MI vs GT: ರೋಚಕ ಪಂದ್ಯವನ್ನು ಗೆದ್ದ ಗುಜರಾತ್‌ಗೆ ಅಗ್ರ ಸ್ಥಾನ: ಮುಂಬೈ ಗೆಲುವಿನ ಓಟಕ್ಕೆ ಬ್ರೇಕ್
ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಬಹು ರೋಚಕತೆಯಿಂದ ಕೂಡಿತ್ತು. ಇನ್ನು ಅಭಿಮಾನಿಗಳು ಈ ಪಂದ್ಯವನ್ನು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು. ಈ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲ್ಲಲು 15 ರನ್ ಅವಶ್ಯಕತೆ ಇತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ತಂಡಕ್ಕೆ ರನ್ ಕಲೆ ಹಾಕಿ ಮಿಂಚಿದರು. ಈ ಮೂಲಕ ಪೂರ್ಣ ಎರಡು ಅಂಕ ಕಲೆ ಹಾಕಿದ ಟೈಟಾನ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯಿತು.
ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಸೇರಿಸಿತು. ಮಳೆ ಪಂದ್ಯದ ವೇಳೆ ಹಲವು ಬಾರಿ ಕಾಟ ನೀಡಿದ್ದರಿಂದ ಒಂದು ಒವರ್ ಕತ್ತರಿ ಬಿದ್ದಿತು. ಗುಜರಾತ್ 19 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಸೇರಿಸಿ ಅಬ್ಬರಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಸತತ ಪಂದ್ಯಗಳ ಗೆಲುವಿಗೆ ಗುಜರಾತ್ ಬ್ರೇಕ್ ಹಾಕಿತು. ಮುಂಬೈ ಈ ಸೋಲಿನ ಬಳಿಕ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಮೂರನೇ ವಿಕೆಟ್‌ಗೆ 72 ರನ್ ಜೊತೆಯಾಟ
ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರ ಸಾಯಿ ಸುದರ್ಶನ್ (5) ಒತ್ತಡವನ್ನು ಮೆಟ್ಟಿ ನಿಲ್ಲಲಿಲ್ಲ. ಇವರು ಟ್ರೆಂಟ್ ಬೌಲ್ಟ್ ಎಸೆತದಲ್ಲಿ ರಯಾನ್ ರಿಕಲ್ಟನ್ ಅವರಿಗೆ ಕ್ಯಾಚ್ ನೀಡಿದರು. ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು. ಅಲ್ಲದೆ ರನ್ ವೇಗಕ್ಕು ಚುರುಕು ಮುಟ್ಟಿಸಿತು. ಈ ಜೋಡಿ 63 ಎಸೆತಗಳಲ್ಲಿ 72 ರನ್ ಕಲೆ ಹಾಕಿತು. ಈ ವೇಳೆ ಜೋಸ್ ಬಟ್ಲರ್ (30) ಅಶ್ವನಿ ಕುಮಾರ್ ಎಸೆತದಲ್ಲಿ ರಯಾನ್ ರಿಕಲ್ಟನ್ ಕ್ಯಾಚ್ ನೀಡಿದರು.
43 ರನ್ ಬಾರಿಸಿ ಮುನ್ನುಗುತ್ತಿದ್ದ ಶುಭಮನ್ ಗಿಲ್ ಜಸ್ಪ್ರಿತ್ ಬುಮ್ರಾ ತೋಡಿದ ಖೆಡ್ಡಾಗೆ ಬಲಿಯಾದರು. ಶೆರ್ಫೇನ್ ರುದರ್ಫೋರ್ಡ್ (28) 2 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಇವರಿಗೆ ಟ್ರೆಂಟ್ ಬೌಲ್ಟ್ ಪೆವಿಲಿಯನ್ ಹಾದಿ ತೋರಿಸಿದರು. ಭರವಸೆಯ ಆಟಗಾರ ಶಾರುಖ್ ಖಾನ್ (6) ಜಸ್ಪ್ರಿತ್ ಬುಮ್ರಾ ಸೊಗಸಾದ ಎಸೆತಕ್ಕೆ ಉತ್ತರಿಸುವಲ್ಲಿ ವಿಫಲರಾದರು. ಅಂತಿಮವಾಗಿ ರಾಹುಲ್ ತೆವಟಿಯಾ, ಜೆರಾಲ್ಡ್ ಕೋಟ್ಜೀ ತಂಡಕ್ಕೆ ಅಗತ್ಯ ರನ್ ಕಲೆ ಹಾಕಿ ಮಿಂಚಿದರು.

ವಿಲ್ ಜಾಕ್ಸ್ ಅರ್ಧಶತಕ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ರಯಾನ್ ರಿಕಲ್ಟನ್ (2) ಹಾಗೂ ರೋಹಿತ್ ಶರ್ಮಾ (7) ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ವಿಲ್ ಜಾಕ್ಸ್ ಹಾಗೂ ಸೂರ್ಯಕುಮಾರ್ ಯಾದವ್ (35) ಜೋಡಿ 43 ಎಸೆತಗಳಲ್ಲಿ 71 ರನ್ ಸೇರಿಸಿತು. ವಿಲ್ ಜಾಕ್ಸ್ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿ ಔಟ್ ಆದರು.
ಕಾರ್ಬಿನ್ ಬಾಷ್ ಕೆಳ ಮಧ್ಯಮ ಕ್ರಮಾಂಕದಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಗುಜರಾತ್ ಪರ ಸಾಯಿ ಕಿಶೋರ್ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications