Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಬೇಕಾದ್ರೆ 50 / 60 ರನ್ ಸಾಲಲ್ಲ, ಶತಕನೇ ದಾಖಲಿಸಬೇಕು: ವಿಹಾರಿಗೆ ಅಜರುದ್ದೀನ್ ಸಲಹೆ

Hanuma vihari

ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ 50 ಅಥವಾ 60 ರನ್ ಗಳಿಸಿದ್ರೆ ಸಾಕಾಗುವುದಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಅಜರುದ್ದೀನ್ ಟೀಂ ಇಂಡಿಯಾ ಬ್ಯಾಟರ್ ಹನುಮ ವಿಹಾರಿಗೆ ಸಲಹೆ ನೀಡಿದ್ದಾರೆ. ಟೀಂ ಇಂಡಿಯಾ ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಆಂಗ್ಲರ ವಿರುದ್ಧ ಜುಲೈನಲ್ಲಿ 5ನೇ ಟೆಸ್ಟ್ ಪಂದ್ಯದಲ್ಲಿ ಆಡಲಿದೆ.

ಭಾರತ ತಂಡದ ಆಡುವ ಇಲೆವೆನ್ ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಪೂಜಾರ ಫಾರ್ಮ್‌ಗೆ ಮರಳುತ್ತಿದ್ದಂತೆ ಅವರ ಸ್ಥಾನ ಖಚಿತವಾಯಿತು. ಇದರಿಂದ ರಹಾನೆ ಸ್ಥಾನದಲ್ಲಿ ಹನುಮ ವಿಹಾರಿ ಸ್ಥಾನ ಪಡೆಯುತ್ತಾರೇ ಹೊರತು ಶ್ರೇಯಸ್ ಅಯ್ಯರ್ ಅಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಈ ಹಂತದಲ್ಲಿ ವಿಹಾರಿ ಅವರು ಆಡಿದ ಕೊನೆಯ 3 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 31, 35 ಮತ್ತು 58 ರನ್ ಗಳಿಸಿದ್ದರು.

ಈ ಕುರಿತು ಮಾತನಾಡಿದ ಅಜರುದ್ದೀನ್, ಹನುಮ ವಿಹಾರಿ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಸಿಕ್ಕ ಅವಕಾಶದಲ್ಲಿ ಶತಕ ಬಾರಿಸಬೇಕು. 50, 60 ರನ್ ಪಡೆದು ಹೊರಬಿದ್ದಿದ್ದರೆ ಖಂಡಿತಾ ಕೆಲಸ ಮಾಡುವುದಿಲ್ಲ. ಹನುಮ ವಿಹಾರಿ ಒಬ್ಬ ಶ್ರೇಷ್ಠ ಆಟಗಾರ ಎಂದು ಹೊಗಳಿದ್ದಾರೆ.

ಭಾರತ ತಂಡಕ್ಕಾಗಿ ಸಾಕಷ್ಟು ಆಡಬೇಕಾದರೆ ನಿರಂತರವಾಗಿ ದೊಡ್ಡ ಅಂಕಗಳನ್ನು ಗಳಿಸಬೇಕು ಎಂದು ಅಜರುದ್ದೀನ್ ಹೇಳಿದ್ದಾರೆ. ವಿಹಾರಿ 2018 ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಉದ್ಘಾಟನಾ ಪಂದ್ಯದಲ್ಲಿ ವಿಹಾರಿ ಅರ್ಧಶತಕ ಗಳಿಸಿದ್ದರು.

ಈ 4 ವರ್ಷಗಳಲ್ಲಿ ವಿಹಾರಿ ಭಾರತ ಪರ ಕೇವಲ 15 ಟೆಸ್ಟ್‌ಗಳನ್ನು ಆಡಿದ್ದು, 808 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಮತ್ತು ಕೇವಲ ಒಂದು ಶತಕ ಸೇರಿವೆ. 2018 ರ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ವಿಹಾರಿ 66 ಎಸೆತಗಳಲ್ಲಿ 8 ರನ್ ಗಳಿಸಿದರು. ಅದೇ ರೀತಿ 2020ರಲ್ಲಿ ಇದೇ ಆಸ್ಟ್ರೇಲಿಯಾದಲ್ಲಿ ಅಶ್ವಿನ್ ಜೊತೆಗೆ ಸೇರಿಕೊಂಡು ಸೋಲುವ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು.

ಶೇನ್ ವಾರ್ನ್ ಎಸೆದಿದ್ದ ಬಾಲ್ ಆಫ್ ದಿ ಸೆಂಚುರಿಯನ್ನು ಸ್ಮರಿಸಿದ ICC | #Cricket | OneIndia Kannada

Story first published: Friday, June 3, 2022, 23:11 [IST]
Other articles published on Jun 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+