For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ ತಂಡದ ಜೊತೆಗೆ ಯುಎಇಗೆ ಹರ್ಭಜನ್ ಸಿಂಗ್ ಪ್ರಯಾಣಿಸುವುದಿಲ್ಲ!

Harbhajan Singh Wont Travel With Csk Squad To Uae

ಐಪಿಎಲ್‌ಗೆ ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದೆ. ಕೆಲವೇ ದಿನಗಳಲ್ಲಿ ಐಪಿಎಲ್‌ನ ಎಲ್ಲಾ ತಂಡಗಳು ಕೂಡ ಯುಎಇಗೆ ಹಾರಲಿದೆ. ಅಲ್ಲಿ ಕ್ವಾರಂಟೈನ್ ಹಾಗೂ ಜೈವಿಕ ಸುರಕ್ಷತಾ ವಲಯದಲ್ಲಿದ್ದುಕೊಂಡು ಅಭ್ಯಾಸವನ್ನು ನಡೆಸಲಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಸಿಎಸ್‌ಕೆ ಸ್ಕ್ವಾಡ್ ಜೊತೆಗೆ ಯುಎಇಗೆ ಪ್ರಯಾಣಿಸುವುದಿಲ್ಲ.

ಈಗಾಗಲೇ ನಿರ್ಧಾರವಾಗಿರುವಂತೆ ಚೆನ್ನೈ ತಂಡ ಶುಕ್ರವಾರ ದುಬೈಗೆ ಪ್ರಯಾಣವನ್ನು ಬೆಳೆಸಲಿದೆ. ಈ ತಂಡದ ಜೊತೆಗೆ ಹರ್ಭಜನ್ ಸಿಂಗ್ ದುಬೈಗೆ ತೆರಳುತ್ತಿಲ್ಲ. ಈ ಬಗ್ಗೆ ಫ್ರಾಂಚೈಸಿಗು ಹರ್ಭಜನ್ ಸಿಂಗ್ ಮನವರಿಕೆ ಮಾಡಿಕೊಟ್ಟಿದ್ದು ಹರ್ಭಜನ್ ಸಿಂಗ್ ಮನವಿಗೆ ಫ್ರಾಂಚೈಸಿ ಒಪ್ಪಿಗೆಯನ್ನು ನೀಡಿದೆ.

ಅಷ್ಟಕ್ಕೂ ಹರ್ಭಜನ್ ಸಿಂಗ್ ದುಬೈಗೆ ತಂಡದ ಜೊತೆಗೆ ಪ್ರಯಾಣ ಮಾಡದೆ ಇರಲು ಬಲವಾದ ಕಾರಣವಿದೆ. ಹರ್ಭಜನ್ ಸಿಂಗ್ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಹೀಗಾಗಿ ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ತಮ್ಮ ತಾಯಿಯ ಜೊತೆ ಕಾಲ ಕಳೆಯಲು ಬಯಸಿದ್ದಾರೆ. ಕೆಲವೆ ದಿನಗಳ ಅಂತರದಲ್ಲಿ ಹರ್ಭಜನ್ ಸಿಂಗ್ ದುಬೈಗೆ ಪ್ರಯಾಣಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಚೆನ್ನೈ ಸುಪರ್ ಕಿಂಗ್ಸ್‌ ತಂಡದ ಐದು ದಿನಗಳ ಅಭ್ಯಾಸ ಶಿಬಿರವನ್ನು ಕೂಡ ಹರ್ಭಜನ್ ಸಿಂಗ್ ತಪ್ಪಿಸಿಕೊಂಡಿದ್ದರು. ಭಜ್ಜಿ ಜೊತೆಗೆ ಆಲ್‌ರೌಂಡರ್ ರವೀಂದ್ರ ಜಡೇಜಾ, ಹಾಗೂ ವೇಗಿ ಶಾರ್ದೂಲ್ ಠಾಕೂರ್ ಕೂಡ ಚೆನ್ನೈ ತಂಡದ ಅಭ್ಯಾಸ ಶಿಬಿರವನ್ನು ತಪ್ಪಿಸಿಕೊಂಡಿದ್ದರು.

ಶಾರ್ದೂಲ್ ಠಾಕೂರ್ ಬುಧವಾರ ಚೆನ್ನೈಗೆ ತಲುಪಿದಿದ್ದಾರೆ. ಗುರುವಾರದ ವೇಳೆಗೆ ರವೀಂದ್ರ ಜಡೇಜಾ ಕೂಡ ತಂಡವನ್ನು ಸೇರಿಕೊಳ್ಲುವ ನಿರೀಕ್ಷೆಯಿದೆ. ಗುರುವಾರ ಸಿಎಸ್‌ಕೆ ತಂಡದ ಅಭ್ಯಾಸ ಶಿಬಿರ ಅಂತ್ಯವಾಗಲಿದ್ದು ತಂಡದ ನಾಯಕ ಎಂಎಸ್ ಧೋನಿ ತಂಡದ ಅಭ್ಯಾಸದ ಬಗ್ಗೆ ತೃಪ್ತಿಯನ್ನು ಹೊಂದಿದ್ದಾರೆ.

Story first published: Thursday, August 20, 2020, 16:15 [IST]
Other articles published on Aug 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+