Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಚಲನ ಮೂಡಿಸಿದ ಗುಜರಾತ್ ಬೌಲರ್‌: ಈ ಐಪಿಎಲ್‌ನ ವೇಗದ ಎಸೆತ ಎಸೆದ ಅಶೋಕ್‌ ಶರ್ಮಾ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭವಾಗಿದೆ. ಈ ಲೀಗ್‌ನಲ್ಲಿ ಅನುಭವಿ ಹಾಗೂ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಹಲವು ಪ್ರತಿಭಾನ್ವಿತ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುತ್ತಿದ್ದಾರೆ. ಅಲ್ಲದೆ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಈ ಸಾಲಿಗೆ ಸೇರುವ ಹಲವು ಕ್ರಿಕೆಟ್‌ ಆಟಗಾರರಲ್ಲಿ ಈಗ ಗುಜರಾತ್‌ ಟೈಟಾನ್ಸ್ ತಂಡದ ವೇಗದ ಬೌಲರ್‌ ಅಶೋಕ್‌ ಶರ್ಮಾ ಸೇರಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡದ ಪರ ಆಡುವ ಅವಕಾಶವನ್ನು ಪಡೆದ 23 ವರ್ಷದ ವೇಗದ ಬೌಲರ್‌ ಅಶೋಕ್‌ ಶರ್ಮಾ ತಮ್ಮ ಬಿಗುವಿನ ದಾಳಿಯಿಂದ ಹೆಸರುವಾಸಿಯಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲೂ ಅಶೋಕ್‌ ಶರ್ಮಾ ಗನ್‌ ಸ್ಪೀಡ್‌ನಲ್ಲಿ ಬೌಲಿಂಗ್‌ ನಡೆಸಿ ಎಲ್ಲರ ಚಿತ್ತವನ್ನು ಕದಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಅಶೋಕ್ ಶರ್ಮಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಅವಕಾಶವನ್ನು ಪಡೆದರು. ಇವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು.

Gujarat Titans

ಅಶೋಕ್‌ ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಡೊನೊವನ್ ಫೆರೀರಾ ಅವರಿಗೆ 150.7 ಗಂಟೆಗೆ ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್ ನಡೆಸಿದರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ಅಶೋಕ್‌ 154.2 ಗಂಟೆಗೆ ಕಿಲೋ ಮೀಟರ್‌ ವೇಗದಲ್ಲಿ ದಾಳಿ ನಡೆಸಿ ಎಲ್ಲರ ಚಿತ್ತ ಕದ್ದರು. ಈ ಎಸೆತವನ್ನು ಧ್ರುವ್ ಜುರೇಲ್‌ ಡಿಫೆನ್ಸ್‌ ಮಾಡಿದರು. ಈ ಎಸೆತ ಪ್ರಸಕ್ತ ಐಪಿಎಲ್‌ನ ವೇಗದ ಎಸೆತವಾಗಿದೆ. ಇವರಿಗಿಂತಲೂ ಮೊದಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ಅನ್ರಿಚ್ ನಾರ್ಟ್ಜೆ 150.9 ವೇಗದಲ್ಲಿ ಬೌಲಿಂಗ್ ನಡೆಸಿದ್ದರು.

ಈಗ ಅಶೋಕ್‌ ಶರ್ಮಾ ಅವರ ಬಗ್ಗೆ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ. ಇವರು ರಾಜಸ್ಥಾನದ ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿದರು. ಇವರ ಸಹೋದರ ಅಶೋಕ್‌ ಶರ್ಮಾ ಅವರ ಕ್ರಿಕೆಟ್‌ ಪ್ರೀತಿಗೆ ನೀರು ಹಾಕಿ ಪೋಷಿಸಿದರು. ಅಶೋಕ್ ಅವರ ತಂದೆ ಸಹ ಕ್ರಿಕೆಟ್‌ ಆಟಗಾರನಾಗುವ ಕನಸು ಕಂಡಿದ್ದರು. ಆದರೆ ತಂದೆಯ ಕನಸನ್ನು ಮಗ ನೆರವೇರಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ವೇಗದ ದಾಳಿ ನಡೆಸಿದ ಬೌಲರ್ಸ್‌ (ಗಂಟೆಗೆ ಕಿಲೋ ಮೀಟರ್ ವೇಗ)

ಅಶೋಕ್‌ ಶರ್ಮಾ, ಗುಜರಾತ್‌ ಟೈಟಾನ್ಸ್‌, 154.2
ಅನ್ರಿಚ್ ನಾರ್ಟ್ಜೆ, ಲಕ್ನೋ ಸೂಪರ್ ಜೈಂಟ್ಸ್‌, 150.9
ಕಾರ್ತಿಕ್ ತ್ಯಾಗಿ, ಕೋಲ್ಕತ್ತ ನೈಟ್ ರೈಡರ್ಸ್‌, 149.7
ಕಗಿಸೋ ರಬಾಡ, ಗುಜರಾತ್ ಟೈಟಾನ್ಸ್‌, 149.1
ಜೇಮಿ ಓವರ್‌ಟನ್‌, ಚೆನ್ನೈ ಸೂಪರ್ ಕಿಂಗ್ಸ್‌, 145.6


ಭಾರತದ ಪರ ಐಪಿಎಲ್‌ನಲ್ಲಿ ವೇಗದ ದಾಳಿ ನಡೆಸಿದ ಬೌಲರ್ಸ್

ಉಮ್ರಾನ್‌ ಮಲಿಕ್‌, ಗಂಟೆಗೆ 157 ಕಿ.ಮೀ
ಮಾಯಾಂಕ್ ಯಾದವ್, ಗಂಟೆಗೆ 156.70 ಕಿ.ಮೀ
ಉಮ್ರಾನ್ ಮಲಿಕ್, ಗಂಟೆಗೆ 156 ಕಿ.ಮೀ
ಮಾಯಾಂಕ್ ಯಾದವ್, ಗಂಟೆಗೆ 155.80 ಕಿ.ಮೀ
ಅಶೋಕ್ ಶರ್ಮಾ, ಗಂಟೆಗೆ 154.2 ಕಿ.ಮೀ

ಅಶೋಕ್‌ ಶರ್ಮಾ ಸಾಧನೆ

ಚೆಂಡನ್ನು ಎರಡೂ ಬದಿಯಲ್ಲಿ ಸ್ವಿಂಗ್ ಮಾಡುವ ಬೌಲರ್‌. ಇವರು ರಾಜಸ್ಥಾನ ತಂಡದ ಪರ ದೇಶೀಯ ಟೂರ್ನಿಗಳನ್ನು ಆಡಿದ ಆಟಗಾರ. ಇವರು ಈಗಾಗಲೇ 4 ಪ್ರಥಮ ದರ್ಜೆ, 7 ಲಿಸ್ಟ್‌ ಎ, 12 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು ಕೆಕೆಆರ್‌, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ 2026ರ ಐಪಿಎಲ್‌ ಹರಾಜಿನಲ್ಲಿ ಟೈಟಾನ್ಸ್‌ ಇವರಿಗೆ 90 ಲಕ್ಷ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರ ಬೌಲಿಂಗ್ ದಾಳಿಯನ್ನು ಈಗ ಕ್ರಿಕೆಟ್‌ ಜಗತ್ತು ಪ್ರಶಂಸಿಸುತ್ತಿದೆ.

Story first published: Sunday, April 5, 2026, 10:15 [IST]
Other articles published on Apr 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+