Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಮೆಂಟರ್‌ ದಿನೇಶ್‌ ಕಾರ್ತಿಕ್‌, ಮುಂಬೈ ಕ್ಯಾಪ್ಟನ್‌ ಹಾರ್ದಿಕ್‌ ಭೇಟಿ! ಸಂಚಲನ

ಹಾರ್ದಿಕ್ ಪಾಂಡ್ಯ ಮುಂದಿನ ಸೀಸನ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸೇರುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಆರ್‌ಸಿಬಿ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿದೆ.

ಜೂನ್ 1 ರಂದು ಅಹಮದಾಬಾದ್‌ನ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದರು. ಪ್ರಸ್ತುತ ಆರ್‌ಸಿಬಿಯ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ತರಬೇತುದಾರರಾಗಿರುವ ದಿನೇಶ್ ಕಾರ್ತಿಕ್ ಜೊತೆಗಿನ ಈ ಭೇಟಿ, ಹಾರ್ದಿಕ್ ಆರ್‌ಸಿಬಿಗೆ ಸೇರುವ ನಿರ್ಧಾರದ ಮೊದಲ ಹೆಜ್ಜೆಯಾಗಿರಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ.

Hardik Pandya

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆರ್‌ಸಿಬಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ ಈ ಸಾಧನೆ ಮಾಡಿದ ಮೂರನೇ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ತಂಡದ್ದಾಗಿದೆ. ಇನ್ನು ಹಾರ್ದಿಕ್ ಪಾಂಡ್ಯ ಮುಂದಾಳತ್ವದಲ್ಲಿ ಮುಂಬೈ ಇಂಡಿಯನ್ಸ್‌ ನೀರಸ ಪ್ರದರ್ಶನ ನೀಡಿದ್ದು 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳೊಂದಿಗೆ 9ನೇ ಸ್ಥಾನಿಯಾಗಿ ನಿರಾಶೆ ಮೂಡಿಸಿದೆ.

ಹೊಂದಾಣಿಕೆಯ ಕೊರತೆ

2024ರಲ್ಲಿ ರೋಹಿತ್ ಶರ್ಮಾ ಬದಲಿಗೆ ಮುಂಬೈ ತಂಡದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಹಿರಿಯ ಆಟಗರರೊಂದಿಗೆ ಹೊಂದಾಣಿಕೆ ಕೊರೆತೆ ಎದ್ದು ಕಾಣುತ್ತಿತ್ತು. ಈ ಆವೃತ್ತಿಯ ಮಧ್ಯದಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ತಂಡ ತೊರೆಯಲು ನಿರ್ಧರಿಸಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆ ಮೂಲಗಳು ತಿಳಿಸಿವೆ.

ಪಿಟಿಐ ವರದಿಯಂತೆ, 2021ರಲ್ಲಿ ಅವರು ಹೊರನಡೆದಾಗ ಮುಂಬೈ ತಂಡದಲ್ಲಿದ್ದ ವಾತಾವರಣ, 2024ರಲ್ಲಿ ಮತ್ತೆ ಬಂದಾಗ ಸಂಪೂರ್ಣ ಬದಲಾಗಿತ್ತು. ಹಿರಿಯ ಆಟಗಾರರೆಲ್ಲರೂ ಒಂದೇ ಸಾಲಿನಲ್ಲಿದ್ದರು. ಒಬ್ಬ ಆಟಗಾರ ಎಷ್ಟು ತಾನೇ ಸಹಿಸಿಕೊಳ್ಳಬಲ್ಲ? ಕಳೆದ 3 ವರ್ಷಗಳು ಅವರಿಗೆ ಸುಲಭವಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ ಈಗಾಗಲೇ ಆರ್‌ಸಿಬಿ ತಂಡದಲ್ಲಿದ್ದಾರೆ. ಅತ್ಯುತ್ತಮ ಆಲ್‌ರೌಂಡರ್ ಹಾರ್ದಿಕ್ ಸೇರಿಕೊಂಡರೆ ತಂಡಕ್ಕೆ ಹೆಚ್ಚು ಬಲ ಸಿಗಲಿದೆ. ಅತ್ತ, ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕಳಪೆ ಪ್ರದರ್ಶನ ಮತ್ತು ಆಂತರಿಕ ಸಮಸ್ಯೆಗಳಿಂದಾಗಿ ಹೊಸ ನಾಯಕನ ಹುಡುಕಾಟದಲ್ಲಿದೆ.

Story first published: Thursday, June 4, 2026, 19:05 [IST]
Other articles published on Jun 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+