ಉಳಿದ 10 ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ?: 2011ರ ವಿಶ್ವಕಪ್ ಗೆಲುವಿನ ಬಗ್ಗೆ ಹರ್ಭಜನ್ ಖಡಕ್ ಪ್ರತಿಕ್ರಿಯೆ!

ಭಾರತ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಅದಾಗಲೇ ಒಂದು ದಶಕ ಕಳೆದಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹಾಗಿದ್ದರೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಈ ಗೆಲುವು ಸದಾ ಹಸಿರು. ಬಹುತೇಕ ಸಂದರ್ಭಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಟಗಾರರು ಈ ಗೆಲುವಿನ ಕ್ಷಣಗಳನ್ನು ಸ್ಮರಿಸುತ್ತಿರುತ್ತಾರೆ. ಆದರೆ ಒಂದು ಸಂಗತಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಬಹುತೇಕ ಆಟಗಾರರಿಗೆ ಅಸಮಾಧಾನ ಮೂಡಿಸುತ್ತಿದೆ. ಇದಕ್ಕೆ ಹರ್ಭಜನ್ ಸಿಂಗ್ ಇತ್ತೀಚೆಗೆ ನೀಡಿರುವ ಹೇಳಿಕೆಯೇ ಸಾಕ್ಷಿಯಾಗಿದೆ.
2011ರ ವಿಶ್ವಕಪ್ ಗೆಲುವಿನ ಶ್ರೇಯಸ್ಸನ್ನು ಬಹುತೇಕ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರೀಡಾ ಮಾಧ್ಯಮಗಳು ಅಂದಿನ ನಾಯಕ ಎಂಎಸ್ ಧೋನಿಗೆ ನೀಡುತ್ತವೆ. ಈ ಅಂಶದ ಬಗ್ಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಎಂಎಸ್ ಧೋನಿ ಮಾತ್ರವೇ ಆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರಾದರೆ ಉಳಿದ 10 ಆಟಗಾರರು ಹಾಗಾದರೆ ಲಸ್ಸಿ ಕುಡಿಯಲು ಹೋಗಿದ್ರಾ? ಎಂದು ಹರ್ಭಜನ್ ಸಿಂಗ್ ಅಸಮಾಧಾನದಿಂದಲೇ ಪ್ರತಿಕ್ರಿಯಿಸಿದ್ದಾರೆ.

ನಾಯಕನಿಗೆ ಮಾತ್ರ ಶ್ರೇಯಸ್ಸು
ಐಪಿಎಲ್‌ನಲ್ಲಿ ಕಾಮೆಂಟರಿ ಪ್ಯಾನೆಲ್‌ನಲ್ಲಿರುವ ಹರ್ಭಜನ್ ಸಿಂಗ್ ಪಂದ್ಯಕ್ಕೂ ಮುನ್ನ ನಡೆಯುವ ಪೂರ್ವವಿಶ್ಲೇಷಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಂಡದ ಗೆಲುವಿಗೆ ಕೇವಲ ನಾಯಕನಿಗೆ ಮಾತ್ರವೇ ಶ್ರೇಯಸ್ಸು ನೀಡುವುದಕ್ಕೆ ಹರ್ಭಜನ್ ಸಿಂಗ್ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಉಳಿದ ಆಟಗಾರರು ಮಾಡಿದ್ದೇನು?
"ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆದ್ದಾಗ ಹೆಡ್‌ಲೈನ್‌ಗಳು 'ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ' ಎಂಬುದಾಗಿರುತ್ತದೆ. ಆದರೆ ಭಾರತ ವಿಶ್ವಕೊ್ ಗೆದ್ದ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಎಂಎಸ್ ಧೋನಿ ವಿಶ್ವಕ್ ಗೆದ್ದರು ಎಂದೇ ಹೇಳುತ್ತಿದ್ದರು. ಅಂದರೆ ಉಳಿದ 10 ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ? ಉಳಿದ 10 ಆಟಗಾರರು ಏನು ಮಾಡಿದ್ದರು. ಗೌತಮ್ ಗಂಭೀರ್ ಮಾಡಿದ್ದೇನು ಹಾಗಾದರೆ? ಉಳಿದ ಆಟಗಾರರು ಮಾಡಿದ್ದೇನು?" ಎಂದು ಈ ಚರ್ಚೆಯ ಬಗ್ಗೆ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಒಗ್ಗಟ್ಟಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ
ಮುಂದುವರಿದು ಮಾತನಾಡಿದ ಹರ್ಭಜನ್ ಸಿಂಗ್ ಕ್ರಿಕೆಟ್ ಎಂಬುದು ತಂಡದ ಆಟವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಆಡಿದಾಗ ಮಾತ್ರವೇ ಶ್ರೇಷ್ಠ ಫಲಿತಾಂಶಗಳನ್ನು ಪಡೆಯಲು ಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ. ತಂಡಗಳ ಯಶಸ್ಸು ಒಗ್ಗಟ್ಟಿನ ಪ್ರದರ್ಶನದ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ ಹರ್ಭಜನ್ ಸಿಂಗ್.

ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದರು ಗಂಭೀರ್
ಇನ್ನು ಹರ್ಭಜನ್ ಸಿಂಗ್ ಮಾತ್ರವಲ್ಲ. ಈ ಹಿಂದೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಇದೇ ರೀತಿಯ ಹೇಳಿಕೆ ನೀಡಿರುವುದನ್ನು ನೆನಪಿಸಿಕೊಳ್ಳಬಹುದು. ಧೋನಿ ಮಾತ್ರವೇ ವಿಶ್ವಕೊಪ್ ಗೆಲ್ಲಿಸಿದ್ದಾರೆ ಎಂಬ ಮಾತಿನ ಬಗ್ಗೆ ಗೌತಮ್ ಗಂಭೀರ್ ಕೂಡ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. 2011ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 275 ರನ್‌ಗಳನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರ ಗೌತಮ್ ಗಂಭೀರ್ 97 ರನ್‌ಗಳಿಸಿ ಔಟಾಗಿದ್ದರೆ ಎಂಎಸ್ ಧೋನಿ 91 ರನ್‌ಗಳನ್ನು ಗಳಿಸಿ ಅಜೇಯವಾಗಿಳಿದಿದ್ದರು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ಫೈನಲ್‌ನಲ್ಲಿಯೂ ಎರಡು ವಿಕೆಟ್ ಕಿತ್ತಿದ್ದರು ಮಾತ್ರವಲ್ಲದೆ ಅಜೇಯ 21 ರನ್‌ಗಳ ಕೊಡುಗೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications