For Quick Alerts
ALLOW NOTIFICATIONS  
For Daily Alerts
 

ಹರ್ಭಜನ್ ಸಿಂಗ್-ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನನ

Harbhajan Singh and Geeta Basra blessed with a baby boy

ನವದೆಹಲಿ: ಭಾರತದ ಕ್ರಿಕೆಟರ್ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನಿಸಿದೆ. ಹರ್ಭಜನ್ ಸಿಂಗ್ ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಆರೋಗ್ಯವಂತ ಮಗುವನ್ನು ನಮಗೆ ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತನಿಗೆ ಧನ್ಯವಾದಗಳು ಎಂದು ಸಿಂಗ್ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಬರೆದುಕೊಂಡಿದ್ದಾರೆ.

'ಗೀತಾ ಬಸ್ರಾ ಮತ್ತು ಮಗು ಆರೋಗ್ಯವಾಗಿದ್ದಾರೆ. ನಾವು ಸಂತೋಷದಲ್ಲಿ ಮುಳುಗಿದ್ದೇವೆ. ನಿಮೆಲ್ಲಾ ಪ್ರೀತಿ-ಹಾರೈಕೆಗಳಿಗೆ ನಮ್ಮ ಧನ್ಯವಾದಗಳು' ಎಂದು ಹರ್ಭಜನ್ ಸಿಂಗ್ ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್ಬುಕ್‌ನಲ್ಲಿ ಹಾಕಿಕೊಂಡಿರುವ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

41ರ ಹರೆಯದ ಹರ್ಭಜನ್ ಸಿಂಗ್ 2019ರಲ್ಲಿ ನಟನಾ ಕ್ರೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 'ದಿಕ್ಕಿಲೂನ' ಹೆಸರಿನ ತಮಿಳು ಚಿತ್ರದಲ್ಲಿ ಭಜ್ಜಿ ನಟಿಸಿದ್ದಾರೆ. ಬಲಗೈ ಆಫ್‌ಬ್ರೇಕ್ ಬೌಲರ್ ಆಗಿರುವ ಹರ್ಭಜನ್ ಸದ್ಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಆಡುತ್ತಿದ್ದಾರೆ.

ಹರ್ಭಜನ್ 103 ಟೆಸ್ಟ್‌ ಪಂದ್ಯಗಳಲ್ಲಿ 417 ವಿಕೆಟ್, 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್, 28 ಟಿ20ಐ ಪಂದ್ಯಗಳಲ್ಲಿ 25 ವಿಕೆಟ್ ದಾಖಲೆ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್‌ನಲ್ಲಿ ಆಡಿದ್ದಾರೆ.

Story first published: Saturday, July 10, 2021, 13:56 [IST]
Other articles published on Jul 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+