ಅಫ್ಘಾನಿಸ್ತಾನ್ ವಿಶ್ವಕಪ್ ತಂಡಕ್ಕೆ ಗುಲ್ಬಾದಿನ್ ನೈಬ್ ನೂತನ ನಾಯಕ

ಕಾಬುಲ್, ಏಪ್ರಿಲ್ 5: 'ಐಸಿಸಿ ವಿಶ್ವಕಪ್ ಕ್ರಿಕೆಟ್ 2019' ಪ್ರಾರಂಭಗೊಳ್ಳಲು ಇನ್ನು ಸುಮಾರು 2 ತಿಂಗಳು ಬಾಕಿಯಿದೆಯಷ್ಟೆ. ಆದರೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಶುಕ್ರವಾರ ಅಸ್ಘರ್ ಅಫ್ಘಾನ್ ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕಿದೆ. ಅಸ್ಘರ್ ಸ್ಥಾನಕ್ಕೆ ಗುಲ್ಬಾದಿನ್ ನೈಬ್ ಅವರನ್ನು ನೇಮಿಸಿದೆ.
ಅಫ್ಘಾನಿಸ್ತಾನ್ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಮೂರು ವಿಭಿನ್ನ ಕ್ರಿಕೆಟ್ ಮಾದರಿಗಳಿಗೆ ಮೂವರು ನಾಯಕರನ್ನು ಹೆಸರಿಸಲಾಗಿದೆ. ಅದರಂತೆ ಗುಲ್ಬಾದಿನ್ ಅವರು ಅಂತಾರಾಷ್ಟ್ರೀಯ ಏಕದಿನ ಮತ್ತು ಇಂಗ್ಲೆಂಡ್‌ನಲ್ಲಿ ಮೇ 30ರಿಂದ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಅಫ್ಘಾನ್ ಟೆಸ್ಟ್ ತಂಡವನ್ನು ರಹಮತ್ ಷಾ ಮುನ್ನಡೆಸಿದರೆ, ಟಿ20 ತಂಡದ ನಾಯಕತ್ವವನ್ನು ಆಲ್ ರೌಂಡರ್ ಅಶೀದ್ ಖಾನ್ ವಹಿಸಿಕೊಂಡಿದ್ದಾರೆ. 2015ರಲ್ಲಿ ಸ್ಪಿನ್ನರ್ ಮೊಹಮ್ಮದ್ ನಬಿ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ ಬಳಿಕ, ಏಕದಿನ ತಂಡದ ಜವಾಬ್ದಾರಿ ಹೊತ್ತಿದ್ದ ಅಸ್ಘರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications