Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs LSG: ಅಗ್ರ ಸ್ಥಾನ ಭದ್ರ ಪಡಿಸಿಕೊಳ್ಳಲು ಗುಜರಾತ್ ಫೈಟ್

ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವ ಗುಜರಾತ್ ಟೈಟಾನ್ಸ್‌ ಹಾಗೂ ಪ್ಲೇ ಆಫ್‌ ರೇಸ್‌ನಿಂದ ದೂರ ಉಳಿದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಗುಜರಾತ್‌ ಕಾದಾಟ ನಡೆಸಲಿದೆ. ಎಲ್‌ಎಸ್‌ಜಿ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ.

ಜಿಟಿ ಹಾಗೂ ಎಲ್‌ಎಸ್‌ಜಿ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಭರ್ಜರಿ ಲಯದಲ್ಲಿರುವ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಮೇಲೆ ಭರವಸೆ ಹೆಚ್ಚಿದೆ. ಈ ವರೆಗೆ ಈ ಮೈದಾನದಲ್ಲಿ ಒಟ್ಟು 40 ಐಪಿಎಲ್‌ ಪಂದ್ಯಗಳು ನಡೆದಿದ್ದು, ಮೊದಲ ಬ್ಯಾಟ್ ಮಾಡಿದ ತಂಡ 19 ಬಾರಿ, ಚೇಸ್ ಮಾಡಿದ ತಂಡ 21 ಬಾರಿ ಪಂದ್ಯ ಗೆದ್ದಿವೆ. ಇನ್ನು ಟಾಸ್‌ ಗೆದ್ದ ತಂಡ 18 ಪಂದ್ಯಗಳನ್ನು ಗೆದ್ದಿದೆ. ಈ ಮೈದಾನದಲ್ಲಿ ದಾಖಲಾದ ಅತಿ ಹೆಚ್ಚು ಸ್ಕೋರ್‌ 243 ರನ್‌.

Gujarat Titans vs LSG Top-Spot Battle at Narendra Modi Stadium

ನರೇಂದ್ರ ಮೋದಿ ಮೈದಾನ ಬ್ಯಾಟರ್‌ಗಳಿಗೆ ಸಹಾಯ ನೀಡಲಿದೆ. ಇನ್ನು ವೇಗದ ಬೌಲರ್‌ಗಳಿಗೂ ಆರಂಭದಲ್ಲಿ ಪಿಚ್‌ ನೆರವು ನೀಡಲಿದೆ. ಇನ್ನು ಸ್ಪಿನ್ ಬೌಲರ್ಸ್‌ ಸಹ ಈ ಪಿಚ್‌ನ ಲಾಭ ಪಡೆಯಬಹುದಾಗಿದೆ. ಎರಡನೇ ಇನಿಂಗ್ಸ್‌ ವೇಳೆ ಇಬ್ಬನಿ ಬೀಳುವರಿಂದ ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಸಾಯಿ ಸುದರ್ಶನ ಆಕರ್ಷಣೆ

ಗುಜರಾತ್‌ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಪ್ರಸಕ್ತ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇವರಿಗೆ ಆರಂಭಿಕರಾಗಿ ಸಾಥ್ ನೀಡುವ ಶುಭಮನ್‌ ಗಿಲ್‌ ಸಹ ಭರ್ಜರಿ ಫಾರ್ಮ್‌ನಲ್ಲಿದ್ದು, ಈ ಇಬ್ಬರು ಆಟಗಾರರು ಆರೆಂಜ್‌ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಜೋಸ್ ಬಟ್ಲರ್‌, ಶೆರ್ಫೇನ್ ರುದರ್ಫೋರ್ಡ್, ರಾಹುಲ್ ತೆವಟಿಯಾ, ಶಾರುಖ್‌ ಖಾನ್‌ ಉತ್ತಮ ಲಯದಲ್ಲಿದ್ದು ತಂಡಕ್ಕೆ ನೆರವಾಗಬಲ್ಲರು.

Gujarat Titans vs LSG Top-Spot Battle at Narendra Modi Stadium

ವೇಗದ ಬೌಲಿಂಗ್‌ ನೊಗವನ್ನು ಹೊತ್ತಿರುವ ಮೊಹಮ್ಮದ್ ಸಿರಾಜ್‌ ಹಾಗೂ ಅರ್ಷದ್ ಖಾನ್‌ ಪವರ್‌ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಈ ಲೀಗ್‌ನಲ್ಲಿ ಸಿರಾಜ್‌ ಡಾಟ್‌ ಬೌಲ್‌ಗಳನ್ನು ಎಸೆದು ಬ್ಯಾಟರ್‌ಗಳನ್ನು ಕಾಡಿದ್ದಾರೆ. ಕಗಿಸೋ ರಬಾಡ, ಪ್ರಸಿದ್ಧ್ ಕೃಷ್ಣಾ ಸಹ ಮಿಡ್ಲ್ ಓವರ್‌ಗಳಲ್ಲಿ ಬಿಗುವಿನ ದಾಳಿ ಸಂಘಟಿಸಬಲ್ಲರು. ಸ್ಪಿನ್ ಬೌಲರ್‌ ರಾಶಿದ್ ಖಾನ್‌, ಸಾಯಿ ಕಿಶೋರ್‌ ತಮ್ಮ ಜಾದು ನಡೆಸಬೇಕಿದೆ.

ರಿಷಭ್ ಫಾರ್ಮ್‌ ಚಿಂತೆ

ರಿಷಭ್‌ ಪಂತ್‌ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ಎಲ್‌ಎಸ್‌ಜಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆರಂಭಿಕರಾದ ಮಿಚೆಲ್‌ ಮಾರ್ಷ್‌, ಐಡೆನ್‌ ಮಾರ್ಕ್ರಾಮ್‌ ಉತ್ತಮ ಆರಂಭ ನೀಡುತ್ತಿದ್ದಾರೆ. ನಿಕೋಲಸ್‌ ಪೂರನ್‌ ರನ್‌ಗಳನ್ನು ಕಲೆ ಹಾಕಿ ಎದುರಾಳಿಗಳನ್ನು ಕಾಡಬೇಕಿದೆ. ಉಳಿದ ಬ್ಯಾಟರ್‌ಗಳು ಜವಾಬ್ದಾರಿಯುತ ಆಟವನ್ನು ಆಡಿದರೆ ಗೆಲುವು ಫಿಕ್ಸ್‌. ಬೌಲರ್‌ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.

Story first published: Thursday, May 22, 2025, 10:08 [IST]
Other articles published on May 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+