For Quick Alerts
ALLOW NOTIFICATIONS  
For Daily Alerts
 

ಮುಂಬೈಗೆ ಹಾರ್ದಿಕ್ ನಾಯಕ: ಸೂರ್ಯಕುಮಾರ್‌ಗೆ 18 ಕೋಟಿ ಆಫರ್‌

ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಹೊತ್ತಿಕೊಂಡಿರುವ ಅಸಮಾಧಾನದ ಹೊಗೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂಬೈ ತಂಡದಿಂದ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರುತ್ತಲೇ ಇವೆ. ಮುಂಬೈ ತಂಡದಲ್ಲಿ ಅಸಮಾಧಾನಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ.

ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ಟ್ರೇಡ್ ಮಾಇ ತಂಡಕ್ಕೆ ಸೇರಿಸಿಕೊಂಡಿದೆ. ಇಷ್ಟೇ ಆದರೆ ಆಟಗಾರರ ಅಸಮಾಧಾನ ಹೊರ ಹಾಕಲು ಸಾಧ್ಯವೇ ಇರಲಿಲ್ಲ. ಆದರೆ ಹಾರ್ದಿಕ್‌ರಿಗೆ ನಾಯಕತ್ವ ನೀಡಿದ್ದು ಬೇರೆ ಆಟಗಾರರಿಗೆ ನುಂಗುಲಾಗದ ತುತ್ತಾಗಿದೆ.

Hardik captain to Mumbai: 18 crore offer for Suryakumar

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಜಸ್ಪ್ರಿತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್. ನಿಶ್ಚಿತವಾಗಿ ಈ ಇಬ್ಬರೂ ಆಟಗಾರರು ಸ್ಟಾರ್ ಪ್ಲೇಯರ್‌ಗಳೆ. ಮುಂಬೈ ತಂಡದ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದ ಆಟಗಾರರು. ರೋಹಿತ್‌ ಬಳಿಕ ಇವರನ್ನೇ ಉತ್ತರಾಧೀಕಾರಿ ಎಂದೇ ಬಿಂಬಿಸಲಾಗಿತ್ತು. ಆದರೆ ಬೇರೆ ಮನೆಯ ಒಡೆಯನನ್ನು ಕರೆದು, ಮುಂಬೈ ಮನೆಯ ಅಧಿಕಾರ ನೀಡಿದೆ. ಇದರಿಂದ ಅಸಮಾಧಾನ ಭುಗಿಲೆದ್ದಿದೆ.

ಸೂರ್ಯಕುಮಾರ್‌ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಆಟಗಾರ. ತಮ್ಮ ಆಟ ಹಾಗೂ ನಾಯಕತ್ವದ ಗುಣಗಳಿಂದಲೇ ಹೆಚ್ಚು ಗಮನ ಸೆಳೆದ ಆಟಗಾರ. ಈ ಪ್ಲೇಯರ್‌ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕಕ್ಕೆ ಆನೆ ಬಲ ತುಂಬಿದ ಆಟಗಾರ.

Hardik captain to Mumbai: 18 crore offer for Suryakumar

ಟ್ರೇಡಿಂಗ್‌ ಅಂಗಳದಲ್ಲಿ ಪ್ರಜ್ವಲಿಸುತ್ತಿದ್ದಾನೆ ಸೂರ್ಯ

ಸೂರ್ಯ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಯೇ ಐಪಿಎಲ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇವರನ್ನು ಮುಂಬೈ ಮನವಲಿಸದೇ ಇದ್ದರೇ ಸೂರ್ಯ ಬೇರೆ ತಂಡಕ್ಕೆ ಬೆಳಕಾಗುವುದು ಗ್ಯಾರಂಟಿ.. ಈ ನಿಟ್ಟಿನಲ್ಲಿ ಮುಂಬೈ ಯಾವ ಕೆಲಸ ಮಾಡುತ್ತಿದೆ ಎಂಬುದು ತಿಳಿದಿಲ್ಲ. ಆದರೆ ಬೇರೆ ತಂಡಗಳು ಮಾತ್ರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿವೆ.

ಈ ನಿಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಹ ಹಿಂದೆ ಬಿದ್ದಲ್ಲ. ಡೆಲ್ಲಿ ಈ ಎಲ್ಲ ಲೆಕ್ಕಾಚಾರವನ್ನೇ ನೋಡಿಕೊಂಡು ಐಪಿಎಲ್‌ ಹರಾಜಿನಲ್ಲಿ ಅಳೆದು ತೂಗಿ ಹಣವನ್ನು ಪೋಲು ಮಾಡಿದೆ. ಅಲ್ಲದೆ ತನ್ನ ಪರ್ಸ್‌ನಲ್ಲಿ ಇನ್ನು 10 ಕೋಟಿ ರೂಪಾಯಿ ಇಟ್ಟುಕೊಂಡಿದೆ. ಈ ಹಣವೇ ಅವರಿಗೆ ವರವಾಗಿ ಪರಿಣಮಿಸಬಹುದು.

