Gujarat Election Results 2022: ಮೊದಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿದ ರವೀಂದ್ರ ಜಡೇಜಾ ಪತ್ನಿ ರಿವಾಬಾ

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ ಅವರು ಗುಜರಾತ್‌ನ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಮೊದಲ ಪ್ರಯತ್ನದಲ್ಲೇ ಗೆದ್ದು, ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ರಿವಾಬಾ ಜಡೇಜಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸಾನ್‌ಭಾಯ್ ಕರ್ಮುರ್ ಅವರನ್ನು 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಾಂಗ್ರೆಸ್‌ನ ಭೀಪೇಂದ್ರಸಿನ್ಹ ಜಡೇಜಾ ಮೂರನೇ ಸ್ಥಾನ ಪಡೆದರು. ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಒಟ್ಟಾರೆ ಬಿಜೆಪಿ ಪಕ್ಷವು 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಸೂಚನೆಯಿದೆ.

ರಾಜ್ಯ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಿವಾಬಾ ಜಡೇಜಾ ಹೆಸರು ಕಾಣಿಸಿಕೊಂಡಿತ್ತು. ಹಾಲಿ ಶಾಸಕ ಧರ್ಮೇಂದ್ರಸಿನ್ಹ್ ಜಡೇಜಾ ಅವರನ್ನು ಬಿಜೆಪಿ ಪಕ್ಷವು ಕೈಬಿಟ್ಟ ನಂತರ ಅವರಿಗೆ ಟಿಕೆಟ್ ನೀಡಲಾಯಿತು. ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಪತ್ನಿ ಪರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.

IND vs BAN: ಸರಣಿ ಸೋಲಿನ ನಡುವೆಯೂ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ರೋಹಿತ್ ಶರ್ಮಾIND vs BAN: ಸರಣಿ ಸೋಲಿನ ನಡುವೆಯೂ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ರೋಹಿತ್ ಶರ್ಮಾ

ರಿವಾಬಾ ಜಡೇಜಾ ಅವರು 2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರುವ ಮೊದಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಚಲನಚಿತ್ರ ಪದ್ಮಾವತ್ ವಿರುದ್ಧದ ಪ್ರತಿಭಟನೆಗಾಗಿ 2018ರಲ್ಲಿ ಮುಖ್ಯವಾಹಿನಿ ಸಂಘಟನೆಯಾದ ಕರ್ಣಿ ಸೇನೆಯಲ್ಲಿ ಕೆಲಸ ಮಾಡಿದ್ದರು.

ರಿವಾಬಾ ಜಡೇಜಾ ಮತ್ತು ಅವರ ಪತಿ ರವೀಂದ್ರ ಜಡೇಜಾ ಪ್ರಚಾರ ಮಾಡುವಾಗ, ಆರಂಭದಲ್ಲಿಯೇ ತಮ್ಮದೇ ಪಕ್ಷದ ಕಾರ್ಯಕರ್ತರ ಬೆಂಬಲ ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಆದರೆ ರಾಷ್ಟ್ರೀಯ ಮಟ್ಟದ ನಾಯಕರು ರಿವಾಬಾಳನ್ನು ಬೆಂಬಲಿಸಲು ಪ್ರಾರಂಭಿಸಿದ್ದರಿಂದ ಆ ಪ್ರತಿರೋಧವು ಮರೆಯಾಯಿತು.

ಕಾಂಗ್ರೆಸ್ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿರುವ ರಿವಾಬಾ ಜಡೇಜಾ ಅವರು ರಾಜ್‌ಕೋಟ್‌ನ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದಾರೆ. ರಿವಾಬಾ ಏಪ್ರಿಲ್ 17, 2016ರಂದು ರವೀಂದ್ರ ಜಡೇಜಾ ಅವರನ್ನು ವಿವಾಹವಾದರು.

IND vs BAN: ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು; ಧೋನಿಯ ಅನಗತ್ಯ ದಾಖಲೆ ಸರಿಗಟ್ಟಿದ ರೋಹಿತ್IND vs BAN: ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು; ಧೋನಿಯ ಅನಗತ್ಯ ದಾಖಲೆ ಸರಿಗಟ್ಟಿದ ರೋಹಿತ್

ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರ ನಾನಾ ಕಾರಣಗಳಿಂದ ಜನಮನ ಸೆಳೆಯುತ್ತಿತ್ತು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಕ್ಷೇತ್ರವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಪ್ರಮುಖ ಅಭ್ಯರ್ಥಿಗಳ ಮುಖಾಮುಖಿಯನ್ನು ಕಂಡಿದೆ.

ಆಮ್ ಆದ್ಮಿ ಪಕ್ಷವು ಚೊಚ್ಚಲ ಬಾರಿ ಸ್ಪರ್ಧೆ ಮಾಡಿದ್ದು, ಕಳೆದ ವರ್ಷ ಬಿಜೆಪಿಯನ್ನು ತೊರೆದ ಕರ್ಸನ್ ಕರ್ಮೂರ್ ಅವರನ್ನು ಕಣಕ್ಕಿಳಿಸಿತ್ತು.

ರವೀಂದ್ರ ಜಡೆಜಾ ಪತ್ನಿಯ ಸ್ಪರ್ಧೆಯಿಂದ ಹೆಚ್ಚು ಸದ್ದು ಮಾಡಿದ ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ರಿವಾಬಾ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ರವೀಂದ್ರ ಜಡೆಜಾ ಸಹೋದರಿ ಮತ್ತು ಮಾವ ಕಾಂಗ್ರೆಸ್ ಅಭ್ಯರ್ಥಿ ಬಿಪೇಂದ್ರಸಿನ್ಹ ಪರ ಪ್ರಚಾರ ನಡೆಸಿದರು.

ಡಿಸೆಂಬರ್ 1ರಂದು ಮತದಾನ ನಡೆದ ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ 2.61 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಜಾಮ್‌ನಗರ ಪುರಸಭೆಯ 16 ವಾರ್ಡ್ ಪ್ರದೇಶದಲ್ಲಿ ವ್ಯಾಪಿಸಿದೆ.

PKL 2022: ಭರತ್ ಮಿಂಚಿನ ದಾಳಿ; ಪಾಟ್ನಾ ಪೈರೇಟ್ಸ್ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಬುಲ್ಸ್PKL 2022: ಭರತ್ ಮಿಂಚಿನ ದಾಳಿ; ಪಾಟ್ನಾ ಪೈರೇಟ್ಸ್ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಬುಲ್ಸ್

2.61 ಲಕ್ಷಕ್ಕೂ ಹೆಚ್ಚಿನ ಮತದಾರರಲ್ಲಿ ಕ್ಷತ್ರಿಯರು 30,000, ಅಲ್ಪಸಂಖ್ಯಾತರು ಸುಮಾರು 40,000 ಮತದಾರರನ್ನು ಹೊಂದಿದ್ದಾರೆ. ಸುಮಾರು 19,000 ಪರಿಶಿಷ್ಟ ಜಾತಿ (ಎಸ್‌ಸಿ) ಮತದಾರರಿದ್ದು, ಪಾಟಿದಾರ್ ಮತದಾರರ ಸಂಖ್ಯೆ 17,000 ಆಗಿದೆ. ರಿವಾಬಾ ಜಡೇಜಾ ಕ್ಷತ್ರಿಯ ಸಮುದಾಯಕ್ಕೆ ಸೇರಿದವರು.

For Quick Alerts
ALLOW NOTIFICATIONS
For Daily Alerts
Story first published: Thursday, December 8, 2022, 11:52 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X