Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗುಜರಾತ್ ಟೈಟಾನ್ಸ್‌ಗೆ ಶುರುವಾಗಿದೆ ವೈಭವ್ ಸೂರ್ಯವಂಶಿ ಭಯ

ಬುಧವಾರ ನ್ಯೂ ಚಂಡೀಗಢ ಮೈಧಾನದಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರಾಜಸ್ಥಾನ್‌ ರಾಯಲ್ಸ್‌ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ರಾಜಸ್ಥಾನ್ ತಂಡ ಈ ಸಾಧನೆ ಮಾಡುವಲ್ಲಿ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಕೊಡುಗೆ ಅಪಾರ. ವಯಸ್ಸಿಗೆ ಮೀರಿದ ಪ್ರತಿಭೆ ಹೊಂದಿರುವ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಬುಧವಾರ ವೈಭವ್‌ ಸೂರ್ಯವಂಶಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ. ಇವರ ಆಟಕ್ಕೆ ಹೈದರಾಬಾದ್ ಬೌಲರ್‌ಗಳು ಬೆಚ್ಚಿ ಬಿದಿದ್ದಾರೆ. ಕೇವಲ 29 ಎಸೆತಗಳಲ್ಲಿ ವೈಭವ್ ಸೂರ್ಯವಂಶಿ 97 ರನ್‌ ಬಾರಿಸಿ ವೇಗದ ಶತಕವನ್ನು ಬಾರಿಸುವ ದಾಖಲೆಯನ್ನು ತಪ್ಪಿಸಿಕೊಂಡಿದ್ದಾರೆ. ವೈಭವ್‌ ಅವರ ಕ್ಲಾಸಿಕ್ ಬ್ಯಾಟಿಂಗ್‌ ಬಲದಿಂದ ರಾಜಸ್ಥಾನ್‌ ಈ ಪಂದ್ಯವನ್ನು ಗೆದ್ದುಕೊಂಡು ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ವೈಭವ್ ಆಡಿದ ಧಾಟಿ ಕಂಡು ಗುಜರಾತ್‌ ಟೈಟಾನ್ಸ್‌ಗೆ ಈಗ ಭಯ ಶುರುವಾಗಿದೆ.

Gujarat Titans

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ಗುಜರಾತ್ ಟೈಟಾನ್ಸ್‌ಗೆ ಫೈನಲ್‌ ಪ್ರವೇಶಿಸಲು ಇನ್ನೊಂದು ಅವಕಾಶ ಸಿಗಲಿದೆ. ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌, ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ವೇಳೆ ಸಿಕ್ಸರ್‌ಗಳನ್ನು ನೀರು ಕುಡಿದಷ್ಟೇ ಸರಾಗವಾಗಿ ಬಾರಿಸುವ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಬ್ರೆಕ್‌ ಹಾಕುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ.

ನ್ಯೂ ಚಂಡೀಗಢದಲ್ಲಿ ವೈಭವ್ ಸುನಾಮಿಗೆ ನುಚ್ಚುನೂರಾದ ಪ್ರಮುಖ 5 ದಾಖಲೆಗಳು

ನ್ಯೂ ಚಂಡೀಗಢದಲ್ಲಿ ವೈಭವ್ ಸುನಾಮಿಗೆ ನುಚ್ಚುನೂರಾದ ಪ್ರಮುಖ 5 ದಾಖಲೆಗಳು

ಗುಜರಾತ್ ವಿರುದ್ಧ ವೈಭವ್ ಸಾಧನೆ

ವೈಭವ್ ಸೂರ್ಯವಂಶಿ ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಈ ಹಿಂದೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಟೈಟಾನ್ಸ್‌ ವಿರುದ್ಧ ಆಡಿದ 3 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 168 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 233 ಆಗಿದೆ. ಇವರು ಗುಜರಾತ್‌ ವಿರುದ್ಧ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಶತಕ ಸಹ ಬಾರಿಸಿದ್ದಾರೆ.

ಒಂದೇ ಐಪಿಎಲ್‌ ಆವೃತ್ತಿಯಲ್ಲಿ 65 ಸಿಕ್ಸರ್ ಬಾರಿಸಿ ಗೇಲ್‌ ದಾಖಲೆ ಅಳಿಸಿದ ವೈಭವ್ ಸೂರ್ಯವಂಶಿ

ಒಂದೇ ಐಪಿಎಲ್‌ ಆವೃತ್ತಿಯಲ್ಲಿ 65 ಸಿಕ್ಸರ್ ಬಾರಿಸಿ ಗೇಲ್‌ ದಾಖಲೆ ಅಳಿಸಿದ ವೈಭವ್ ಸೂರ್ಯವಂಶಿ

ಮೊದಲ ಬಾರಿಯ ಐಪಿಎಲ್‌ಗೆ ಹೋಲಿಸಿದರೆ ಈ ಆವೃತ್ತಿಯಲ್ಲಿ ವೈಭವ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಇವರು ಆಡಿದ 15 ಪಂದ್ಯಗಳಲ್ಲಿ 242ರ ಸ್ಟ್ರೈಕ್ ರೇಟ್‌ನಲ್ಲಿ 680 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 4 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ವೈಭವ್‌ ಈ ಆವೃತ್ತಿಯಲ್ಲಿ 55 ಬೌಂಡರಿ, 65 ಸಿಕ್ಸರ್‌ ಸಿಡಿಸಿದ್ದಾರೆ. ಇದೇ ಆಟವನ್ನು ಇವರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂದುವರಿಸಿ ತಂಡವನ್ನು ಇನ್ನೊಮ್ಮೆ ಫೈನಲ್‌ಗೆ ಕೊಂಡೊಯ್ದು ನಿಲ್ಲಿಸುವ ಕನಸು ಕಾಣುತ್ತಿದ್ದಾರೆ. ಈ ಆಸೆ ಫಲಿಸುತ್ತದಾ ಎಂದು ಕಾದು ನೋಡಬೇಕಿದೆ.

Story first published: Thursday, May 28, 2026, 8:00 [IST]
Other articles published on May 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+