GT vs DC: ಸ್ಥಿರ ಪ್ರದರ್ಶನ ನೀಡುತ್ತಿರುವ ಗುಜರಾತ್ ಸವಾಲು ಎದುರಿಸಲಿದೆ ಕ್ಯಾಪಿಟಲ್ಸ್
18ನೇ ಆವೃತ್ತಿಯ ಐಪಿಎಲ್ ಪುನರಾರಂಭವಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ ಪಂದ್ಯ ರದ್ದಾಗಿತ್ತು. ಐಪಿಎಲ್ ಒಂದು ವಾರದ ಬಳಿಕ ಆರಂಭವಾಗಿದೆ. ಮೊದಲ ಪಂದ್ಯ ಮಳೆಗೆ ಆಹುತಿ ಆಗಿದ್ದು, ಎಲ್ಲರ ಚಿತ್ತ ಭಾನುವಾರದ ಪಂದ್ಯದ ಮೇಲೆ ನೆಟ್ಟಿದೆ. ಮೇ 18 ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವ ಸಾಧಿಸುವ ಪ್ಲ್ಯಾನ್ ಹಾಕಿಕೊಂಡಿವೆ.
ಗುಜರಾತ್ ಪ್ರಸಕ್ತ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಟೈಟನ್ಸ್ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಗುಜರಾತ್ 3 ಪಂದ್ಯಗಳನ್ನು ಆಡಲಿದ್ದು, ಈ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದಲ್ಲಿ 18 ಅಂಕಗಳನ್ನು ಕಲೆ ಹಾಕಿ ಪ್ಲೇ ಆಫ್ ಪ್ರವೇಶಿಸುತ್ತದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ 13 ಅಂಕ ಕಲೆ ಹಾಕಿದೆ. ಡೆಲ್ಲಿ ಇನ್ನು ಮೂರು ಪಂದ್ಯಗಳನ್ನು ಆಡಬೇಕಿದ್ದು, ಈ ಎಲ್ಲ ಪಂದ್ಯಗಳನ್ನು ಗೆದ್ದಾಗ ಮಾತ್ರ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ.

ಕನ್ನಡಿಗರ ಬಲ
ಪ್ರಸಕ್ತ ಬಾರಿಯ ಐಪಿಎಲ್‌ನ್ನು ಅಮೋಘವಾಗಿ ಆರಂಭಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಮುಂದೆ ಸಾಗಿದಂತೆ ಅಂಕ ಪಟ್ಟಿಯಲ್ಲಿ ಇಳಿ ಮುಖ ಕಂಡಿದೆ. ಡೆಲ್ಲಿ ಸದ್ಯ 5ನೇ ಸ್ಥಾನದಲ್ಲಿದೆ. ಡೆಲ್ಲಿ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಆರಂಭಿಕರಾಗಿ ಫಾಫ್ ಡುಪ್ಲೇಸಿಸ್, ಅಭಿಷೇಕ್ ಪೋರೆಲ್ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗರಾದ ಕರುಣ್ ನಾಯರ್, ಕೆಎಲ್ ರಾಹುಲ್ ತಂಡಕ್ಕೆ ಆಧಾರವಾಗಿದ್ದಾರೆ. ಇನ್ನು ಆಶುತೋಷ್ ಶರ್ಮಾ ಹಾಗೂ ಟ್ರಿಸ್ಟನ್ ಸ್ಟಬ್ಸ್ ಸಹ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಬೇಕಿದೆ.
ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ನಾಯಕ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರಿಗೆ ವಿಪ್ರಜ್ ನಿಗಮ್ ಸಾಥ್ ನೀಡುತ್ತಿದ್ದು ತಂಡದ ಭರವಸೆ ಹೆಚ್ಚಿಸಿದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕುಲ್‌ದೀಪ್ ಯಾದವ್ ಎದುರಾಳಿಗಳನ್ನು ಕಾಡಬಲ್ಲ ಬೌಲರ್. ವೇಗದ ಬೌಲರ್‌ಗಳಾದ ದುಶಂತ್ ಚಮೀರಾ, ಟಿ.ನಟರಾಜನ್ ಬಿಗುವಿನ ದಾಳಿ ನಡೆಸಬೇಕಿದೆ.

ಸಂಘಿಟತ ಆಟವೇ ಶಕ್ತಿ
ಪ್ರಸಕ್ತ ಐಪಿಎಲ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡುತ್ತಿರುವ ಗುಜರಾತ್ ಟೈಟನ್ಸ್ ಮತ್ತೊಮ್ಮೆ ಪ್ಲೇ ಆಫ್ ಪ್ರವೇಶಿಸುವ ಹೊಸ್ತಿಲಲ್ಲಿದೆ. ಸಾಯಿ ಸುದರ್ಶನ್, ನಾಯಕ ಶುಭಮನ್ ಗಿಲ್, ಜೋಸ್ ಬಟ್ಲರ್, ಟಾಪ್ ಆರ್ಡರ್‌ನಲ್ಲಿ ರನ್ ಕಲೆ ಹಾಕುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಕರ್ನಾಟಕದ ಸ್ಟಾರ್ ಬೌಲರ್ ಪ್ರಸಿದ್ಧ್ ಕೃಷ್ಣ ಬಿಗುವಿನ ದಾಳಿ ನಡೆಸಬೇಕಿದೆ. ಸ್ಪಿನ್ ಬೌಲರ್‌ಗಳಾಗಿ ರಶೀದ್ ಖಾನ್ ಹಾಗೂ ಸಾಯಿ ಕಿಶೋರ್ ಕಾಣಿಸಿಕೊಳ್ಳಲಿದ್ದು ಎದುರಾಳಿಗಳನ್ನು ತಮ್ಮ ಪಿರ್ಕಿ ಮೂಲಕ ಕಾಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications