Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೇಶೀಯ ಕ್ರಿಕೆಟ್: ಆಂಧ್ರಪ್ರದೇಶ ತಂಡದಿಂದ ವಲಸೆ ಹೊರಟ ಹನುಮ ವಿಹಾರಿ; ಯಾವ ತಂಡಕ್ಕೆ ಸೇರ್ಪಡೆ?

ಮುಂಬರುವ ಭಾರತದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅನುಭವಿ ಬ್ಯಾಟ್ಸ್‌ಮನ್ ಹನುಮ ವಿಹಾರಿ ಅವರು ಆಂಧ್ರಪ್ರದೇಶ ತಂಡದಿಂದ ವಲಸೆ ಹೋಗಲಿದ್ದು, ಮಧ್ಯಪ್ರದೇಶ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

ಈ ತಿಂಗಳ ಆರಂಭದಲ್ಲಿ 29 ವರ್ಷದ ಅನುಭವಿ ಬ್ಯಾಟರ್ ಹನುಮ ವಿಹಾರಿ ಅವರನ್ನು ಬುಧವಾರ, ಜೂನ್ 28ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿ ಪಂದ್ಯಾವಳಿಗೆ ದಕ್ಷಿಣ ವಲಯ ತಂಡದ ನಾಯಕನನ್ನಾಗಿ ನೇಮಿಸಲಾಯಿತು.

Hanuma Vihari Migrate From Andhra Pradesh Team To Madhya Pradesh For Upcoming Domestic Cricket

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಹನುಮ ವಿಹಾರಿ ಆಂಧ್ರಪ್ರದೇಶ ತಂಡದಿಂದ 2022ರ ರಣಜಿ ಟ್ರೋಫಿ ಚಾಂಪಿಯನ್ ಮಧ್ಯಪ್ರದೇಶ ತಂಡವನ್ನು ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

"ಮುಂಬರುವ ರಣಜಿ ಋತುವಿನಲ್ಲಿ ಹನುಮ ವಿಹಾರಿ ಮತ್ತು ಕುಲ್ವಂತ್ ಖೆಜ್ರೋಲಿಯಾ ಮಧ್ಯಪ್ರದೇಶ ತಂಡದ ಪರವಾಗಿ ಆಡಲಿದ್ದಾರೆ. ಸೋಮವಾರ, ಜೂನ್ 26ರಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಸಭೆಯಲ್ಲಿ ಇದನ್ನು ನಿರ್ಧರಿಸಲಾಯಿತು," ಎಂದು ವರದಿಯಾಗಿದೆ.

ಹನುಮ ವಿಹಾರಿ ಆಂಧ್ರಪ್ರದೇಶ ತಂಡದಿಂದ ಮಧ್ಯಪ್ರದೇಶಕ್ಕೆ ವಲಸೆ ಹೋಗಲು ನಿರ್ಧರಿಸಿದ್ದರೆ, ಎಡಗೈ ವೇಗಿ ಕುಲ್ವಂತ್ ಖೆಜ್ರೋಲಿಯಾ ಈ ಹಿಂದೆ ದೆಹಲಿ ತಂಡವನ್ನು ಪ್ರತಿನಿಧಿಸಿದ್ದರು. ಈ ಬೆಳವಣಿಗೆಯ ಕುರಿತು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ಅಭಿಲಾಷ್ ಖಾಂಡೇಕರ್ ಮಾತನಾಡಿದ್ದಾರೆ.

"ಹೌದು, ನಾವು ಇಂದು ಮಧ್ಯಪ್ರದೇಶ ತಂಡದ ಆಯ್ಕೆ ಸಮಿತಿ ಸಭೆಯನ್ನು ನಡೆಸಿದ್ದೇವೆ, ಆದರೆ ನನ್ನ ಬಳಿ ವಿವರವಾದ ಮಾಹಿತಿಗಳಿಲ್ಲ. ನಾನು ನಾಳೆ ನಿಮ್ಮನ್ನು ಸಂಪರ್ಕಿಸುತ್ತೇನೆ," ಎಂದು ಅಭಿಲಾಷ್ ಖಾಂಡೇಕರ್ ತಿಳಿಸಿದರು.

2022ರಲ್ಲಿ ಮಧ್ಯಪ್ರದೇಶ ತಂಡವು ತಮ್ಮ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಗೆದ್ದ ವೇಳೆ ಮುಖ್ಯ ಕೋಚ್ ಆಗಿದ್ದ ಚಂದ್ರಕಾಂತ್ ಪಂಡಿತ್ ಅವರನ್ನು ಮತ್ತೆ ತರಬೇತುದಾರರಾಗಿ ಮುಂದುವರಿಸಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾರತ ಟೆಸ್ಟ್ ತಂಡಕ್ಕೆ ಹನುಮ ವಿಹಾರಿ ವಾಪಸ್?

ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್ ಹನುಮ ವಿಹಾರಿ ಅವರು ಓವಲ್‌ನಲ್ಲಿ ಸೆಪ್ಟೆಂಬರ್ 2018ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಅರ್ಧಶತಕ ಬಾರಿಸಿದರು. ಆದರೆ ಪ್ರವಾಸಿ ಭಾರತ ತಂಡ 118 ರನ್‌ಗಳಿಂದ ಸೋತ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ ಸೊನ್ನೆ ಸುತ್ತಿದ್ದರು.

ಹನುಮ ವಿಹಾರಿ 16 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 33.56ರ ಸರಾಸರಿಯಲ್ಲಿ 839 ರನ್ ಗಳಿಸಿದ್ದಾರೆ ಮತ್ತು ನೂರು ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಮರುನಿಗದಿಪಡಿಸಲಾದ ಟೆಸ್ಟ್‌ ಪಂದ್ಯದಲ್ಲಿ ಹನುಮ ವಿಹಾರಿ ಕೊನೆಯದಾಗಿ ಭಾರತ ತಂಡಕ್ಕೆ ಆಡಿದ್ದರು. ಆದರೆ, ಅಲ್ಲಿಯೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎರಡು ಇನ್ನಿಂಗ್ಸ್‌ಗಳಲ್ಲಿ 20 ಮತ್ತು 11 ರನ್ ಗಳಿಸಿ ಔಟಾದರು. ಇಂಗ್ಲೆಂಡ್ ತಂಡ ಕೊನೆಯ ದಿನ 378 ರನ್ ಬೆನ್ನಟ್ಟಿದ ಕಾರಣ ಭಾರತ ತಂಡ ಏಳು ವಿಕೆಟ್‌ಗಳಿಂದ ಟೆಸ್ಟ್ ಪಂದ್ಯವನ್ನು ಸೋತು, ಸರಣಿ ಸಮಬಲಗೊಳಿಸಿಕೊಂಡಿತು.

ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿ 2022-23ರ ಕ್ವಾರ್ಟರ್‌ಫೈನಲ್‌ನಲ್ಲಿ ಕೈ ಮುರಿತದ ಹೊರತಾಗಿಯೂ ಬಲಗೈ ಆಟಗಾರ ಹನುಮ ವಿಹಾರಿ ಬ್ಯಾಟಿಂಗ್‌ ಮಾಡಿದ್ದಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸಿದ್ದರು.

Story first published: Tuesday, June 27, 2023, 22:13 [IST]
Other articles published on Jun 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+