ಸೂರ್ಯರಿಗೆ ಮುಂಬೈ ನೀಡಿದ ಹಣ ಎಷ್ಟು?

ಸೂರ್ಯಕುಮಾರ್‌ಗೆ ಮುಂಬೈ ಇಂಡಿಯನ್ಸ್‌ 8 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ಸೂರ್ಯ ಮೊದಲೆಲ್ಲಾ ಈ ಬೆಲೆಗೂ ಚಕಾರ ಅಂದಿರಲಿಲ್ಲ. ಆದರೆ, ನಾಯಕತ್ವ ಸಿಗದೇ ಇದ್ದಾಗ ಈ ಎಲ್ಲ ಅಂಶಗಳು ಬೆಳಕಿಗೆ ಬರುತ್ತಿವೆ.

Hardik captain to Mumbai: 18 crore offer for Suryakumar

ಸೂರ್ಯ ಅವರ ಮನಸ್ಸಿನಲ್ಲಿ ಈಗ ಅನ್ನಿಸಿರಬಹುದು ನಾನು ಸಹ ಹರಾಜಿಗೆ ಹೋಗಿದ್ದರೆ ನಿಶ್ಚಿತವಾಗಿ 20 ಕೋಟಿಯ ಲ್ಯಾಂಡ್‌ ಮಾರ್ಕ್ ಪಾರು ಮಾಡುತ್ತಿದ್ದೇ ಎಂದು. ಏಕೆಂದರೆ ಪ್ಯಾಟ್ ಕಮಿನ್ಸ್‌ ಹಾಗೂ ಮಿಚೆಲ್ ಸ್ಟಾರ್ಕ್‌ಗೆ ಮಾಲೀಕರು ನೀಡಿದ್ದ ಇದಕ್ಕೆ ಕಾರಣ. ಈ ಬೌಲರ್‌ಗಳು ಒಂದು ಪಂದ್ಯ ಎರಡು ಪಂದ್ಯ ಗೆಲ್ಲಿಸಬಹುದು. ಆದರೆ ಸೂರ್ಯ ಮ್ಯಾಚ್‌ ವಿನ್ನಿಂಗ್ ಪ್ಲೇಯರ್.

ಇದನ್ನೆ ಗಮನಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅವರಿಗೆ ಬಿಗ್ ಆಫರ್‌ ನೀಡುವ ಸಾಧ್ಯತೆ ಇದೆ. ಡೆಲ್ಲಿ ತಂಡದ ಪರ ರಿಷಭ್‌ ಪಂತ್ ಆಡುವುದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದು ಇನ್ನು ಪ್ರಶ್ನೆಯಾಗಿ ಉಳಿದಿದೆ. ಇವರ ಸ್ಥಾನವನ್ನು ತುಂಬಲು ಸ್ಟಾರ್ ಪ್ಲೇಯರ್‌ ಒಬ್ಬನ ಸ್ಟಾರ್ ಪ್ಲೇಯರ್‌ ಬೇಕೆ ಬೇಕು. ಇದರಿಂದ ತಂಡದ ಬ್ರ್ಯಾಂಡ್ ವ್ಯಾಲ್ಯೂ ಸಹ ಬೆಳೆಯುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಡೆಲ್ಲಿ ಬರೋಬ್ಬರಿ 18 ಕೋಟಿ ಆಫರ್‌ನ್ನು ಸೂರ್ಯಕುಮಾರ್‌ಗೆ ನೀಡಬಹುದು.

ಸೂರ್ಯ ಅವರಿಗೆ ನೀಡಿರುವ 8 ಕೋಟಿ ಬೆಲೆಗೆ ಆಟಗಾರರನ್ನು ಟ್ರೇಡ್ ಮಾಡಿಕೊಂಡು, ಸೂರ್ಯ ಅವರನ್ನು ತಂಡಕ್ಕೆ ಸೇರಿಸಿಕೊಂಡು ತನ್ನ ಪರ್ಸ್‌ನಲ್ಲಿರುವ 10 ಕೋಟಿ ನೀಡ ಬಹುದು. ಅಂದರೆ 18 ಕೋಟಿಗೆ ಸೂರ್ಯ ಡೆಲ್ಲಿ ತಂಡವನ್ನು ಸೇರಬಹುದು.

ಟ್ರೆಡಿಂಗ್ ಲಭ್ಯ

ಐಪಿಎಲ್‌ ಆರಂಭವಾಗುವ ಒಂದು ತಿಂಗಳ ವರೆಗೂ ಟ್ರೆಡಿಂಗ್ ಮಾಡಲು ಅವಕಾಶ ಇರುತ್ತದೆ. ಈ ಎರಡು ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದೇ ಕುತೂಹಲ ಮೂಡಿಸಿದೆ.

Story first published: Friday, December 22, 2023, 15:33 [IST]
Other articles published on Dec 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+