
ಭಾರತೀಯ ಕ್ರಿಕೆಟ್ ತಂಡದ ಲೆಜೆಂಡರಿ ಆಫ್-ಸ್ಪಿನ್ನರ್ , ಟರ್ಬನೇಟರ್ ಎಂದು ಕರೆಯಲ್ಪಡುವ ಹರ್ಭಜನ್ ಸಿಂಗ್ ಅವರು ಕ್ರಿಕೆಟ್ ಮೈದಾನದಲ್ಲಿ ಸಕ್ರಿಯವಾಗಿಲ್ಲದಿರಬಹುದು, ಆದರೆ ಸಾಮಾಜಿಕ ಮಾಧ್ಯಮದಲ್ಲಿಅವರು ಆಗಾಗ್ಗೆ ಅಭಿಮಾನಿಗಳಿಗೆ ಏನಾದರೂ ಸರ್ಪ್ರೈಸ್ ಕೊಡುತ್ತಲೇ ಇರುತ್ತಾರೆ.
ಈ ಬಾರಿ ಹರ್ಭಜನ್ ಸಿಂಗ್ ತಮ್ಮ ಅಂಡರ್-19 ದಿನಗಳ ಚಿತ್ರವೊಂದನ್ನ ಹಂಚಿಕೊಂಡಿದ್ದಾರೆ. ಫೋಟೋವನ್ನ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಭಜ್ಜಿ, ಈ ಆಟಗಾರರನ್ನು ಗುರುತಿಸುವಂತೆ ಅಭಿಮಾನಿಗಳಿಗೆ ಸವಾಲು ಹಾಕಿದರು. ಈ ಫೋಟೋ 1998 ರ ದಕ್ಷಿಣ ಆಫ್ರಿಕಾದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನದ್ದು ಎಂದು ಹರ್ಭಜನ್ ಸಿಂಗ್ ಈ ಚಿತ್ರದ ಶೀರ್ಷಿಕೆಯಲ್ಲಿ ಹೇಳಿದ್ದಾರೆ.
ಈ ಪಂದ್ಯಾವಳಿಯಲ್ಲಿ, ಭಾರತ ಮತ್ತು ಪಾಕಿಸ್ತಾನ ಎರಡೂ ತಮ್ಮ ತಮ್ಮ ಪೂಲ್ ಪಂದ್ಯಗಳನ್ನು ಗೆದ್ದ ನಂತರ ಸೂಪರ್-8 ಗೆ ಅರ್ಹತೆ ಪಡೆದಿವೆ. ಇದರ ಕೊನೆಯ ಲೀಗ್ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಿತು. ಡರ್ಬನ್‌ನಲ್ಲಿ ನಡೆದ ಈ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ಅಂಡರ್-19 ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಅವರು 7 ಓವರ್‌ಗಳಲ್ಲಿ 26 ರನ್‌ಗಳಿಗೆ ಶೋಯೆಬ್ ಮಲಿಕ್ ಅವರ ವಿಕೆಟ್ ಪಡೆದರು. ಆಶ್ಚರ್ಯ ಅಂದ್ರೆ ಅವರು ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.
ಹಾಗಿದ್ರೆ ಹರ್ಭಜನ್ ಜೊತೆಗೆ ನಿಂತಿರುವ ಆಟಗಾರರು ಯಾರು?
ಹರ್ಭಜನ್ ಸಿಂಗ್ ಅಭಿಮಾನಿಗಳಿಗೆ ಯಾರೆಂದು ಹುಡುಕಿರಿ ಎಂದು ಸವಾಲು ಹಾಕಿದಾಗ, ಅನೇಕ ಅಭಿಮಾನಿಗಳು ಉತ್ತರಿಸಲು ಪ್ರಾರಂಭಿಸಿದರು. ಅನೇಕ ಅಭಿಮಾನಿಗಳು ಸರಿಯಾದ ಉತ್ತರಗಳನ್ನು ನೀಡಿದರೆ, ಅನೇಕರು ಸರಿ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಆದಾಗ್ಯೂ, ಹರ್ಭಜನ್ ಸಿಂಗ್ ಹಂಚಿಕೊಂಡ ಈ ಚಿತ್ರದಲ್ಲಿ, ಅವರ ಬಲಭಾಗದಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡ್ ಸ್ಪಿನ್ನರ್ ಇಮ್ರಾನ್ ತಾಹಿರ್ ನಿಂತಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಅವರ ಎಡಭಾಗದಲ್ಲಿ ಪಾಕಿಸ್ತಾನದ ಹಸನ್ ರಜಾ ನಿಂತಿದ್ದಾರೆ.
1998 ರಲ್ಲಿ ಆಡಿದ ಈ ಅಂಡರ್ 19 ವಿಶ್ವಕಪ್‌ನಲ್ಲಿ ಹರ್ಭಜನ್ ಸಿಂಗ್ ಅದ್ಭುತ ಪ್ರದರ್ಶನ ನೀಡಿದರು. 3.44 ರ ಎಕಾನಮಿಯಲ್ಲಿ ಬೌಲ್ ಮಾಡಿ 5 ಪಂದ್ಯಗಳಲ್ಲಿ 8 ವಿಕೆಟ್ ಪಡೆದರು ಎಂಬುದು ಗಮನಿಸಬೇಕಾದ ಸಂಗತಿ. ಈ ಪಂದ್ಯಾವಳಿಯ ಸಮಯದಲ್ಲಿ, ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದ ಮೊಹಮ್ಮದ್ ಕೈಫ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ದಿಗ್ಗಜ ಆಟಗಾರರನ್ನು ಕಾಣಬಹುದು.
ಹರ್ಭಜನ್ ಹೊರತಾಗಿ ಪಾಕಿಸ್ತಾನದ ಸಿಕಂದರ್ ರಜಾ ಮತ್ತು ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಕೂಡ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇಮ್ರಾನ್ ತಾಹಿರ್ 6 ಪಂದ್ಯಗಳಲ್ಲಿ 3.67 ರ ಎಕಾನಮಿಯಲ್ಲಿ 7 ವಿಕೆಟ್ ಪಡೆದರೆ, ಸಿಕಂದರ್ ರಜಾ 6 ಪಂದ್ಯಗಳಲ್ಲಿ 42.40 ಸರಾಸರಿಯಲ್ಲಿ 212 ರನ್ ಗಳಿಸಿದರು.
1998ರ ಅಂಡರ್-19 ವಿಶ್ವಕಪ್ ಮೆಲುಕು
1998 ರ ಅಂಡರ್-19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳೊಂದಿಗೆ ಭಾರತ ಪೂಲ್ ಅನ್ನು ಸೇರಿತ್ತು. ಭಾರತವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಪ್ರಬಲ ರಾಷ್ಟ್ರಗಳ ಪೈಪೋಟಿಯಲ್ಲಿ 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿತ್ತು, ಆದರೆ ಉತ್ತಮ ರನ್ ರೇಟ್‌ನಿಂದ ಇಂಗ್ಲೆಂಡ್ ತಂಡವು ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಯಿತು ಮತ್ತು ನಂತರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅದೇ ಸಮಯದಲ್ಲಿ, ಪಾಕಿಸ್ತಾನ ತಂಡವು ತನ್ನ ಎಲ್ಲಾ ಪಂದ್ಯಗಳಲ್ಲಿ ಸೋಲನ್ನು ಕಂಡಿತು.