Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಆಫಘಾನಿಸ್ತಾನ ತಂಡ ಪ್ರಕಟ

 Hamid Hassan included in Afghanistan squad for WC

ಹೊಸದಿಲ್ಲಿ, ಏಪ್ರಿಲ್‌ 22: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಅಫಘಾನಿಸ್ತಾನ ತನ್ನ 15 ಆಟಗಾರರ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಗುಲ್ಬದಿನ್‌ ನೈಬ್‌ ತಂಡವನ್ನು ಮುನ್ನಡೆಸಲಿದ್ದಾರೆ.

32 ಏಕದಿನ ಪಂದ್ಯಗಳನ್ನು ಆಡಿದ ಅನುಭವಿ ವೇಗಿ ಹಮೀದ್‌ ಹಸನ್‌ ಅವರಿಗೆ ಅಫಘಾನಿಸ್ತಾನ ತಂಡದಲ್ಲಿ ಮರಳಿ ಸ್ಥಾನ ಲಭ್ಯವಾಗಿದೆ. 2016ರಲ್ಲಿ ಐರ್ಲೆಂಡ್‌ ಎದುರು ಹಸನ್‌ ಅಫಘಾನಿಸ್ತಾನ ಪರ ಕೊನೆಯ ಏಕದಿನ ಕ್ರಿಕೆಟ್‌ ಪಂದ್ಯವನ್ನಾಡಿದ್ದರು. 31 ವರ್ಷದ ಹಸನ್‌ ಒಡಿಐನಲ್ಲಿ 20.58ರ ಸರಾಸರಿಯಲ್ಲಿ 56 ವಿಕೆಟ್‌ಗಳನ್ನು ಪಡೆದಿದ್ದಾರೆ.

"ಅನುಭವಿ ವೇಗದ ಬೌಲರ್‌ ಹಮೀದ್‌ ಹಸನ್‌ ತಂಡಕ್ಕೆ ಮರಳಿರುವುದು ನಮಗೆ ಶುಭ ಸುದ್ದಿಯಾಗಿದೆ. ಮುಂಬರುವ ಅಭ್ಯಾಸ ಪಂದ್ಯಗಳಲ್ಲಿ ಅವರ ಫಾರ್ಮ್‌ ಮತ್ತು ಫಿಟ್ನೆಸ್‌ ಕೂಡ ಪರಿಗಣಿಸಲಾಗುವುದು,'' ಎಂದು ಅಫಘಾನಿಸ್ತಾನ ತಂಡದ ಆತ್ಕೆ ಸಮಿತಿ ಮುಖ್ಯಸ್ಥ ದವಲತ್‌ ಖಾನ್‌ ಅಹ್ಮದ್ಜಾಯ್‌ ಹೇಳಿದ್ದಾರೆ.

ಇದೇ ವೇಳೆ ಇಕ್ರಮ್‌ ಅಲಿಖಿಲ್‌, ಕರಿಮ್‌ ಕನತ್‌ ಮತ್ತು ಸೈಯದ್‌ ಶಿರ್ಜಾದ್‌ ಅವರನ್ನು ವಿಶ್ವಕಪ್‌ಗೆ ಕಾಯ್ದಿರಿಸಿದ ಆಟಗಾರರ ಪಟ್ಟಿಗೆ ಸೇರಿಸಲಾಗಿದೆ. ಅಫಘಾನಿಸ್ತಾನ ತಂಡ ಜೂನ್‌ 1ರಂದು ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ.

ಅಫಘಾನಿಸ್ತಾನದ ವಿಶ್ವಕಪ್‌ ತಂಡ ಇಂತಿದೆ

ಗುಲ್ಬದಿನ್‌ ನೈಬ್‌ (ನಾಯಕ), ಮೊಹಮ್ಮದ್‌ ಶೆಹ್ಜಾದ್‌(ವಿಕೆಟ್‌ಕೀಪರ್‌), ನೂರ್‌ ಅಲಿ ಝರ್ದಾನ್‌, ಹಜ್ರತ್‌ಉಲ್ಲಝಝಾಯ್‌, ರೆಹಮತ್‌ ಶಾ, ಅಸ್ಗರ್‌ ಅಫ್ಘಾನ್‌, ಹಷ್ಮತ್‌ಉಲ್ಲಾ ಶಾಹಿದಿ, ನಜಿಬುಲ್ಲಾ ಝರ್ದಾನ್‌, ಸಮಿಯುಲ್ಲ ಶೆನ್ವಾರಿ, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ದವಲತ್‌ ಝದ್ರಾನ್‌, ಅಫ್ತಾಬ್‌ ಆಲಮ್‌, ಹಮೀದ್‌ ಹಸನ್‌, ಮುಜೀಬ್‌ ಉರ್‌ ರೆಹ್ಮಾನ್‌.

Story first published: Monday, April 22, 2019, 13:26 [IST]
Other articles published on Apr 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+