Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಸಿಬಿ ಎಲ್ಲಾ ಪಂದ್ಯಗಳ ಬೌಲಿಂಗ್‌ನಿಂದ ಪಾಕ್‌ ಬೌಲರ್ ಹಫೀಜ್ ಅಮಾನತು

Hafeez suspended from bowling in all ECB competitions

ಲಂಡನ್, ಡಿಸೆಂಬರ್ 25: ಪಾಕಿಸ್ತಾನ ಮತ್ತು ಮಿಡ್ಲ್‌ಸೆಕ್ಸ್ ತಂಡದ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಇಂಗ್ಲೆಂಡ್‌ ಎಲ್ಲಾ ಮಾದರಿಯ ದೇಸಿ ಕ್ರಿಕೆಟ್‌ನ ಬೌಲಿಂಗ್‌ನಿಂದ ಅಮಾನತಾಗಿದ್ದಾರೆ. ಅವರ ಬೌಲಿಂಗ್ ಆ್ಯಕ್ಷನ್ ಅನುಮಾನಾಸ್ಪದವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಬೌಲಿಂಗ್ ಆ್ಯಕ್ಷನ್ ಪರೀಕ್ಷಿಸಿದ ಬಳಿಕ ಅಮಾನತು ವಿಧಿಸಲಾಗಿದೆ.

ಆಗಷ್ಟ್ 30ರಂದು ಟೌನ್‌ಟನ್‌ನಲ್ಲಿ ನಡೆದಿದ್ದ ಟಿ20 ಬ್ಲಾಸ್ಟ್ ಟೂರ್ನಿಯ ಸಮರ್‌ಸೆಟ್ ಮತ್ತು ಮಿಡ್ಲ್‌ಸೆಕ್ಸ್ ನಡುವಿನ ಪಂದ್ಯದಲ್ಲಿನ ಬೌಲಿಂಗ್ ಆ್ಯಕ್ಷನ್‌ಗಾಗಿ ಹಫೀಸ್‌ ಮೇಲೆ ಆರೋಪ ಕೇಳಿಬಂದಿತ್ತು. ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಬದಲಿಗೆ ಹಫೀಸ್ ಅವರನ್ನು ತಂಡಕ್ಕೆ ಸೇರಿಕೊಳ್ಳಲಾಗಿತ್ತು.

ಆಫ್‌ ಬ್ರೇಕ್ ಸ್ಪಿನ್ನರ್, 39ರ ಹರೆಯದ ಮೊಹಮ್ಮದ್ ಹಫೀಜ್ ಅವರ ಬೌಲಿಂಗ್ ಆ್ಯಕ್ಷನ್ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವೇಳೆ ಅವರ ಮೊಣಕೈ 15 ಡಿಗ್ರೀ ಟಾಲರೆನ್ಸ್ ಮಿತಿಯನ್ನು ಮೀರಿದಂತಿತ್ತು. ಹೀಗಾಗಿ ಇಂಗ್ಲೆಂಡ್‌ನ ದೇಸಿ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಿಂದ ಹಫೀಜ್ ಅವರನ್ನು ಅಮಾನತು ಮಾಡಲಾಗಿದೆ.

ಪಾಕಿಸ್ತಾನ ಪರ ಹಫೀಜ್, 105 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 3652 ರನ್, 216 ಏಕದಿನ ಇನ್ನಿಂಗ್ಸ್‌ಗಳಲ್ಲಿ 6614 ರನ್ ಮತ್ತು 86 ಟಿ20ಐ ಇನ್ನಿಂಗ್ಸ್‌ಗಳಲ್ಲಿ 1908 ರನ್ ಗಳಿಸಿದ್ದಾರೆ. 77 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 53 ವಿಕೆಟ್, 177 ಏಕದಿನ ಇನ್ನಿಂಗ್ಸ್‌ಗಳಲ್ಲಿ 139 ವಿಕೆಟ್‌ಗಳು, 67 ಟಿ20ಐ ಇನ್ನಿಂಗ್ಸ್‌ಗಳಲ್ಲಿ 54 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Sunday, May 3, 2020, 11:01 [IST]
Other articles published on May 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+