For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸಿಎಸ್‌ಕೆಗೆ ಇನ್ನೋರ್ವ ಅನುಭವಿ ಆಟಗಾರನ ಅಲಭ್ಯತೆ ಖಚಿತ!

Harbhajan Singh pulls out of IPL 2020 due to personal reasons

ಸಿಎಸ್‌ಕೆ ತಂಡಕ್ಕೆ ಕೊರೊನಾ ವೈರಸ್ ಶಾಕ್ ನೀಡಿದ ಬೆನ್ನಿಗೆ ಆಘಾತ ನೀಡಿದ್ದು ತಂಡದ ಉಪನಾಯಕ ಸುರೇಶ್ ರೈನಾ ಅವರ ಹಠಾತ್ ನಿರ್ಗಮನ. ಸುರೇಶ್ ರೈನಾ ವೈಯಕ್ತಿಕ ಕಾರಣಗಳನ್ನು ನೀಡಿ ಈ ಬಾರಿಯ ಐಪಿಎಲ್ ತೊರೆದು ಭಾರತದಕ್ಕೆ ವಾಪಾಸ್ಸಾದರು. ಈಗ ಇನ್ನೋರ್ವ ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರನ ಅಲಭ್ಯತೆ ಕೂಡ ಖಚಿತವಾಗಿದೆ.

ಸಿಎಸ್‌ಕೆ ತಂಡದ ಇಂದಿನಿಂದ ಅಭ್ಯಾಸ ಶಿಬಿರವನ್ನು ಆರಂಭಿಸಲಿದೆ. ಸೆಪ್ಟೆಂಬರ್ 3ರಂದು ನಡೆದ ಕೊರೊನಾ ಪರೀಕ್ಷೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣ ಸಿಎಸ್‌ಕೆ ಪಾಳಯಕ್ಕೆ ಅಭ್ಯಾಸ ನಡೆಸಲು ಅವಕಾಶ ಸಿಕ್ಕಿದ್ದು ನಿರಾಳತೆ ತರಿಸಿದೆ. ಆದರೆ ಈ ಸಿಹಿ ಸುದ್ದಿಯ ಬೆನ್ನಿಗೆ ಅನುಭವಿ ಕ್ರಿಕೆಟಿಗನ ಅಲಭ್ಯತೆಯ ಖಚಿತ ಮಾಹಿತಿಯೂ ಲಭ್ಯವಾಗಿದ್ದು ನಿರಾಸೆ ಮೂಡಿಸಿದೆ

ಹಾಗಾದರೆ ಆ ಅನುಭವಿ ಆಟಗಾರ ಯಾರು? ತಾವ ಕಾರಣಕ್ಕಾಗಿ ಆತ ಈ ಬಾರಿಯ ಐಪಿಎಲ್‌ಲ್ಲಿ ಕಣಕ್ಕಿಳಿಯುತ್ತಿಲ್ಲ. ಮುಂದೆ ಓದಿ

ಯಾರು ಆ ಅನುಭವಿ ಭಾರತೀಯ ಕ್ರಿಕೆಟಿಗ ?

ಯಾರು ಆ ಅನುಭವಿ ಭಾರತೀಯ ಕ್ರಿಕೆಟಿಗ ?

ಈ ಬಾರಿಯ ಐಪಿಎಲ್‌ನಿಂದ ಹಿಂದಕ್ಕೆ ಸರಿಯುತ್ತಿರುವ ಸಿಎಸ್‌ಕೆ ತಂಡದ ಹಿರಿಯ ಆಟಗಾರ ಬೇರೆ ಯಾರೂ ಅಲ್ಲ, ಅದು ಹರ್ಭಜನ್ ಸಿಂಗ್. ವೈಯಕ್ತಿಕ ಕಾರಣಗಳಿಂದಾಗಿ ಹರ್ಭಜನ್ ಸಿಂಗ್ ತಡವಾಗಿ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳಲು ಅನುಮತಿಯನ್ನು ಪಡೆದುಕೊಂಡಿದ್ದರು. ಆದರೆ ಈಗ ಸಂಪೂರ್ಣವಾಗಿ ಐಪಿಎಲ್‌ಗೆ ಅಲಭ್ಯರಾಗುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಅಭ್ಯಾಸ ಶಿಬಿರದಿಂದಲೂ ಭಜ್ಜಿ ದೂರ

