
ಭಾರತೀಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ನಿವೃತ್ತಿ ನಿರ್ಧಾರವನ್ನ ಪ್ರಕಟಿಸಿದ ಹರ್ಭಜನ್ ಇನ್ಮುಂದೆ ಯಾವುದೇ ಫಾರ್ಮೆಟ್ ಕ್ರಿಕೆಟ್ ಆಡದೇ ಇರಲು ನಿರ್ಧರಿಸಿದ್ದಾರೆ.
ಬಹಳ ಸಮಯದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಹರ್ಭಜನ್, ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ರು. ಆದ್ರೆ ಇನ್ಮುಂದೆ ಐಪಿಎಲ್‌ನಲ್ಲೂ 41 ವರ್ಷದ ಹರ್ಭಜನ್ ಸಿಂಗ್ ಕಾಣಿಸಿಕೊಳ್ಳುವುದಿಲ್ಲ.
ಭಾರತದಲ್ಲೇ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ್ದ ಹರ್ಭಜನ್ ಸಿಂಗ್ ಪ್ರದರ್ಶನವನ್ನ ಕ್ರಿಕೆಟ್ ಲೋಕ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಿ ಅವರು ಮೂರು ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಿದರು ಮತ್ತು ನಂತರ ಹಿಂತಿರುಗಿ ನೋಡಲಿಲ್ಲ.
2007 ರ ಟಿ20 ವಿಶ್ವಕಪ್ ಮತ್ತು 2011 ODI ವಿಶ್ವಕಪ್ ಸೇರಿದಂತೆ ಭಾರತದ ಎರಡು ವಿಶ್ವಕಪ್ ವಿಜಯಗಳಲ್ಲಿ ಕಾಣಿಸಿಕೊಂಡ ಕೆಲವೇ ಆಟಗಾರರಲ್ಲಿ ಹರ್ಭಜನ್ ಸಿಂಗ್ ಒಬ್ಬರು. 2011 ರಲ್ಲಿ ಭಾರತದ ಸ್ಪಿನ್ ದಾಳಿಯನ್ನು ಮುನ್ನಡೆಸುವ ಸಂದರ್ಭದಲ್ಲಿ ಭಜ್ಜಿ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯಲ್ಲಿ 7 ವಿಕೆಟ್ ಪಡೆದರು. ಹರ್ಭಜನ್ ಸಿಂಗ್ ಕೊನೆಯದಾಗಿ 2016 ರಲ್ಲಿ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು ಮತ್ತು ಇದು ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಅವರ ಕೊನೆಯ ಪ್ರದರ್ಶನವಾಗಿತ್ತು.
ಹರ್ಭಜನ್ 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇತ್ತಿಚೆಗಷ್ಟೇ ಆರ್. ಅಶ್ವಿನ್ , ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದು ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆಗೊಂಡರು. ಹರ್ಭಜನ್ ಸಿಂಗ್ 103 ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದಾರೆ.
ಹರ್ಭಜನ್ ಸಿಂಗ್ ರೆಸ್ಟ್ ರೆಕಾರ್ಡ್
ಪಂದ್ಯ: 103
ಇನ್ನಿಂಗ್ಸ್: 190
ವಿಕೆಟ್: 417
ಬೆಸ್ಟ್: 8/84
ಎಕಾನಮಿ: 2.84
5 ವಿಕೆಟ್: 25
10 ವಿಕೆಟ್: 5
ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿರುವ ಹರ್ಭಜನ್ ''ಪ್ರತಿಯೊಂದು ಒಳ್ಳೆಯದಕ್ಕೂ ಅಂತ್ಯವಿದೆ ಮತ್ತು ಇಂದು ನಾನು ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತೇನೆ, ಈ 23 ವರ್ಷಗಳ ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಈ ವಿದಾಯ ಘೋಷಣೆ ಮೂಲಕ, 2003ರ ವಿಶ್ವಕಪ್ ತಂಡದಲ್ಲಿ ಭಾಗಿಯಾಗಿದ್ದ ಆಟಗಾರರಲ್ಲಿ ನಿವೃತ್ತಿ ಹೊಂದಿದ ಕೊನೆಯ ಆಟಗಾರ ಇವರಾಗಿದ್ದಾರೆ. ಹರ್ಭಜನ್ ಸಿಂಗ್ ಅವರು ಐಪಿಎಲ್‌ನ ಕೊನೆಯ ಋತುವಿನಲ್ಲಿ ಕೆಲವೇ ಪಂದ್ಯಗಳನ್ನು ಆಡಿದ್ದರಿಂದ ಸ್ವಲ್ಪ ಸಮಯದವರೆಗೆ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಯುಎಇಯಲ್ಲಿ ನಡೆದ ಐಪಿಎಲ್‌ನ ಎರಡನೇ ಹಂತದಲ್ಲಿ ಇಡೀ ಸೀಸನ್‌ನಿಂದ ಹೊರಗುಳಿದಿದ್ದರು. ಹರ್ಭಜನ್ ಸಿಂಗ್ ಅವರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿ ಯುವ ಆಟಗಾರರಿಗೆ ಸಲಹೆ ನೀಡಿದ್ರು. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಕಳೆದ ವರ್ಷ ಕೆಕೆಆರ್‌ನ ಶಿಬಿರದಲ್ಲಿಯೂ ಅವರು ವರುಣ್ ಚಕ್ರವರ್ತಿಗೆ ಸಲಹೆ ನೀಡುತ್ತಿದ್ದರು.
ಐಪಿಎಲ್‌ನಲ್ಲಿ 163 ಪಂದ್ಯಗಳನ್ನು ಆಡಿರುವ ಭಜ್ಜಿ ಒಟ್ಟು 13 ಸೀಸನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 26 ರ ಸರಾಸರಿಯಲ್ಲಿ 150 ವಿಕೆಟ್‌ಗಳನ್ನು ಪಡೆದಿರುವ ಹರ್ಭಜನ್ ಮುಂಬೈ ಇಂಡಿಯನ್ಸ್ ಪರ ಹೆಚ್ಚಿನ ಸೀಸನ್ ಆಡಿದ್ದಾರೆ. ಆನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು.