Turning Point: ಗುಜರಾತ್ ಸೋಲಿಗೆ ಏನು ಕಾರಣ? ಇಲ್ಲಿದೆ ಅಸಲಿ ರೀಸನ್
ಲಕ್ನೋ ಸೂಪರ್ ಜೈಂಟ್ಸ್ ಸಂಘಟಿತ ಆಟದ ಪ್ರದರ್ಶನ ನೀಡಿ ಐಪಿಎಲ್‌ನಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ. ಈ ಜಯದಲ್ಲಿ ಎಲ್‌ಎಸ್‌ಜಿ ಪರ ನಿಕೋಲಸ್ ಪೂರನ್ ಹಾಗೂ ಏಡೆನ್ ಮಾರ್ಕ್ರಮ್ ಭರ್ಜರಿ ಅರ್ಧಶತಕ ಗೆಲುವಿನಲ್ಲಿ ಉಪಯುಕ್ತ ಕಾಣಿಕೆ ನೀಡಿತು. ಗುಜರಾತ್ ವಿರುದ್ಧ ಸೋಲು ಏನು ಕಾರಣ ಎಂಬ ಲೆಕ್ಕಾಚಾರ ಆರಂಭವಾಗಿದೆ. ಇದಕ್ಕೆ ಕಾರಣ ಎಲ್‌ಎಸ್‌ಜಿ ಬ್ಯಾಟಿಂಗಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಲ್‌ಎಸ್‌ಜಿ 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 186 ರನ್ ಸೇರಿಸಿ ಜಯ ಸಾಧಿಸಿತು. ಲಕ್ನೋ ಗೆಲುವು ಸಾಧಿಸಲು ಆ ಒಂದು ಹಂತವನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದೇ ದೊಡ್ಡ ಕಾರಣ.

ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡದ ಆರಂಭ ಸಹ ಉತ್ತಮವಾಗಿತ್ತು. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆರಂಭಿಕರಾಗಿ ಕಾಣಿಸಿಕೊಂಡ ರಿಷಭ್ ಪಂತ್, ಏಡೆನ್ ಮಾರ್ಕ್ರಮ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿ ಅಬ್ಬರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 65 ರನ್ ಸೇರಿಸಿತು. ಈ ವೇಳೆ ರಿಷಭ್ ಪಂತ್ (21) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಆದರೆ ಏಡೇನ್ ಮಾರ್ಕ್ರಮ್ ಹಾಗೂ ನಿಕೋಲಸ್ ಪೂರನ್ ಜೋಡಿ ಅಬ್ಬರಿಸಿತು. ಮಾರ್ಕ್ರಮ್ 58, ನಿಕೋಲಸ್ ಪೂರನ್ 61 ರನ್ ಬಾರಿಸಿ ಮಿಂಚಿದರು. ಈ ಅಂಶ ನಿಜಕ್ಕೂ ಗೆಲುವಿನ ಕಾರಣ ಅಲ್ಲವೇ ಅಲ್ಲ.

ಇದುವೇ ಸೋಲಿಗೆ ಕಾರಣ
ಗುಜರಾತ್ ಟೈಟನ್ಸ್ ಪರ ಆರಂಭಿಕರಾಗಿ ಕಾಣಿಸಿಕೊಂಡ ಶುಭಮನ್ ಗಿಲ್, ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 120 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಸುದರ್ಶನ್ 56 ಹಾಗೂ ಶುಭಮನ್ ಗಿಲ್ 60 ರನ್ ಸೇರಿಸಿ ಅಬ್ಬರಿಸಿತು. ಮೊದಲ ವಿಕೆಟ್ 12.1 ಓವರ್‌ಗೆ ಬಿದ್ದಿತು. ಆದರೆ ಇಲ್ಲಿಂದ ಗುಜರಾತ್ ಟೈಟನ್ಸ್ ರನ್‌ಗಳನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಕೊನೆಯ ೮ ಓವರ್‌ಗಳಲ್ಲಿ ೫೬ ರನ್ ಸೇರಿಸಿ ೬ ವಿಕೆಟ್ ಕಳೆದುಕೊಂಡಿತು. ನಿಶ್ಚಿತವಾಗಿಯೂ ಗುಜರಾತ್ ದೊಡ್ಡ ಮೊತ್ತದ ಕನಸಿಗೆ ಪೆಟ್ಟು ಬಿದ್ದಿತು. ಇದೇ ಗುಜರಾತ್ ಸೋಲಿಗೆ ಪ್ರಮುಖ ಕಾರಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications