For Quick Alerts
ALLOW NOTIFICATIONS  
For Daily Alerts
 

2024ರ ಟಿ20 ವಿಶ್ವಕಪ್‌ಗೆ ರೋಹಿತ್ ಬದಲು ಈತ ನಾಯಕನಾಗಬೇಕು; ಕೃಷ್ಣಮಾಚಾರಿ ಶ್ರೀಕಾಂತ್

Hardik Pandya Should Be Team India Captain Instead Of Rohit Sharma For 2024 T20 World Cup: Krishnamachari Srikkanth

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಹಂತದಲ್ಲಿಯೇ ಮುಗ್ಗರಿಸಿದ ಭಾರತ ತಂಡ ನಿರಾಸೆಯ ಮುಖ ಹೊತ್ತು ತವರಿಗೆ ಮರಳಿದೆ.

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ ನಾಲ್ಕರ್ ಘಟ್ಟದ ಸೆಣಸಾಟದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಪರಾಭವಗೊಂಡು ಫೈನಲ್ ರೇಸ್‌ನಿಂದ ಹೊರಬಿದ್ದಿತು.

ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತ ನಂತರ ಭಾರತ ತಂಡದ ನಾಯಕತ್ವದ ಬದಲಾವಣೆಯ ಕೂಗಿ ಜೋರಾಗುತ್ತಿದೆ. ಇದಕ್ಕೆ ಧ್ವನಿಯಾಗಿ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಭಾರತ ತಂಡದ ಟಿ20 ನಾಯಕನನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಪೂರ್ಣಪ್ರಮಾಣದ ನಾಯಕನಾಗಬೇಕು

ಹಾರ್ದಿಕ್ ಪಾಂಡ್ಯ ಪೂರ್ಣಪ್ರಮಾಣದ ನಾಯಕನಾಗಬೇಕು

ಭಾರತ ತಂಡದ ಮ್ಯಾನೇಜ್‌ಮೆಂಟ್‌ 2024ರ ಟಿ20 ವಿಶ್ವಕಪ್ ವೇಳೆಗೆ ಹೊಸ ತಂಡವನ್ನು ಹೊಸದಾಗಿ ಕಟ್ಟುವ ದಾರಿಯಲ್ಲಿ ಈಗಿರುವ ನಾಯಕ ರೋಹಿತ್ ಶರ್ಮ ಅವರನ್ನು ಬದಲಾಯಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಪೂರ್ಣಪ್ರಮಾಣದ ನಾಯಕನನ್ನಾಗಿ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತಿಳಿಸಿದ್ದಾರೆ.

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ನೀಡಿದ್ದ 169 ರನ್‌ಗಳ ಚೇಸಿಂಗ್ ಅನ್ನು ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ನಾಲ್ಕು ಓವರ್ ಮತ್ತು ಹತ್ತು ವಿಕೆಟ್ ಬಾಕಿ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟಿತು. ಭಾರತದ ಬೌಲಿಂಗ್ ಪಡೆಗೆ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಜೋಡಿಯನ್ನು ನಿಯಂತ್ರಿಸಲಾಗಲಿಲ್ಲ.

ರೋಹಿತ್ ಶರ್ಮಾ ನಾಯಕತ್ವದ ಮೇಲೆ ಎಲ್ಲರ ಕಣ್ಣು

ರೋಹಿತ್ ಶರ್ಮಾ ನಾಯಕತ್ವದ ಮೇಲೆ ಎಲ್ಲರ ಕಣ್ಣು

ಈ ರೀತಿಯ ಅವಮಾನಕರವಾಗಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ನಂತರ, ಇದೀಗ ಎಲ್ಲರ ಕಣ್ಣು ರೋಹಿತ್ ಶರ್ಮಾ ನಾಯಕತ್ವ ಮತ್ತು ಅವರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಬಿದ್ದಿದೆ. ನಾಯಕತ್ವ ಬದಲಾವಣೆ ಮತ್ತು ಯುವ ಆಟಗಾರರನ್ನು ಸೇರಿಸಿಕೊಳ್ಳುವಂತೆ ಮಾಜಿ ಆಟಗಾರರಿಂದ ಒತ್ತಡ ಕೇಳಿಬರುತ್ತಿದೆ.