ಅಭ್ಯಾಸ ಶಿಬಿರದಿಂದಲೂ ಭಜ್ಜಿ ದೂರ

ಸಿಎಸ್‌ಕೆ ತಂಡ ಚೆನ್ನೈನಲ್ಲಿ ಯುಎಇಗೆ ಪ್ರವಾಸ ತೆರಳುವುದಕ್ಕೂ ಮುನ್ನ ಅಭ್ಯಾಸ ಶಿಬಿರವನ್ನು ಆಯೋಜಿಸಿತ್ತು. ಬಹುತೇಕ ಎಲ್ಲಾ ಆಟಗಾರರು ಈ ಶಿಬಿರದಲ್ಲಿ ಪಾಳ್ಗೊಂಡಿದ್ದರು. ಆದರೆ ಹರ್ಭಜನ್ ಸಿಂಗ್ ಇದಕ್ಕೂ ಹಾಜರಾಗಿರಲಿಲ್ಲ. ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ನಿಂದ ಅನುಮತಿಯನ್ನು ಪಡೆದು ತಡವಾಗಿ ಸೇರಿಕೊಳ್ಳಲು ಅವಕಾಶವನ್ನು ಪಡೆದುಕೊಂಡಿದ್ದರು.

ಅನಾರೋಗ್ಯ ಪೀಡಿತರಾಗಿದ್ದಾರೆ ಭಜ್ಜಿ ತಾಯಿ

ಅನಾರೋಗ್ಯ ಪೀಡಿತರಾಗಿದ್ದಾರೆ ಭಜ್ಜಿ ತಾಯಿ

ಹರ್ಭಜನ್ ಸಿಂಗ್ ಅವರ ತಾಯಿ ಅನಾರೋಗ್ಯ ಪೀಡಿತರಾಗಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಕಾರಣವನ್ನು ನೀಡಿ ಹರ್ಭಜನ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸ ಶಿಬಿರದಿಂದ ದೂರ ಉಳಿದಿದ್ದರು. ಇದೀಗ ಸಂಪೂರ್ಣ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಅವರು ಮಾಡಿದ್ದು ವೈಯಕ್ತಿಕ ಕಾರಣವನ್ನು ಅವರು ನೀಡಿದ್ದಾರೆ.

ಕೊರೊನಾ ಭೀತಿಯೂ ಕಾರಣವಾಯಿತಾ?

ಕೊರೊನಾ ಭೀತಿಯೂ ಕಾರಣವಾಯಿತಾ?

ಹರ್ಭಜನ್ ಸಿಂಗ್ ತಾಯಿಗೆ ಅನಾರೋಗ್ಯ ಉಂಟಾಗಿರುವ ಕಾರಣವೇ ಅನುಭವಿ ಸ್ಪಿನ್ನರ್ ಐಪಿಎಲ್‌ನಿಂದ ದೂರ ಉಳಿಯಲು ಕಾರಣ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿಎಸ್‌ಕೆ ತಂಡದಲ್ಲಿ ಕೊರೊನಾ ವೈರಸ್ ಪ್ರಕರಣವೂ ಕಂಡು ಬಂದಿದ್ದು ಸಹಜವಾಗಿಯೇ ಹರ್ಭಜನ್ ಸಿಂಗ್ ಆತಂಕಕ್ಕೆ ಕಾರಣವಿರಬಹುದು. ಈ ಎಲ್ಲಾ ಕಾರಣಗಳಿಂದಾಗಿ ಹರ್ಭಜನ್ ಸಿಂಗ್ ಈ ಬಾರಿಯ ಐಪಿಎಲ್‌ನಿಂದ ದೂರ ಉಳಿಯುವುದೇ ಸೂಕ್ತ ಎಂದು ನಿರ್ಧರಿಸಿರುವ ಸಾಧ್ಯತೆಯಿದೆ.

Story first published: Friday, September 4, 2020, 23:30 [IST]
Other articles published on Sep 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+