For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೃನಾಲ್-ಹಾರ್ದಿಕ್ ಚೊಚ್ಚಲ ಜೊತೆಯಾಟ!

Hardik Pandya, Krunal Pandya join select few in international cricket

ವೆಲ್ಲಿಂಗ್ಟನ್, ಫೆಬ್ರವರಿ 6: ವೆಲ್ಲಿಂಗ್ಟನ್‌ನ ವೆಸ್ಟ್ ಪ್ಯಾಕ್ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 6) ನಡೆದ ಭಾರತ-ನ್ಯೂಜಿಲ್ಯಾಂಡ್ ಮೊದಲ ಟಿ20 ಪಂದ್ಯ ಭಾರತದ ಕೃನಾಲ್ ಪಾಂಡ್ಯ-ಮತ್ತು ಹಾರ್ದಿಕ್ ಪಾಂಡ್ಯ ಸಹೋದರರಿಗೆ ವಿಶೇಷವಾಗಿತ್ತು. ಯಾಕೆಂದರೆ ಇಬ್ಬರೂ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜೊತೆಯಾಗಿದ್ದು ಇದೇ ಮೊದಲು.

ಬುಧವಾರದ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೊತೆಯಾಗಿ ಆಡಿದ ಭಾರತದ ಮೂರನೆಯ ಸಹೋದರರ ಜೋಡಿಯಾಗಿ ಕೃನಾಲ್-ಹಾರ್ದಿಕ್ ಗುರುತಿಸಿಕೊಂಡರು. ಈ ಹಿಂದೆ ಅಮರ್‌ನಾಥ್ ಮತ್ತು ಪಠಾಣ್ ಸಹೋದರರು ಇದೇ ವಿಶೇಷತೆಗಾಗಿ ಗಮನ ಸೆಳೆದಿದ್ದರು.

ಮೋಹೀಂದರ್ ಅಮರ್‌ನಾಥ್ ಮತ್ತು ಸುರೀಂದರ್ ಅಮರ್‌ನಾಥ್ ಸಹೋದರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು. ಈ ಜೋಡಿ 3 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿತ್ತು. ಅನಂತರ ಇರ್ಫಾನ್ ಪಠಾಣ್ ಮತ್ತು ಯೂಸೂಫ್ ಪಠಾಣ್ ಸಹೋದರರು 8 ಏಕದಿನ ಮತ್ತು ಹಲವು ಟಿ20 ಪಂದ್ಯಗಳಲ್ಲಿ ಭಾರತ ಪರ ಆಡಿದ್ದರು.

ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತವನ್ನು ಪ್ರತಿನಿಧಿಸಿದ 2ನೇ ಸಹೋದರರ ಜೋಡಿ ಹಾರ್ದಿಕ್-ಕೃನಾನ್. ಅಂದ್ಹಾಗೆ ಭಾರತ ಬ್ಯಾಟಿಂಗ್‌ ದೌರ್ಬಲ್ಯ ತೋರಿಕೊಂಡ ಕಾರಣ ಮೊದಲ ಟಿ20 ಪಂದ್ಯದಲ್ಲಿ 80 ರನ್ ಹೀನಾಯ ಸೋಲನುಭವಿಸಿತ್ತಲ್ಲದೆ, ಸರಣಿಯಲ್ಲಿ 1-0ಯ ಹಿನ್ನಡೆ ಅನುಭವಿಸಿತು.

Story first published: Wednesday, February 6, 2019, 17:43 [IST]
Other articles published on Feb 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+