್ಸರ್ ಸಹಿತ 50 ರನ್ ಸಿಡಿಸಿದರು. ಜೇಸನ್ ಹೋಲ್ಡರ್ 11 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 168 ರನ್ ಸೇರಿಸಿತು.
ರನ್ ಕಲೆ ಹಾಕಲು ಪರದಾಟ
ಟ್ರಾವಿಸ್ ಹೆಡ್ (0), ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (11), ಆರ್ ಸ್ಮರಣ್ (9), ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದರು. 5.5 ಓವರ್‌ಗಳಲ್ಲಿ 4 ವಿಕೆಟ್‌ಗೆ 32 ರನ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ (14), ಸಲಿಲ್ ಆರೋರಾ (16), ನಾಯಕ ಪ್ಯಾಟ್ ಕಮಿನ್ಸ್ (19) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅಲ್ಲದೆ ಸನ್ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂತಿಮವಾಗಿ 14.5 ಓವರ್‌ಗಳಲ್ಲಿ 86 ರನ್ ಸೇರಿಸಿತು.
ವೇಗದ ಬೌಲರ್‌ಗಳಾದ ಕಗಿಸೊ ರಬಾಡ ಹಾಗೂ ಜೇಸನ್ ಹೋಲ್ಡರ್ ತಲಾ ಮೂರು ವಿಕೆಟ್ ಪಡೆದರು. ಕರ್ನಾಟಕದ ಸ್ಟಾರ್ ಬೌಲರ್ ಪ್ರಸಿದ್ಧ್ ಕೃಷ್ಣಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications