ಚೊಚ್ಚಲ ಐಪಿಎಲ್ ನಲ್ಲೇ ರೈನಾ-ಲಯನ್ಸ್ ಮಹತ್ತರ ಸಾಧನೆ
ಕಾನ್ಪುರ, ಮೇ 22: ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿರುವ ಗುಜರಾತ್ ಲಯನ್ಸ್ ತಂಡ ಮೊದಲ ಎಂಟ್ರಿಯಲ್ಲೇ ಪ್ಲೇ ಆಫ್ ಹಂತ ತಲುಪಿದೆ. ಈ ಸಾಧನೆಯಲ್ಲಿ ನಾಯಕ ಸುರೇಶ್ ರೈನಾ ಅವರ ಪಾತ್ರ ದೊಡ್ಡದು.
ಅದರಲ್ಲೂ ಲೀಗ್ ನ ಕೊನೆ ಹಂತದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಟೂರ್ನಿಯಿಂದ ಹೊರಕ್ಕೆ ದಬ್ಬಿ, ಪ್ಲೇ ಆಫ್ ಗೆ ಗುಜರಾತ್ ಅರ್ಹತೆ ಪಡೆದುಕೊಂಡಿರುವುದು ಗಮನಾರ್ಹ.[]
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
2009ರ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ನ ಲೀಗ್ ಹಂತದಲ್ಲೇ ಮುಂಬೈ ನಿರ್ಗಮನ ಕಾಣುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದ ಗುಜರಾತ್ ಲಯನ್ಸ್ ತಂಡ ವಿಜಯೋತ್ಸವ ಆಚರಿಸಿದೆ. [ಕೊಹ್ಲಿ ನಂತರ ರೈನಾ ದಾಖಲೆ ರನ್ ಸರದಾರ]
ಮುಂಬೈ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಬೇರೆ ತಂಡಗಳ ಫಲಿತಾಂಶದ ಮೇಲೆ ಕಣ್ಣಿಡಬೇಕಿದೆ. ಸನ್ರೈಸರ್ಸ್ ವಿರುದ್ಧ ಕೆಕೆಆರ್ ತಂಡವು 150 ರನ್ಗಿಂತ ಹೆಚ್ಚು ಅಂತರದಲ್ಲಿ ಸೋತಲ್ಲಿ ಮಾತ್ರ ಮುಂಬೈಗೆ ಪ್ಲೇ ಆಫ್ ಕನಸು ಕಾಣಬಹುದು. [ಅಂಕ ಪಟ್ಟಿ]

ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡ ನಿತೀಶ್ ರಾಣಾ ನಿತೀಶ್ ರಾಣಾ 70 ರನ್(36 ಎಸೆತ, 7 X4, 4X6) ನೆರವಿನಿಂದ 8 ವಿಕೆಟ್ಗೆ 172ರನ್ ಪೇರಿಸಿತು. ಗುಜರಾತ್ ಲಯನ್ಸ್ ತಂಡ 17.5 ಓವರ್ಗಳಲ್ಲಿ 4 ವಿಕೆಟ್ಗೆ 173 ಗೆಲುವು ಸಾಧಿಸಿತು. [ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]
ನಾಯಕ ಸುರೇಶ್ ರೈನಾ 58 ರನ್(36 ಎಸೆತ, 8X4, 2X6) ಹಾಗೂ ಬ್ರೆಂಡನ್ ಮೆಕ್ಕಲಂ 48 ರನ್(27 ಎಸೆತ, 8 X4, 1X6) ಬ್ಯಾಟಿಂಗ್ ನೆರವಿನಿಂದ ಲಯನ್ಸ್ ಘರ್ಜಿಸಿದರು. ಕೊನೆ ಹಂತದಲ್ಲಿ ಡ್ವೇನ್ ಸ್ಮಿತ್ 37ರನ್(23 ಎಸೆತ, 4X4, 2X6) ಹಾಗೂ ರವೀಂದ್ರ ಜಡೇಜಾ 20 ರನ್(14 ಎಸೆತ, 4X4) 5ನೇ ವಿಕೆಟ್ಗೆ 33 ಎಸೆತದಲ್ಲಿ ಮುರಿಯದ 51 ರನ್ ಜತೆಯಾಟ ಸಾಧಿಸಿ, ಗೆಲುವಿನ ದಡ ಮುಟ್ಟಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications