ಸಚಿನ್ ವಿಕೆಟ್‌ಗಾಗಿ ಮೀಟಿಂಗ್‌ಗಳ ಮೀಟಿಂಗ್ ನಡೆಸಿದ್ದೆ: ನಾಸಿರ್ ಹುಸೇನ್

ವಿಶ್ವ ಕ್ರಿಕೆಟ್‌ನ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ಅದೆಷ್ಟೋ ಬೌಲರ್‌ಗಳ ನಿದ್ದೆಗೆಡಿಸಿದ್ದರು. ಶತಕಗಳ ಮೇಲೆ ಶತಕ ಬಾರಿಸುತ್ತಾ ಸಚಿನ್ ತೆಂಡೂಲ್ಕರ್ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿ ಜೀವನದ ನಿವೃತ್ತಿಯ ವೇಳೆಗೆ ಸಚಿನ್ ಟೆಸ್ಟ್ ಹಾಗೂ ಟೆಕದಿನ ಕ್ರಿಕೆಟ್‌ನಲ್ಲಿ ಅತ್ಯುಧಿಕ ರನ್ ಹಾಗೂ ಶತಕ ಗಳಿಸಿದ ಆಟಗಾರ ಎಂಬ ದಾಖಲೆಯೊಂದಿಗೆ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದರು.
ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಶನಿವಾರ ಸಚಿನ್ ತೆಂಡೂಲ್ಕರ್ ಎದುರಾಳಿ ತಂಡಗಳ ಪಾಲಿಗೆ ಎಷ್ಟು ಭೀತಿಯನ್ನು ಹುಟ್ಟಿಸಿದ ಆಟಗಾರನಾಗಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಕೇವಲ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯುವುದು ಹೇಗೆ ಎಂಬ ಕಾರಣಕ್ಕಾಗಿಯೇ ಮೀಟಿಂಗ್‌ಗಳ ಮೇಲೆ ಮೀಟಿಂಗ್ ನಡೆಸಿದ್ದ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ.
"ಭಾರತ ತಂಡವನ್ನು ಎದುರಿಸುವ ಮುನ್ನ ಇಂಗ್ಲೆಂಡ್ ತಂಡದ ನಾಯಕನಾಗಿದ್ದಾಗ ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆಯುವುದು ಹೇಗೆ ಎಂಬ ಒಂದೇ ಕಾರಣಕ್ಕಾಗಿ ನಾನು ಎಷ್ಟು ಟೀಮ್ ಮೀಟಿಂಗ್‌ಗಳನ್ನು ನಡೆಸುತ್ತಿದ್ದೆ ಎಂದು ಈಗ ನನಗೆ ನೆನಪಿಲ್ಲ ಎಂದು ಸಚಿನ್ ಆಟದ ವೈಖರಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಸಚಿನ್ ಅದ್ಭುತ ಬ್ಯಾಟಿಂಗ್ ತಂತ್ರಗಳನ್ನು ಅರಿತುಕೊಂಡಿದ್ದರು ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.
ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡುವುದಾದರೆ ಸಚಿನ್ ತೆಂಡೂಲ್ಕರ್ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿದ್ದರು ಎಂದು ನಾಸಿರ್ ಹುಸೇನ್ ಹೇಳಿದರು. ಇಯಾನ್ ಬಿಷಪ್ ಎಲ್ಮಾ ಸ್ಮಿತ್ ಜೊತೆಗೆ ಐಸಿಸಿ ಪಾಡ್‌ಕಾಸ್ಟ್ "ಕ್ರಿಕೆಟ್ ಇನ್‌ಸೈಡ್ ಔಟ್" ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications