For Quick Alerts
ALLOW NOTIFICATIONS  
For Daily Alerts
 

Haris Rauf: ಪಾಕ್ ವೇಗಿ ಹ್ಯಾರಿಸ್ ರೌಫ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ?

ಹ್ಯಾರಿಸ್ ರೌಫ್‌.. ಈ ಹೆಸರನ್ನು ಟೀಮ್ ಇಂಡಿಯಾ ಫ್ಯಾನ್ಸ್‌ ಮರೆಯಲು ಸಾಧ್ಯವೇ ಇಲ್ಲ. ಈ ಪಾಕ್ ವೇಗಿಯ ದಾಳಿಯಲ್ಲೇ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್‌ ಕೊಹ್ಲಿ, ಬೌಲರ್‌ ತಲೆಯ ಮೇಲೆ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಈ ಸಿಕ್ಸರ್‌ನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಪಾಕ್‌ ವೇಗಿ ಹ್ಯಾರಿಸ್‌ ರೌಫ್‌ ಹೀಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೊಮ್ಮೆ ಸುದ್ದಿಗೆ ಆಹಾರವಾಗಿದ್ದಾರೆ.

ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಹ್ಯಾರಿಸ್ ರೌಫ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಚಿಂತನೆಯಲ್ಲಿದ್ದಾರೆ. ಮಾಧ್ಯಮ ವರದಿಗಳಿಂದ ಹಾರಿಸ್ ರೌಫ್ ಬಗ್ಗೆ ಬಿಗ್‌ ಅಪಡೇಟ್‌ ಹೊರ ಬಂದಿದೆ. ಇತ್ತೀಚಿಗೆ ಪಾಕ್‌ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಮೂರು ಟೆಸ್ಟ್‌ ಪಂದ್ಯಗಳನ್ನು ಆಡಿತ್ತು. ಈ ಸರಣಿಯಿಂದ ಹ್ಯಾರಿಸ್ ರೌಫ್ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು. ಮತ್ತು ನಂತರ ಬಿಗ್ ಬ್ಯಾಷ್ ಲೀಗ್ ಆಡುತ್ತಿದ್ದರು. ಟೆಸ್ಟ್ ಸರಣಿಯಿಂದ ತಮ್ಮ ಹೆಸರನ್ನು ಹಿಂಪಡೆದ ನಂತರ, ರೌಫ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು, ನಂತರ ಅವರ ನಿವೃತ್ತಿಯ ಸುದ್ದಿ ಭಾರೀ ಚರ್ಚೆಯಲ್ಲಿದೆ.

Haris Rauf Contemplated Shock International Retirement

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡದಿರುವುದು ಈಗ ರೌಫ್‌ಗೆ ವೃತ್ತಿ ಬದುಕಿಗೆ ಕಂಟಕವಾಗು ರೀತಿ ಕಾಣುತ್ತಿದೆ. ಟೆಸ್ಟ್ ಸರಣಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ಪಾಕಿಸ್ತಾನದ ನಿರ್ದೇಶಕ ಮೊಹಮ್ಮದ್ ಹಫೀಜ್ ಮತ್ತು ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್ ಅವರಿಗೆ ಛೀಮಾರಿ ಹಾಕಿದ್ದರು. ಇದೀಗ ಪಾಕಿಸ್ತಾನಿ ವೇಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟಿ20 ಲೀಗ್‌ಗಳ ಬದಲಿಗೆ ರಾಷ್ಟ್ರೀಯ ತಂಡದಲ್ಲಿ ಆಡುವತ್ತ ಹೆಚ್ಚು ಗಮನಹರಿಸುವಂತೆ ತಂಡದ ಮ್ಯಾನೇಜ್‌ಮೆಂಟ್ ರೌಫ್‌ಗೆ ತಿಳಿಸಿತ್ತು.

ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಹ್ಯಾರಿಸ್ ಟೀಕೆಗಳಿಂದ ತುಂಬಾ ನಿರಾಸೆಗೊಂಡಿದ್ದಾರೆ. ಮತ್ತು ಒಂದು ಹಂತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದರು. ಆದರೆ ಸ್ನೇಹಿತರು ಮತ್ತು ಕುಟುಂಬದ ಸಲಹೆಯ ನಂತರ ಅವರು ಹಾಗೆ ಮಾಡದಿರಲು ನಿರ್ಧರಿಸಿದರು. ಆದಾಗ್ಯೂ, ಈ ವಿಷಯಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

Haris Rauf Contemplated Shock International Retirement

ಹ್ಯಾರಿಸ್ ಟೆಸ್ಟ್ ಕ್ರಿಕೆಟ್ ಆಡಲು ಹಿಂದೆಟು ಹಾಕುತ್ತಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಟೆಸ್ಟ್ ಆಡಿದ್ದಾರೆ, ಇದರಲ್ಲಿ ಅವರು 13 ಓವರ್‌ಗಳ ನಂತರ ಗಾಯಗೊಂಡರು. ಇದಾದ ನಂತರ ಅವರು ಟೆಸ್ಟ್ ಕ್ರಿಕೆಟ್‌ ಆಡಿಲ್ಲ. ಪಾಕಿಸ್ತಾನದ ಮಾಜಿ ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಕೂಡ ಹ್ಯಾರಿಸ್‌ಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡುವಂತೆ ಸಲಹೆ ನೀಡಿದರು. ಆದರೆ ವೇಗಿ ಅವರ ಸಲಹೆಯನ್ನು ಕೇಳಲಿಲ್ಲ ಮತ್ತು ಟೆಸ್ಟ್ ಆಡಲು ಒಪ್ಪಲಿಲ್ಲ.

ಹ್ಯಾರಿಸ್ ತಮ್ಮ ವೃತ್ತಿ ಜೀವನದಲ್ಲಿ 1 ಟೆಸ್ಟ್, 37 ಏಕದಿನ ಮತ್ತು 64 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಹ್ಯಾರಿಸ್ 1 ವಿಕೆಟ್ ಪಡೆದಿದ್ದಾರೆ. ಇದಲ್ಲದೆ, ಏಕದಿನದ 37 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ ಅವರು 26.40 ಸರಾಸರಿಯಲ್ಲಿ 69 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯ 62 ಇನ್ನಿಂಗ್ಸ್‌ಗಳಲ್ಲಿ ಪಾಕಿಸ್ತಾನದ ವೇಗಿ 21.29 ಸರಾಸರಿಯಲ್ಲಿ 88 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Tuesday, January 16, 2024, 16:04 [IST]
Other articles published on Jan 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+