For Quick Alerts
ALLOW NOTIFICATIONS  
For Daily Alerts
 

Hardik or Suryakumar: ಭಾರತ ಟಿ20 ತಂಡದ ನಾಯಕ ಯಾರು? ಬಿಸಿಸಿಐಗೆ ಗೌತಮ್ ಗಂಭೀರ್ ಹೇಳಿದ್ದೇನು?

ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರು ಪ್ರಮುಖ ಸ್ಪರ್ಧಿಗಳಾಗಿ ಹೊರಹೊಮ್ಮುವುದರೊಂದಿಗೆ ಮುಂದಿನ ಭಾರತ ಟಿ20 ತಂಡದ ನಾಯಕ ಯಾರು ಎಂಬುದರ ಕುರಿತು ಚರ್ಚೆಗಳು ಮುಂದುವರೆದಿವೆ.

2024ರ ಟಿ20 ವಿಶ್ವಕಪ್ ವಿಜಯೋತ್ಸವದ ನಂತರ ರೋಹಿತ್ ಶರ್ಮಾ ಅವರು ಟಿ20 ಸ್ವರೂಪದಿಂದ ನಿವೃತ್ತರಾದರು. ಇದರರ್ಥ ಭಾರತ ತಂಡದ ಟಿ20 ನಾಯಕತ್ವ ಸ್ಥಾನವು ಪ್ರಸ್ತುತ ಖಾಲಿಯಾಗಿದೆ.

Hardik or Suryakumar Who will T20 Captain Of Team India What Did Gautam Gambhir Say To BCCI

ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಉಪನಾಯಕ ಹಾರ್ದಿಕ್ ಪಾಂಡ್ಯ ನೆಚ್ಚಿನ ಆಟಗಾರನಾಗಿದ್ದರೆ, ಕಳೆದ ಕೆಲವು ದಿನಗಳಿಂದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಶ್ರೀಲಂಕಾ ವಿರುದ್ಧದ ಮುಂಬರುವ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರ ಗಾಯದ ಕಾಳಜಿಯೊಂದಿಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ.

Hardik or Suryakumar Who will T20 Captain Of Team India What Did Gautam Gambhir Say To BCCI

ಗುರುವಾರ, ಜುಲೈ 18ರಂದು ಶ್ರೀಲಂಕಾ ವಿರುದ್ಧದ ಸರಣಿಗಾಗಿ ಭಾರತ ತಂಡದ ಘೋಷಣೆಯಾಗುವ ನಿರೀಕ್ಷೆಯಿದೆ. ಆದರೆ ಇದಕ್ಕೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿಯೊಂದಿಗೆ ಮತ್ತೊಮ್ಮೆ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಟೈಮ್ಸ್‌ ವರದಿಯ ಪ್ರಕಾರ, ಗೌತಮ್ ಗಂಭೀರ್ ನಾಯಕತ್ವಕ್ಕಾಗಿ ನಿರ್ದಿಷ್ಟವಾಗಿ ಯಾರ ಹೆಸರನ್ನು ತೆಗೆದುಕೊಂಡಿಲ್ಲ. ಬಿಸಿಸಿಐ ಮತ್ತು ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಅವರು ನಾಯಕನೊಂದಿಗೆ ಕೆಲಸ ಮಾಡಲು ಬಯಸುವುದಾಗಿ ಎಂದು ಹೇಳಿದರು.

"ಗೌತಮ್ ಗಂಭೀರ್ ನೇರವಾಗಿ ನಿರ್ಧಾರದಲ್ಲಿ ಸೂರ್ಯಕುಮಾರ್ ಯಾದವ್‌ ಹೆಸರು ತೆಗೆದುಕೊಳ್ಳದಿದ್ದರೂ, ಕೆಲಸದ ಹೊರೆ ಅಡ್ಡಿಯಾಗದ ನಾಯಕನೊಂದಿಗೆ ಕೆಲಸ ಮಾಡಲು ಬಯಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಜಿತ್ ಅಗರ್ಕರ್ ತಮ್ಮ ಅಭಿಪ್ರಾಯಗಳೊಂದಿಗೆ ಸ್ಪಷ್ಟವಾಗಿದ್ದರು," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದೇ ವೇಳೆ, ಬುಧವಾರದಂದು ಬಿಡುಗಡೆಯಾದ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿದ್ದರೆ, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆರನೇ ಸ್ಥಾನವನ್ನು ಪಡೆದಿದ್ದಾರೆ.

ರುತುರಾಜ್ ಗಾಯಕ್ವಾಡ್ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಇಳಿದಿದ್ದಾರೆ. ಇದನ್ನು ಜಿಂಬಾಬ್ವೆ ವಿರುದ್ಧ ಭಾರತ ತಂಡವು ಇತ್ತೀಚಿನ 4-1 ಸರಣಿಯ ಗೆಲುವಿನ ನಂತರ ನವೀಕರಿಸಲಾಗಿದೆ.

ಯಶಸ್ವಿ ಜೈಸ್ವಾಲ್ ಅವರು ಸರಣಿಯಲ್ಲಿ 141 ರನ್ ಗಳಿಸಿದ ನಂತರ, ಅವರು ನಾಲ್ಕು ಸ್ಥಾನಗಳ ಮೇಲಕ್ಕೇರಿ, ನಂ.1 ಶ್ರೇಯಾಂಕದ ಬ್ಯಾಟರ್ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಸೂರ್ಯಕುಮಾರ್ ಅವರ ನಂತರದ ಸ್ಥಾನದಲ್ಲಿದ್ದಾರೆ.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತಂಡವನ್ನು ಮುನ್ನಡೆಸಿದ ಮತ್ತು ಐದು ಇನ್ನಿಂಗ್ಸ್‌ಗಳಿಂದ 170 ರನ್ ಗಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶುಭ್ಮನ್ ಗಿಲ್ 36 ಸ್ಥಾನಗಳ ಏರಿಕೆ ಕಂಡು 37ನೇ ಸ್ಥಾನಕ್ಕೆ ತಲುಪಿದ್ದಾರೆ.

ಟಿ20 ಬೌಲರ್‌ಗಳ ಶ್ರೇಯಾಂಕದ ಅಗ್ರ 10ರಲ್ಲಿ ಯಾವುದೇ ಭಾರತೀಯ ಬೌಲರ್‌ಗಳಿಲ್ಲ. ಜಿಂಬಾಬ್ವೆ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಅಕ್ಷರ್ ಪಟೇಲ್ ನಾಲ್ಕು ಸ್ಥಾನ ಕುಸಿದು 13ನೇ ಸ್ಥಾನಕ್ಕೆ ಕುಸಿದಿದ್ದಾರೆ.

Story first published: Thursday, July 18, 2024, 13:51 [IST]
Other articles published on Jul 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+