"ನಾನು ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದರೆ, ನೇರವಾಗಿ 2024ರ ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತೇನೆ," ಎಂದು ಮಾಜಿ ಆಯ್ಕೆ ಸಮಿತಿ ಅಧ್ಯರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಸ್ಟಾರ್ ಸ್ಪೋರ್ಟ್ಸ್ ಶೋ ಮ್ಯಾಚ್ ಪಾಯಿಂಟ್‌ನಲ್ಲಿ ಮಾತನಾಡಿದರು.

ನವೆಂಬರ್ 18ರಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ಟಿ20 ಸರಣಿಯಿಂದಲೇ ಭಾರತದ ಹೊಸ ತಂಡವನ್ನು ಕಟ್ಟುವ ಕಾರ್ಯ ಸಾಗಲಿ ಎಂದು ಮಾಜಿ ಭಾರತೀಯ ಕ್ರಿಕೆಟಿಗ ಕೆ ಶ್ರೀಕಾಂತ್ ಹೇಳಿದರು. ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಯಾವುದೇ ವಿಶ್ವಕಪ್ ಗೆಲ್ಲಲು ಆಲ್‌ರೌಂಡರ್‌ಗಳ ಅವಶ್ಯಕತೆ ಇದೆ

ಯಾವುದೇ ವಿಶ್ವಕಪ್ ಗೆಲ್ಲಲು ಆಲ್‌ರೌಂಡರ್‌ಗಳ ಅವಶ್ಯಕತೆ ಇದೆ

"2024ರ ಟಿ20 ವಿಶ್ವಕಪ್‌ಗೆ ಇಂದಿನಿಂದಲೇ ತಂಡವನ್ನು ಕಟ್ಟುವ ಕಾರ್ಯ ಶುರುವಾಗಲಿ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿಮಗೆ ಒಂದು ವಾರಗಳ ಕಾಲಾವಕಾಶವಿದೆ. ಎರಡು ವ‍ರ್ಷಗಳ ಮುಂಗಡವಾಗಿಯೇ ನಾವು ತಯಾರಿ ಮಾಡಿಕೊಳ್ಳಬೇಕು. ಇಂದಿನಿಂದ ಒಂದು ವರ್ಷದ ಕಾಲ ಪ್ರಯತ್ನಿಸಿ ನೋಡಿ, ಅದಾಗದಿದ್ದರೆ ನಿಮಗೆ ಇನ್ನೊಂದು ವರ್ಷ ಸಮಯ ಸಿಗಲಿದೆ. 2023ರಿಂದ ಮೊತ್ತೊಮ್ಮೆ ಪ್ರಯತ್ನಿಸೋಣ, ಆಗ ಉತ್ತಮ ಆಟಗಾರರ ತಂಡ ಸಿಗುತ್ತದೆ," ಎಂದು ಭಾರತದ ಮಾಜಿ ಬ್ಯಾಟರ್ ಕೃಷ್ಣಮಾಚಾರಿ ಶ್ರೀಕಾಂತ್ ತಿಳಿಸಿದರು.

ಭಾರತ ತಂಡಕ್ಕೆ ವೇಗದ ಬೌಲಿಂಗ್-ಆಲ್‌ರೌಂಡರ್‌ಗಳ ಅವಶ್ಯಕತೆ ಇದೆ. ಇದರಿಂದಾಗಿಯೇ ನಾವು 1983, 2007 ಮತ್ತು 2011ರಲ್ಲಿ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು. ಏಕೆಂದರೆ ಆ ತಂಡಗಳಲ್ಲಿ ಹೆಚ್ಚಿನ ಆಲ್‌ರೌಂಡರ್‌ಗಳಿದ್ದರು ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

Story first published: Monday, November 14, 2022, 17:26 [IST]
Other articles published on Nov 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+