For Quick Alerts
ALLOW NOTIFICATIONS  
For Daily Alerts
 

Team India T20 captaincy: ಬಿಸಿಸಿಐ ಗಮನ ಸೂರ್ಯಕುಮಾರ್‌ ಯಾದವ್‌ ಮೇಲೆ!

ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ ನಂತರ ನಾಯಕತ್ವದ ಪ್ರಶ್ನೆ ಜಟಿಲವಾಗಿದೆ. ಹಾರ್ದಿಕ್ ಪಾಂಡ್ಯ ಇದಕ್ಕೆ ಪ್ರಮುಖ ಸ್ಪರ್ಧಿಯಾಗಿದ್ದರು. ಆದರೆ ಈಗ ನೂತನ ಹೆಡ್‌ ಕೋಚ್‌ ಗೌತಮ್ ಗಂಭೀರ್, ಪಾಂಡ್ಯ ನಾಯಕತ್ವವನ್ನ ಬದಲಾಯಿಸಬಹುದು.

ನಾಯಕತ್ವದ ರೇಸ್‌ನಲ್ಲಿ ಭಾರತ ತಂಡದ ಕೆಲವು ಹಿರಿಯ ಆಟಗಾರರಿದ್ದು, ಇದರಲ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಹಾರ್ದಿಕ್ ನೇರ ಸ್ಪರ್ಧೆಯಲ್ಲಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವವನ್ನು ವಹಿಸಿಕೊಂಡು ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

Hardik Pandya-Suryakumar Yadav battle to lead Team India to T20 format

ಇತ್ತ ಹಾರ್ದಿಕ್ ಪಾಂಡ್ಯ 2022ರ ಟಿ20 ವಿಶ್ವಕಪ್ ಬಳಿಕ ಟೀಮ್‌ ಇಂಡಿಯಾ ತಂಡದ ನಾಯಕರಾಗಿದ್ದರು. ಆದರೆ ಈ ವರ್ಷ ಟಿ20 ನಾಯಕತ್ವವನ್ನು ರೋಹಿತ್ ಶರ್ಮಾ ಮತ್ತೆ ವಹಿಸಿಕೊಂಡರು. ಈಗ ಹಿಟ್‌ಮ್ಯಾನ್ ನಿವೃತ್ತಿಯ ನಂತರ ಟಿ20 ತಂಡದ ಕಮಾಂಡ್ ಮತ್ತೊಮ್ಮೆ ಹಾರ್ದಿಕ್ ಕೈ ಸೇರಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ಆದರೆ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಹಾರ್ದಿಕ್ ನಾಯಕತ್ವದ ಬಗ್ಗೆ ಬಿಸಿಸಿಐ ಸದಸ್ಯರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣಗಳು ಕೂಡ ಇವೆ.

ಫಿಟ್ನೆಸ್ ದೊಡ್ಡ ಸಮಸ್ಯೆ

ಹಾರ್ದಿಕ್ ಟೀಮ್‌ ಇಂಡಿಯಾ ನಾಯಕನ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಆಗಿದ್ದಾರೆ. ಆದರೆ ಹಾರ್ದಿಕ್‌ ನಾಯಕರಾಗದಿದ್ದರೆ ಫಿಟ್ನೆಸ್ ಪ್ರಮುಖ ಕಾರಣವಾಗಿರಬಹುದು. ಗಾಯದ ಸಮಸ್ಯೆಯಿಂದಾಗಿ ಸ್ಟಾರ್‌ ಆಲ್‌ರೌಂಡರ್‌ ಟೀಮ್‌ ಇಂಡಿಯಾ ಪರ ಅನೇಕ ಬಾರಿ ನಿಯಮಿತವಾಗಿ ಪ್ರಮಖ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ.

ಇನ್ನೊಂದೆಡೆ ಸೂರ್ಯಕುಮಾರ್‌ ಟಿ20 ಕ್ರಿಕೆಟ್‌ನಲ್ಲಿ ನಂಬರ್‌-1 ಬ್ಯಾಟರ್‌ ಆಗಿದ್ದಾರೆ. ಅಲ್ಲದೆ ಈ ಹಿಂದೆಯೂ ಟೀಮ್‌ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದಾರೆ.

ಟೀಮ್‌ ಇಂಡಿಯಾದ ಹಿರಿಯ ಹಾಗು ಅನುಭವಿ ಆಟಗಾರರಲ್ಲಿ ಸುರ್ಯಕುಮಾರ್‌ ಯಾದವ್‌ ಕೂಡ ಒಬ್ಬರಾಗಿರುವುದರಿಂದ ಟೀಮ್‌ ಇಂಡಿಯಾದ ಟಿ20 ನಾಯತ್ವಕವನ್ನು ಬಿಸಿಸಿಐ ಅವರಿಗೆ ನೀಡುವ ಅವಕಾಶಗಳು ಹೆಚ್ಚಿವೆ.

ಬಿಸಿಸಿಐ ಮೂಲಗಳ ಪ್ರಕಾರ, 'ಟೀಮ್‌ ಇಂಡಿಯಾ ನಾಯಕತ್ವ ತುಂಬಾ ಸಂಕೀರ್ಣವಾದ ವಿಷಯ. ಹಾರ್ದಿಕ್ ಅವರ ಫಿಟ್ನೆಸ್ ದೊಡ್ಡ ಸಮಸ್ಯೆಯಾಗಿದೆ. ಆದರೆ ಅವರು ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸೂರ್ಯಕುಮಾರ್ ಯಾದವ್ ಅವರಿಂದಲೂ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ಅವರ ನಾಯಕತ್ವವನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಗಂಭೀರ್‌ ನಿರ್ಧಾರ ಏನು?

ಟೀಮ್‌ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ಟೀಮ್‌ ಇಂಡಿಯಾದ ನೂತನ ಟಿ20 ನಾಯಕನನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.

ಜುಲೈ 26 ರಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಆರಂಭವಾಗಲಿದೆ. 3 ಪಂದ್ಯಗಳ ಟಿ20 ಸರಣಿಯ ನಂತರ ಭಾರತ ಮತ್ತು ಶ್ರೀಲಂಕಾ ನಡುವೆ ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.

Story first published: Tuesday, July 16, 2024, 17:50 [IST]
Other articles published on Jul 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+