Kagiso Rabada: ಐಪಿಎಲ್ ಮಧ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ದೊಡ್ಡ ಪೆಟ್ಟು
ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿ ಆರಂಭವಾಗಿದೆ. ಎಲ್ಲ ತಂಡಗಳು ಗೆಲುವಿನ ಖಾತೆಯನ್ನು ಓಪನ್ ಮಾಡಿವೆ. ಬೆಂಗಳೂರು ಸಹ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದೆ. ಗುಜರಾತ್ ಸಹ ಮೂರು ಗೆಲುವು ದಾಖಲಿಸಿದ್ದು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ವೇಳೆ ಗುಜರಾತ್ ಟೈಟನ್ಸ್ ತಂಡಕ್ಕೆ ಆರಂಭದಲ್ಲೇ ಪೆಟ್ಟು ಬಿದ್ದಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವೈಯಕ್ತಿಕ ಕಾರಣದಿಂದ ಅಂಗಳದಿಂದ ದೂರ ಉಳಿದದ್ದ ವೇಗಿ ಈಗ ತವರಿನತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗುಜರಾತ್ ತಂಡಕ್ಕೆ ಆರಂಭದಲ್ಲಿ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ವೇಗದ ಬೌಲರ್ ಕಗಿಸೊ ರಬಾಡ ತಮ್ಮ ಮನೆಗೆ ಮರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರು ಮನೆ ಕಡೆ ಮುಖ ಮಾಡಿದ್ದು ಏಕೆ ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಇವರ ಈ ನಿರ್ಧಾರ ತಂಡಕ್ಕೆ ಭಾರೀ ನಷ್ಟವನ್ನು ಉಂಟುಮಾಡಲಿದೆ. ರಬಾಡಾ ವೈಯಕ್ತಿಕ ಕೆಲಸದ ಕಾರಣ ಇದ್ದಕ್ಕಿದ್ದಂತೆ ದಕ್ಷಿಣ ಆಫ್ರಿಕಾಕ್ಕೆ ಮರಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಕಗಿಸೋ ರಬಾಡಾ ವಾಪಸ್ ತಂಡಕ್ಕೆ ಹಿಂತಿರಗುತ್ತಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಅವರು ಬಂದ್ರೂ ಯಾವಾಗ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ವರ್ಷದ ಐಪಿಎಲ್‌ನಲ್ಲಿ ರಬಾಡಾ ಆಡಿದ ಎರಡೂ ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದರು. ಪಂಜಾಬ್ ವಿರುದ್ಧ ರಬಾಡ 41 ರನ್ ನೀಡಿ 1 ವಿಕೆಟ್ ಕಬಳಿಸಿದ್ದರೆ, ಮುಂಬೈ ಇಂಡಿಯನ್ಸ್ ಪರ 42 ರನ್‌ಗೆ 1 ವಿಕೆಟ್ ಪಡೆದಿದ್ದರು.
ವೇಗಿ ಹಿಂತಿರುಗುವುದು ಯವಾಗಾ?
ಬುಧವಾರ ಆರ್‌ಸಿಬಿ ವಿರುದ್ಧ ಗುಜರಾತ್ ಕಣಕ್ಕೆ ಇಳಿದಿತ್ತು. ಈ ವೇಳೆ ಕಗಿಸೋ ರಬಾಡ ಅವರ ಬದಲಗೆಇ ಅರ್ಷದ್ ಖಾನ್‌ಗೆ ಅವಕಾಶ ನೀಡಲಾಗಿತ್ತು. ಈ ಪಂದ್ಯದಲ್ಲಿ ರಬಾಡ ಇಲ್ಲದೇದ್ದರೂ ಗುಜರಾತ್ ಅಮೋಘ ಪ್ರದರ್ಶನ ನೀಡಿ 8 ವಿಕೆಟ್ ಜಯ ಸಾಧಿಸಿತ್ತು. ಈ ಮೂಲಕ ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸಿಗೆ ಬ್ರೇಕ್ ಬಿದ್ದಿದೆ. ಮುಂದಿನ ಪಂದ್ಯದಲ್ಲಿ ಗುಜರಾತ್ ಯಾವ ವಿದೇಶಿ ಆಟಗಾರರನ್ನು ಕಣಕ್ಕೆ ಇಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಗ್ಲೇನ್ ಫಿಲಿಪ್ಸ್ ಅವರು ಇನ್ನು ಬೆಂಚ್ ಕಾಯುತ್ತಿದ್ದು ಮುಂದಿನ ಪಂದ್ಯಗಳಲ್ಲಿ ಇವರಿಗೆ ಆಡುವ ಅವಕಾಶ ಸಿಗಬಹುದು.
ಗುಜರಾತ್ ಟೈಟಾನ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 6 ರಂದು ಆಡಲಿದೆ. ಗುಜರಾತ್ ತಂಡದಲ್ಲಿ ಜೆರಾಲ್ಡ್ ಕೋಟ್ಜೀ ಕೂಡ ಇದ್ದಾರೆ. ಕಗಿಸೋ ರಬಾಡ ಇಡೀ ಐಪಿಎಲ್‌ಗೆ ಲಭ್ಯರಾಗದೇ ಇದ್ದಲ್ಲಿ ಅವರ ಬದಲಿ ಆಟಗಾರನ ಹುಡುಕಾಟವನ್ನು ಜಿಟಿ ಮಾಡಲಿದೆ.

ಕಗಿಸೋ ರಬಾಡ ಈಗಾಗಲೇ ಐಪಿಎಲ್‌ನಲ್ಲಿ ಆಡಿರುವ 82 ಪಂದ್ಯಗಳಲ್ಲಿ 119 ವಿಕೆಟ್ ಪಡೆದಿದ್ದಾರೆ. ಈ ವೇಳೆ ಇವರು 21 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಅಮೋಘ ಸಾಧನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications