ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ನಿಧನ

ಮುಂಬೈ: ಟೀಮ್ ಇಂಡಿಯಾದ ಆಲ್ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಅವರು ನಿಧನರಾಗಿದ್ದಾರೆ. ಸದ್ಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದ ಕೃನಾಲ್ ಬಯೋಬಬಲ್ ಅನ್ನು ತೊರೆದಿದ್ದಾರೆ.
ತಂದೆ ಕೊನೆಯುಸಿರೆಳೆದಿರುವುದರಿಂದಾಗಿ ಬರೋಡಾ ತಂಡದ ನಾಯಕರಾಗಿರುವ ಹಾರ್ದಿಕ್ ಹಿರಿಯ ಸಹೋದರ ಕೃನಾಲ್ ಪಾಂಡ್ಯ ಬಯೋಬಬಲ್ ತೊರೆದು ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ. ಸಯ್ಯದ್ ಮುಷ್ತಾಕ್ ಟ್ರೋಫಿ ಇನ್ನುಳಿದ ಪಂದ್ಯಗಳಲ್ಲಿ ಕೃನಾಲ್ ಆಡುತ್ತಿಲ್ಲ.
'ಹೌದು, ಕೃನಾಲ್ ಪಾಂಡ್ಯ ಅವರು ಬಯೋಬಬಲ್ ಅನ್ನು ತೊರೆದಿದ್ದಾರೆ. ಅವರ ವೈಯಕ್ತಿಕ ದುರಂತದಿಂದಾಗಿ ಅವರಿಗೆ ಇನ್ನುಳಿದ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ. ಹಾರ್ದಿಕ್ ಮತ್ತು ಕೃನಾಲ್ ನಷ್ಟಕ್ಕೆ ಬರೋಡಾ ಕ್ರಿಕೆಟ್ ಅಸೋಸಿಯೇಶನ್ (ಬಿಸಿಎ) ಮರುಗುತ್ತದೆ,' ಎಂದು ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಸಿಇಒ ಶಿಶಿರ್ ಹತ್ತಾಂಗಡಿ ಹೇಳಿದ್ದಾರೆ.
ಬರೋಡಾ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಎಲೈಟ್ ಗ್ರೂಪ್ 'ಸಿ'ಯಲ್ಲಿದೆ. ಹಾರ್ದಿಕ್ ಪಾಂಡ್ಯ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೊಫಿಯಲ್ಲಿ ಆಡುತ್ತಿಲ್ಲ. ಆದರೆ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್‌ಗಳ ಕ್ರಿಕೆಟ್‌ಗಾಗಿ ಹಾರ್ದಿಕ್ ಶೀಘ್ರ ಅಭ್ಯಾಸ ಆರಂಭಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications