ನಾನು ಕುಡಿದ ಒಂದು ಕಾಫಿ ತುಂಬಾ ದುಬಾರಿಯಾಗಿಬಿಟ್ಟಿತು: ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಸೋದರ ಕೃನಾಲ್ ಪಾಂಡ್ಯ ದಿನೇಶ್ ಕಾರ್ತಿಕ್ ಜೊತೆಗೆ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಕೊರೊನಾ ವೈರಸ್‌ನಿಂದಾಗಿ ಐಪಿಎಲ್ ಮುಂದೂಡಿರುವ ವಿಷಯದಿಂದ ಖಾಸಗೀ ವಾಹಿನಿಯ ಕಾಫಿ ವಿದ್ ಕರಣ್ ಕಾರ್ಯಕ್ರಮದ ವಿವಾದದವರೆಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಲೈವ್ ಆರಂಭಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ದಿನೇಶ್ ಕಾರ್ತಿಕ್ ವಿವಾದಾತ್ಮಕ ವಿಚಾರಗಳನ್ನು ಕೇಳಬೇಡಿ, ಯಾಕೆಂದರೆ ಆ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡು ಒಂದು ವರ್ಷವಾಗಿದೆ ಎಂದು ಮನವಿಯನ್ನು ಮಾಡಿಕೊಂಡಿದ್ದರು.
ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಾನು ಯಾವತ್ತೂ ಕಾಫಿ ಕುಡಿದವನಲ್ಲ, ಆದರೆ ಕುಡಿದ ಒಂದು ಕಾಫಿ ನನ್ನ ಪಾಲಿಗೆ ಅತ್ಯಂತ ದುಬಾರಿಯಾಯಿತು ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಮಾರಾಟವಾದ ಕಾಫಿಯಲ್ಲಿ ನಾನು ಕುಡಿದ ಆ ಕಾಫಿ ಅತ್ಯಂತ ದುಬಾರಿಯಾಗಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.
ಇದೇ ಸಂದರ್ಭದಲ್ಲಿ ಐಪಿಎಲ್ ನಡೆಯುವ ಬಗ್ಗೆಯೂ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಎಲ್ಲವೂ ಸರಿಯಾಗಿದ್ದು ಮುಚ್ಚಿದ ಬಾಗಿಲಿನಲ್ಲಿ ಈ ಬಾರಿಯ ಐಪಿಎಲ್ ನಡೆಯುವುದಾದರೆ ಅದು ಒಳ್ಳೆಯದು ಎಂದು ಹೇಳಿದ್ದಾರೆ, ಅದೊಂದು ವಿಶೇಷ ಅನುಭವವಾಗಿರುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷಾರಂಭದಲ್ಲಿ ಸ್ನೇಹಿತ ಕೆಎಲ್ ರಾಹುಲ್ ಜೊತೆಗೆ ಹಾರ್ದಿಕ್ ಪಾಂಡ್ಯ ಖಾಸಗಿ ವಾಹಿನಿಯ ಟಾಕ್ ಶೋ 'ಕಾಫಿ ವಿದ್ ಕರಣ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾತಿನ ಬರದಲ್ಲಿ ನೀಡಿದ ಹೇಳಿಕೆಯೊಂದು ದೊಡ್ಡ ವಿವಾದಕ್ಕೆ ಕಾರಣವಾಗಿ ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಇಬ್ಬರೂ ತಂಡದಿಂದ ಅಮಾನತಿನ ಶಿಕ್ಷೆಗೂ ಒಳಗಾಗಬೇಕಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications