Gurnoor Brar; ವಿಶೇಷ ಕ್ಲಬ್‌ಗೆ ಎಂಟ್ರಿ ನೀಡಿದ ಗುರ್ನೂರ್ ಬ್ರಾರ್
ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಎರಡನೇ ಪಂದ್ಯ ಬುಧವಾರ ಲಕ್ನೋದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ವೇಗಿ ಗುರ್ನೂರ್ ಬ್ರಾರ್ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದರು. ಈ ಮೂಲಕ ಗುರ್ನೂರ್ ಬ್ರಾರ್ ವಿಶಿಷ್ಟ ಕ್ಲಬ್‌ಗೆ ಎಂಟ್ರಿ ಪಡೆದರು.
ಜೂನ್ 17 ರಂದು ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ, ಗುರ್ನೂರ್ 10 ಓವರ್ ಬೌಲಿಂಗ್ ಮಾಡಿ 60 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಈ ಪ್ರದರ್ಶನದೊಂದಿಗೆ, ಅವರು ತಮ್ಮ ವೃತ್ತಿಜೀವನದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ವಿಶಿಷ್ಟ ಸಾಧನೆ ಮಾಡುವ ಮೂಲಕ ಪಿಯೂಷ್ ಚಾವ್ಲಾ ಅವರ ವಿಶೇಷ ಕ್ಲಬ್‌ನಲ್ಲಿ ಸ್ಥಾನ ಪಡೆದರು.

26 ವರ್ಷದ ಗುರ್ನೂರ್ ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ರಹಮಾನಲ್ಲಾ ಗುರ್ಬಾಜ್‌ಗೆ ಖೆಡ್ಡಾ ತೋಡಿದರು. ಬಳಿಕ ನಾಯಕ ಹಶ್ಮತುಲ್ಲಾ ಶಾಹಿದಿ ಹಾಗೂ ಮೊಹಮ್ಮದ್ ಸಲೀಂ ಸಫಿ ಅವರನ್ನು ಒಂದೇ ಓವರ್‌ನಲ್ಲಿ ಪೆವೆಲಿಯನ್ ಹಾದಿ ತೋರಿಸಿದರು. ಎರಡನೇ ಏಕದಿನ ಪಂದ್ಯದಲ್ಲಿ ಗುರ್ನೂರ್ 3 ವಿಕೆಟ್ ಪಡೆದರು. ಇವರು ಧರ್ಮಶಾಲಾದಲ್ಲಿ ಜೂನ್ 13, 2026 ರಂದು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲಿ ಅವರು ಕೇವಲ 4.5 ಓವರ್‌ಗಳಲ್ಲಿ 27 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದಿದ್ದರು.
ವಿಶೇಷ ಕ್ಲಬ್‌ಗೆ ಎಂಟ್ರಿ
ಗುರ್ನೂರ್ ಬ್ರಾರ್ ತಮ್ಮ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕನಿಷ್ಠ ಮೂರು ವಿಕೆಟ್‌ಗಳನ್ನು ಪಡೆದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೊದಲು ಈ ಸಾಧನೆಯನ್ನು ಲೆಗ್ ಸ್ಪಿನ್ ಬೌಲರ್ ಪಿಯೂಷ್ ಚಾವ್ಲಾ ಈ ಹಿಂದೆ ಈ ಸಾಧನೆ ಮಾಡಿದ್ದರು. ಇವರ ಬಳಿಕ ಈ ಸಾಧನೆ ಮಾಡಿದ ಬೌಲರ್ ಎಂಬ ಹೆಗ್ಗಳಿಕೆಯನ್ನು ಗುರ್ನೂರ್ ಬ್ರಾರ್ ತಮ್ಮದಾಗಿಸಿಕೊಂಡರು. ಏಕದಿನ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ಭಾರತದ ಅತ್ಯುತ್ತಮ ಬೌಲಿಂಗ್ ನಡೆಸಿದ ದಾಖಲೆ ಪ್ರಸಿದ್ಧ್ ಕೃಷ್ಣ ಅವರದ್ದಾಗಿದೆ. ಇವರು ಇಂಗ್ಲೆಂಡ್ ವಿರುದ್ 2021ರಲ್ಲಿ ಮೊದಲ ಪಂದ್ಯದಲ್ಲಿ 54 ರನ್ ನೀಡಿ 4 ವಿಕೆಟ್ ಪಡೆದಿದ್ದರು.

ಭಾರತ ತಂಡದ ಪರ ಈ ವರೆಗೆ ಅದೆಷ್ಟೋ ಬೌಲರ್‌ಗಳು ಆಡಿದ್ದಾರೆ. ಅದರಲ್ಲಿ ಇನ್ನು ಹಲವರು ಮೊದಲ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ಆದರೆ ಎರಡನೇ ಪಂದ್ಯದಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸಾಧನೆ ಹೇಗಿರಲಿದೆ ಎಂಬುದೇ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications