Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಬ್ಬರನ್ನೊಬ್ಬರು ಗುರಾಯಿಸಿದ ಹಾರ್ದಿಕ್-ಹಾರ್ಡಸ್: ವೈರಲ್ ವಿಡಿಯೋ

Hardik vs Hardus - Pandya and Viljoen involved in mid-pitch staredown

ಮುಂಬೈ, ಏಪ್ರಿಲ್ 11: ಬುಧವಾರ (ಏಪ್ರಿಲ್ 10) ಐಪಿಎಲ್ 24ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ 3 ವಿಕೆಟ್ ರೋಚಕ ಗೆಲುವನ್ನಾಚರಿಸಿತ್ತು. ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಮುಂಬೈ ನಾಯಕ ಕೀರನ್ ಪೊಲಾರ್ಡ್ ತಂಡಕ್ಕೆ ಅಚ್ಚರಿಯ ಫಲಿತಾಂಶ ತಂದಿದ್ದರು. ಇದೇ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಮತ್ತು ಹಾರ್ಡಸ್ ವಿಲ್ಜೋಯೆನ್ ಪರಸ್ಪರ ಗುರಾಯಿಸಿಕೊಂಡಿದ್ದ ಸಂಗತಿಯೂ ನಡೆದಿತ್ತು.

ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ ವೇಳೆ ಈ ದೃಶ್ಯ ಸೆರೆಯಾಗಿತ್ತು. ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಮತ್ತು ಕಿಂಗ್ಸ್ XI ಪಂಜಾಬ್ ವೇಗಿ ಹಾರ್ಡಸ್ ಅರೆಕ್ಷಣ ಎದುರಾಬಾದುರು ನಿಂತು ಅಸ್ಪಷ್ಟ ರೀತಿಯಲ್ಲಿ ಏನೋ ಸಂಭಾಷಣೆ ನಡೆಸಿದ್ದರು. ಆದರೆ ಇದು ಅತಿರೇಕಕ್ಕೆ ಹೋಗಲಿಲ್ಲ ಅಷ್ಟೆ.

ಎಂಐ ಇನ್ನಿಂಗ್ಸ್‌ನ 12ನೇ ಓವರ್‌ ವೇಳೆ ಇಶಾನ್ ಕಿಶನ್ ರನ್ ಔಟ್ ಆಗಿ ನಿರ್ಗಮಿಸಿದಾಗ ಪಾಂಡ್ಯ ಮೈದಾನಕ್ಕಿಳಿದಿದ್ದರು. ಅದೇ ವೇಳೆ 13ನೇ ಓವರ್‌ ಎಸೆಯೋಕೆ ವಿಲ್ಜೋಯೆನ್ ಬಂದಿದ್ದರು. ಆಗ ಎದುರಾ ಎದುರು ನಿಂತ ಇಬ್ಬರಲ್ಲಿ ಒಬ್ಬ 'ನಿನ್ನನ್ನು ಬೇಗ ಪೆವಿಲಿಯನ್‌ಗೆ ಕಳಿಸ್ತೀನಿ' ಅಂದರಿರಬೇಕು. ಅದಕ್ಕೆ ಇನ್ನೊಬ್ಬ 'ನೀನು ಎಸೆಯೋ ಚೆಂಡನ್ನು ಪೆವಿಲಿಯನ್‌ಗೆ ಅಟ್ತೀನಿ ನೋಡ್ತಿರು' ಅಂದರೇನೋ. ಒಟ್ಟಿನಲ್ಲಿ ಇಬ್ಬರು ಮಾತನಾಡಿದ್ದು ಮಾತ್ರ ಸರಿಯಾಗಿ ಕೇಳಿಸಿಲ್ಲ.

ಅಂತೂ ಇಬ್ಬರೂ ಎದುರೆದುರು ನಿಂತು ಸಂಭಾಷಣೆ ನಡೆಸಿದ್ದ ಈ ವಿಡಿಯೋವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವಿಟರ್‌ನಲ್ಲಿ ಹಾಕಿಕೊಂಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಲೂ ಇದೆ. ಅಂದ್ಹಾಗೆ ಈ ಪಂದ್ಯದಲ್ಲಿ 31 ಎಸೆತಗಳಿಗೆ 83 ರನ್ ಬಾರಿಸಿದ್ದ ಪೊಲಾರ್ಡ್ ಮುಂಬೈಯನ್ನು ಗೆಲ್ಲಿಸಿದ್ದರು.

Story first published: Thursday, April 11, 2019, 16:14 [IST]
Other articles published on Apr 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+