ಮೇ 17 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪುನರಾರಂಭವಾಗಲಿದೆ. ಒಂದು ವಾರ ಸ್ಥಗತಿಗೊಂಡಿದ್ದ ಐಪಿಎಲ್ ವೇಳಾ ಪಟ್ಟಿಯಲ್ಲಿ ಯಾರು ಅಗ್ರ ಸ್ಥಾನದಲ್ಲಿದ್ದಾರೆ. ಯಾರಿಗೆ ಪ್ಲೇ ಆಫ್ ಪ್ರವೇಶಿಸುವ ಆಸೆ ಹೆಚ್ಚಿದೆ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಐಪಿಎಲ್‌ನ ಅಂಕಿ ಪಟ್ಟಿಯಲ್ಲಿ ಸದ್ಯ ಗುಜರಾತ್ ಟೈಟಾನ್ಸ್ ತಂಡ ಅಗ್ರ ಸ್ಥಾನದಲ್ಲಿದೆ. ಜಿಟಿ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಆಡಿದ 11 ಪಂದ್ಯಗಳಲ್ಲಿ 8 ಜಯ, 3 ಸೋಲು ಕಂಡಿದ್ದು (0.793 ರನ್ ರೇಟ್) 16 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇನ್ನು ಆರ್‌ಸಿಬಿ ತಂಡ ಸಹ ಇಷ್ಟೇ ಪಂದ್ಯಗಳನ್ನು ಆಡಿದ್ದು 16 ಅಂಕಗಳನ್ನು ಕಲೆ ಹಾಕಿದೆ. ಆದರೆ ಆರ್‌ಸಿಬಿ (0.482 ರನ್ ರೇಟ್) ರನ್ ರೇಟ್ ವಿಚಾರದಲ್ಲಿ ಗುಜರಾತ್‌ಗಿಂತ ಹಿಂದಿದ್ದು ಎರಡನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಪ್ಲೇ ಆಫ್ ಪ್ರವೇಶಿಸುವುದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ.

ಗುಜರಾತ್ ಟೈಟನ್ಸ್ ಹಾಗೂ ಆರ್‌ಸಿಬಿ ತಂಡಗಳು ಐಪಿಎಲ್‌ನ ಲೀಗ್ ಹಂತದಲ್ಲಿ ಇನ್ನು ಮೂರು ಪಂದ್ಯಗಳನ್ನು ಆಡಲಿವೆ. ಈ ವೇಳೆ ಮೂರರಲ್ಲಿ ಒಂದು ಪಂದ್ಯವನ್ನು ಗೆದ್ದರೂ ಸಹ ಉಭಯ ತಂಡಗಳು ಪ್ಲೇ ಆಫ್‌ಗೆ ಸುಲಭವಾಗಿ ಅರ್ಹತೆ ಪಡೆಯಲಿವೆ. ಇನ್ನು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಸಹ ಪ್ಲೇ ಆಫ್ ಪ್ರವೇಶಿಸುವ ಕನಸಿನಲ್ಲಿದೆ. ಅಲ್ಲದೆ ಈ ತಂಡಕ್ಕೂ ಮುಂದಿನ ಹಂತ ಪ್ರವೇಶಿಸುವ ಅವಕಾಶ ಹೆಚ್ಚಿದೆ. ಈ ವೇಳೆ ಪಂಜಾಬ್ ಬುಟ್ಟಿಯಲ್ಲಿ 15 ಅಂಕಗಳಿದ್ದು, ರನ್ ರೇಟ್ ಸಹ ಉತ್ತಮವಾಗಿದೆ. ಶ್ರೇಯಸ್ ಅಯ್ಯರ್ ಪಡೆ ಮುಂದಿನ ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿದ್ದೆ ಆದ್ರೆ ಪಂಜಾಬ್ ಸಹ ಪ್ಲೇ ಆಫ್‌ಗೆ ಸುಲಭವಾಗಿ ಪ್ರವೇಶಿಸಬಹುದು.
ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಸಹ ಪ್ಲೇ ಆಫ್ ಮೇಲೆ ಕಣ್ಣು ನೆಟ್ಟಿವೆ. ಇನ್ನು ಮುಂಬೈ 12 ಪಂದ್ಯಗಳನ್ನು ಆಡಿದ್ದು 7 ಜಯದೊಂದಿಗೆ 14 ಅಂಕವನ್ನು ಕಲೆ ಹಾಕಿದೆ. ಮುಂಬೈ ಸತತ ಪಂದ್ಯಗಳನ್ನು ಗೆದ್ದಿರುವ ಆತ್ಮ ವಿಶ್ವಾಸದಲ್ಲಿದೆ. ಉಳಿದ ಎರಡು ಪಂದ್ಯಗಳನ್ನು ಮುಂಬೈ ಗೆದ್ದಿದ್ದೆ ಆದಲ್ಲಿ ನೇರವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.

ಮುಂದಿನ ಹಂತದ ಮೇಲೆ ಕಣ್ಣು ನೆಟ್ಟಿರುವ ಆಟಗಾರರಲ್ಲಿ ಕೆಕೆಆರ್, ಎಲ್ಎಸ್‌ಜಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೇರಿವೆ. ಡೆಲ್ಲಿ ಆಡಿದ 11 ಪಂದ್ಯಗಳಲ್ಲಿ 13 ಅಂಕ ಕಲೆ ಹಾಕಿದೆ. ಮುಂದಿನ ಮೂರು ಪಂದ್ಯಗಳನ್ನು ಡೆಲ್ಲಿ ಗೆದ್ದಿದ್ದೇ ಆದಲ್ಲಿ ಪ್ಲೇ ಆಫ್ ಪ್ರವೇಶಿಸುವ ಚಾನ್ಸ್ ಹೆಚ್ಚಿದೆ. ಇನ್ನು ಕೆಕೆಆರ್ ಸಹ ಅಂಕಿ ಅಂಶಗಳ ಲೆಕ್ಕಾಚಾರದತ್ತ ಮುಖ ಮಾಡಿದೆ. ಕೆಕೆಆರ್ ಬಳಿ 11 ಅಂಕಳಿದ್ದು, ಮುಂಬರುವ 2 ಪಂದ್ಯಗಳನ್ನು ಗೆದ್ದಲ್ಲಿ ಮುಂದಿನ ಹಂತದ ಲೆಕ್ಕಾಚಾರವನ್ನು ಆರಂಭಿಸಲಿದೆ. ಇನ್ನು ಎಲ್‌ಎಸ್‌ಜಿ ಸಹ 11 ಪಂದ್ಯಗಳಿಂದ 10 ಅಂಕ ಕಲೆ ಹಾಕಿದೆ. ಮುಂದಿನ ಮೂರು ಪಂದ್ಯಗಳನ್ನು ಎಲ್‌ಎಸ್‌ಜಿ ಗೆದ್ದಿದ್ದೇ ಆದಲ್ಲಿ 16 ಅಂಕಗಳನ್ನು ಕಲೆ ಹಾಕುತ್ತದೆ. ಆಗ ಪ್ಲೇ ಆಫ್ ಪ್ರವೇಶಿಸಬಹುದು.
ಎಸ್‌ಆರ್‌ಎಚ್,ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ಆಸೆಯಿಂದ ದೂರ ಸರಿದಿವೆ.