ಪಾಕಿಸ್ತಾನಕ್ಕೆ ಟಿ20 ಕ್ರಿಕೆಟ್‌ನಲ್ಲಿ ಬಹುವಾಗಿ ಕಾಡಿರುವ ಪ್ಲೇಯರ್: ಸ್ಟಾರ್ ಆಟಕ್ಕೆ ಎದುರಾಳಿ ಸುಸ್ತು
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲರ ಕಣ್ಣುಗಳು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯದ ಮೇಲೆ ನೆಟ್ಟಿದೆ. ಈ ಪಂದ್ಯದಲ್ಲಿ ಅಬ್ಬರಿಸಲು ಉಭಯ ತಂಡದ ಆಟಗಾರರು ಸಿದ್ಧರಾಗಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಆದರೆ ಪಾಕಿಸ್ತಾನ ತಂಡ ಅಂಗಳಕ್ಕೆ ಇಳಿಯುವ ಮುನ್ನವೇ ಟೀಮ್ ಇಂಡಿಯಾದ ಆ ಒಬ್ಬ ಪ್ಲೇಯರ್ ಭಯ ಬಹುವಾಗಿ ಕಾಡುತ್ತಿದೆ. ಈ ಪ್ಲೇಯರ್ ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದಾರೆ. ಹೀಗಾಗಿ ಇವರ ಆಟಕ್ಕೆ ಕಡಿವಾಣ ಹಾಕುವುದು ಹೇಗೆ ಎಂಬ ಪ್ರಶ್ನೆ ಪಾಕ್ ತಂಡದ್ದಾಗಿದೆ. ಆ ಪ್ಲೇಯರ್ ಯಾರು ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ವೇಳೆ ಎಲ್ಲರ ಕಣ್ಣುಗಳು ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮೇಲೆ ನೆಟ್ಟಿರಲಿವೆ. ಆದರೆ ಈ ಪ್ಲೇಯರ್ ಪ್ರದರ್ಶನವನ್ನು ಯಾರೂ ಮರೆಯುವಂತಿಲ್ಲ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಪಾಕ್ ತಂಡವನ್ನು ಬಹುವಾಗಿ ಕಾಡುವ ಪ್ಲೇಯರ್.

ಪಾಕಿಸ್ತಾನ ವಿರುದ್ಧದ ಪಂದ್ಯ ಎಂದಾಗಲೆಲ್ಲಾ ವಿರಾಟ್ ಕೊಹ್ಲಿ ಸೂಪರ್ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಆದರೆ ಈಗ ಅವರು ನಿವೃತ್ತರಾಗಿದ್ದಾರೆ. ಇವರ ಅನುಪಸ್ಥಿತಿಯ ಲಾಭವನ್ನು ಪಡೆಯಲು ಪಾಕ್ ಸಹ ಪ್ಲ್ಯಾನ್ ಮಾಡಿಕೊಂಡಿರಬೇಕು. ಆದರೆ ಇದಕ್ಕೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವಕಾಶವನ್ನೇ ನೀಡುವುದಿಲ್ಲ. ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನ ನಂಬರ್ 1 ಆಲ್‌ರೌಂಡರ್ ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಇ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರು ಈ ಹಿಂದೆ ನಡೆದ ಏಷ್ಯಾ ಕಪ್‌ನಲ್ಲಿ ಪಾಕ್ ತಂಡವನ್ನು ಬಹುವಾಗಿ ಕಾಡಿದ್ದಾರೆ.
ಪಾಕ್‌ಗೆ ಕಾಡುವ ಹಾರ್ದಿಕ್
ಭಾರತ ಹಾಗೂ ಪಾಕ್ ತಂಡಗಳು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿಗೆ ಮೀರ್‌ಪುರ್‌ನಲ್ಲಿ ಕಾದಾಟವನ್ನು ನಡೆಸಿದ್ದವು. ಈ ಪಂದ್ಯದಲ್ಲಿ ಪಾಕ್ 83 ರನ್‌ಗಳಿಗೆ ಆಲೌಟ್ ಆಗಿತ್ತು. ಈ ವೇಳೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಿಗುವಿನ ದಾಳಿ ನಡೆಸಿದ್ದರು. ಹಾರ್ದಿಕ್ ಈ ಪಂದ್ಯದಲ್ಲಿ 3.3 ಓವರ್ ಬೌಲ್ ಮಾಡಿ 8 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಇನ್ನು ಉಭಯ ತಂಡಗಳು 2022ರಲ್ಲೂ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಪಾಕ್ 147 ರನ್‌ಗೆ ಆಲೌಟ್ ಆಗಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ 4 ಓವರ್ ಬೌಲಿಂಗ್ ನಡೆಸಿ 25 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ ಬ್ಯಾಟಿಂಗ್‌ನಲ್ಲೂ 37 ರನ್ ಕಲೆ ಹಾಕಿದ್ದರು. ಇದೇ ಆವೃತ್ತಿಯಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿ ಆದಾಗ ಹಾರ್ದಿಕ್ ಕೇವಲ ಒಂದು ವಿಕೆಟ್ ಪಡೆದಿದ್ದರು.

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಹಾರ್ದಿಕ್ ಪಾಕ್ ವಿರುದ್ಧ ಆಡಿದ ಮೂರು ಟಿ20 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆ ಟಿ20 ಪಂದ್ಯಗಳಲ್ಲಿ ಪಾಕ್ ವಿರುದ್ಧ ಪಾಂಡ್ಯ 7 ಪಂದ್ಯಗಳಲ್ಲಿ 91 ರನ್ ಬಾರಿಸಿದ್ದು, 13 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಇವರನ್ನು ಹೇಗೆ ನಿಯಂತ್ರಿಸುವುದು ಎಂಬ ಭಯ ಪಾಕ್‌ಗೆ ಆರಂಭವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications