Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ

Rahul dravid

ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 49ನೇ ವರ್ಷಕ್ಕೆ ಕಾಲಿಟ್ಟ ಭಾರತ ಕ್ರಿಕೆಟ್‌ನ ಮಹಾಗೋಡೆಗೆ ಅನೇಕ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. ಕೋಟ್ಯಾಂತರ ದ್ರಾವಿಡ್ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ದ್ರಾವಿಡ್‌ಗೆ ಶುಭ ಹಾರೈಸಿದ್ದಾರೆ.

ವಿಶ್ವದ ಯಾವುದೇ ಪಿಚ್ ಆಗಿದ್ದರೂ, ಕಠಿಣ ಪಿಚ್ ಆದರೂ ತೆಂಡೂಲ್ಕರ್, ಗಂಗೂಲಿ, ಲಕ್ಷ್ಮಣ್ರಂತಹ ಆಟಗಾರರೇ ತಡಬಡಾಯಿಸಿದ್ರು ಸಹ ಕ್ರೀಸ್‌ನಲ್ಲಿ ತಾಳ್ಮೆಯಿಂದ ನೆಲೆಯೂರಿ ಬ್ಯಾಟ್‌ ಬೀಸುತ್ತಿದ್ದ ದ್ರಾವಿಡ್‌ ಮತ್ತೊಬ್ಬ ಸರಿಸಾಟಿಯಿಲ್ಲದ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದರು.

ಭಾರತದ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ರಾಹುಲ್ ತಂಡದ ಆಪತ್ಪಾಂಧವ ಎನಿಸಿಕೊಂಡಿದ್ದರು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ ಫಾರ್ಮೆಟ್‌ನಲ್ಲಿ 10,000ಕ್ಕೂ ಅಧಿಕ ರನ್‌ ದಾಖಲಿಸಿರುವ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಇವರ ಕ್ರಿಕೆಟ್ ನಿವೃತ್ತಿ ಬಳಿಕವೂ ಭಾರತ ಎ ಮತ್ತು ಅಂಡರ್‌-19 ಕೋಚ್ ಆಗುವ ಮೂಲಕ ಅನೇಕ ಯುವ ಪ್ರತಿಭೆಗಳನ್ನ ಹುಟ್ಟುಹಾಕಿದ್ದಾರೆ.

ಭಾರತದ ಯುವ ಕ್ರಿಕೆಟಿಗರ ಜೊತೆಗೆ ಸಾಕಷ್ಟು ಸಮಯ ಕಳೆದ ಬಳಿಕ ರಾಹುಲ್ ದ್ರಾವಿಡ್‌ ಭಾರತ ಹಿರಿಯ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ದ್ರಾವಿಡ್ ಚೊಚ್ಚಲ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಹಾಗೂ ಟಿ20 ಸರಣಿಯನ್ನ ಗೆದ್ದಿರುವ ಭಾರತ, ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವನ್ನ ಎದುರು ನೋಡುತ್ತಿದೆ.

1996 ಏಪ್ರಿಲ್ 3 ರಂದು ಶ್ರೀಲಂಕಾ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದ್ರಾವಿಡ್ ಪದಾರ್ಪಣೆ ಮಾಡಿದ ದ್ರಾವಿಡ್ , 164 ಟೆಸ್ಟ್ ಪಂದ್ಯಗಳಲ್ಲಿ 13,288 ರನ್ ಗಳಿಸಿದ್ದಾರೆ. ಜೊತೆಗೆ 36 ಶತಕ ಹಾಗೂ 63 ಅರ್ಧಶತಕ ಬಾರಿಸಿದ್ದಾರೆ.

ಇನ್ನು ದ್ರಾವಿಡ್ ಅವರು ಬರೋಬ್ಬರಿ 31,258 ಬಾಲ್​ಗಳನ್ನು ಎದುರಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಇದರ ಜೊತೆಗೆ ಕ್ರೀಸಿನಲ್ಲಿ 44,152 ನಿಮಿಷ ಆಡಿದ್ದಾರೆ. ಇದು ಕೂಡ ವಿಶ್ವ ದಾಖಲೆಯೇ ಆಗಿದೆ. ದ್ರಾವಿಡ್ 2012ರಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು.

ತಮ್ಮ ಆರಂಭಿಕ ದಿನಗಳಲ್ಲಿ ವಿಕೆಟ್ ಕೀಪರ್ ಆಗಿಯು ಮಿಂಚಿದ ದ್ರಾವಿಡ್ ಟೆಸ್ಟ್ ಕ್ರಿಕೆಟ್​ನಲ್ಲಿ 210 ಕ್ಯಾಚ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್​​ನಲ್ಲಿ 344 ಪಂದ್ಯಗಳನ್ನು ಆಡಿ 10,889 ರನ್ ದ್ರಾವಿಡ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕ ಹಾಗೂ 83 ಅರ್ಧಶತಕ ಸೇರಿವೆ.

Story first published: Tuesday, January 11, 2022, 11:51 [IST]
Other articles published on Jan 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+