ಡ್ಯಾರೆನ್ ಲೆಹ್ಮನ್ ಟ್ವಿಟರ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹ್ಯಾಕರ್ಸ್!

ಸಿಡ್ನಿ, ಜನವರಿ 6: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿದ ಬಳಿಕ ಲೆಹ್ಮನ್ ಖಾತೆಯಲ್ಲಿ ಹ್ಯಾಕರ್ಸ್, ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಡ್ಯಾರೆನ್ ಅವರ ಪ್ರೊಫೈಲ್ ಪಿಕ್ಚರ್ ಕೂಡ ಬದಲಾಗಿದೆ.
ಕಿಡಿಗೇಡಿತನಕ್ಕೆ ಲೆಹ್ಮನ್ ಟ್ವಿಟರ್ ಆರಿಸಿರುವ ಹ್ಯಾಕರ್‌ಗಳು, ಅವರ ಖಾತೆಯ ಹೆಸರನ್ನು 'ಕಾಸಿಮ್ ಸೊಲೇಮನಿ | ಫ* ಇರಾನ್' ಎಂದು ಬದಲಾಯಿಸಿದ್ದಾರೆ. ಇರಾನ್ ಮಿಲಿಟರಿ ಮುಖ್ಯಸ್ಥ ಸೊಲೇಮನಿ ಅವರನ್ನು ಯುಎಸ್ ಡ್ರೋನ್ ದಾಳಿಯ ಮೂಲಕ ಕೊಲ್ಲಲಾಗಿತ್ತು. ಈ ಘಟನೆ ನಡೆದ ಬೆನ್ನಲ್ಲಿ ಅವಹೇಳನಕಾರಿ ಪೋಸ್ಟ್‌ಗಳೂ ಕಾಣಿಸಿಕೊಂಡಿರುವುದು ಇರಾನಿಗರನ್ನು ಇನ್ನಷ್ಟು ಕೆರಳಿಸಿದೆ.
ಲೆಹ್ಮನ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಕಾಣಿಸಿದ್ದಕ್ಕೆ ಬ್ರಿಸ್ಬೇನ್ ಹೀಟ್ ಕ್ಷಮೆ ಕೋರಿದೆ. 'ಹಾಯ್ ಹೀಟ್ ಫ್ಯಾನ್ಸ್, ನಿಮ್ಮ ಮೆಸೇಜ್‌ಗಳಿಗೆ ಧನ್ಯವಾದಗಳು. ಕೋಚ್ ಡ್ಯಾರೆನ್ ಲೆಹ್ಮನ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಜೆ ಅಪರಾಧ ಅನ್ನುವಂತ ಏನಾದರೂ ನಡೆದಿದ್ದರೆ ಅದಕ್ಕೆ ನಾವು ಕ್ಷಮೆ ಕೇಳುತ್ತಿದ್ದೇವೆ,' ಎಂದು ಬ್ರಿಸ್ಬೇನ್ ಹೀಟ್ ಟ್ವೀಟ್ ಮಾಡಿದೆ.
ಹ್ಯಾಕರ್‌ಗಳು ತಮ್ಮ ಸಂದೇಶ ಲೆಹ್ಮನ್ ಖಾತೆಯ 340,000+ ಫಾಲೋವರ್ಸ್‌ಗೆ ತಲುಪುವವರೆಗೂ ಇರಾನ್ ವಿರೋಧಿ ಟ್ವೀಟರ್‌ಗಳನ್ನು ಮಾಡುತ್ತಲೇಯಿದ್ದರು. ಆ ಟ್ವೀಟ್‌ಗಳಲ್ಲಿ ತೊಂದರೆಗೀಡಾಗಿರುವ ಇರಾನ್‌ಗೆ ಸಂಬಂಧಿಸಿ ಯೂಟ್ಯೂಬ್ ಕ್ಲಿಪ್‌ಗಳು, ಚಿತ್ರಗಳು ಇದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications