ಭಾರತ ಮಹಿಳಾ ಕ್ರಿಕೆಟ್ ಏಕದಿನ ತಂಡದ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ನೇಮಕ: ODI, T20 ಸ್ಕ್ವಾಡ್ ಇಲ್ಲಿದೆ

ಭಾರತ ಮಹಿಳಾ ಕ್ರಿಕೆಟ್‌ನ ಲೆಜೆಂಡ್ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಭಾರತ ಮಹಿಳಾ ಕ್ರಿಕೆಟ್ ಏಕದಿನ ತಂಡದ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಅನ್ನು ನೇಮಕ ಮಾಡಲಾಗಿದೆ.
ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಮಹಿಳಾ ಏಕದಿನ ತಂಡದ ನಾಯಕಿಯಾಗಿ ಹರ್ಮನ್‌ರನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಟಿ20 ನಾಯಕತ್ವದ ಜೊತೆಗೆ ಏಕದಿನ ನಾಯಕತ್ವನ್ನು ನಿಭಾಯಿಸಲಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳನ್ನ ಕ್ಯಾಂಡಿಯಲ್ಲಿ ಆಡಲಿದೆ. ಇದರ ಜೊತೆಗೆ ಮೂರು ಟಿ20 ಪಂದ್ಯಗಳನ್ನ ಡಂಬುಲ್ಲಾದಲ್ಲಿ ಆಡಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.
ಇನ್ನು 39 ವರ್ಷ ವಯಸ್ಸಿನ ಜೂಲನ್ ಗೋಸ್ವಾಮಿ, ಇನ್ನೂ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿಲ್ಲ, ಸ್ನೇಹ ರಾಣಾ ಜೊತೆಗೆ ತಂಡದಲ್ಲಿ ಸ್ಥಾನವನ್ನೂ ಸಹ ಕಂಡುಕೊಂಡಿಲ್ಲ. ಕೇವಲ ಒಂದು ಏಕದಿನ ಪಂದ್ಯವನ್ನು ಆಡಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಹರ್ಲೀನ್ ಡಿಯೋಲ್ ಅವರನ್ನು ಏಕದಿನ ಸ್ಕ್ವಾಡ್‌ನಲ್ಲಿ ಸೇರಿಸಿಕೊಳ್ಳಲಾಗಿದೆ.
ಶ್ರೀಲಂಕಾ ಪ್ರವಾಸಕ್ಕೆ ಭಾರತ ಮಹಿಳಾ ಏಕದಿನ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಎಸ್. ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರಾನ್ ಬಹದ್ದೂರ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ , ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್.
ಇನ್ನು ಟಿ20 ತಂಡದಲ್ಲಿಯೂ ಸಹ ಜೆಮಿಮಾ ರಾಡ್ರಿಗಸ್ ಸ್ಥಾನ ತಪ್ಪಿಸಿಕೊಂಡಿದ್ದು, ಎಡಗೈ ಸಾಂಪ್ರದಾಯಿಕ ಬೌಲರ್ ರಾಧಾ ಯಾದವ್ ಅವರು ಕಂಬ್ಯಾಕ್ ಆಡಿದ್ದಾರೆ. ಈಕೆ ತಮ್ಮ ಕೊನೆಯ ಮತ್ತು ಏಕೈಕ ಏಕದಿನ ಪಂದ್ಯವನ್ನು ಮಾರ್ಚ್ 2021 ರಲ್ಲಿ ಆಡಿದ್ದಾರೆ. ತಂಡದಲ್ಲಿ ಏಕ್ತಾ ಬಿಶ್ತ್‌ಗೆ ಯಾವುದೇ ಸ್ಥಾನವಿಲ್ಲ.
ಶ್ರೀಲಂಕಾ ಪ್ರವಾಸಕ್ಕೆ ಭಾರತ ಮಹಿಳಾ ಟಿ20 ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪ), ಎಸ್ ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರಾನ್ ಬಹದ್ದೂರ್, ರಿಚಾ ಘೋಷ್ (ವಿಕೆಟ್ ಕೀಪ), ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ , ಜೆಮಿಮಾ ರೋಡ್ರಿಗಸ್, ರಾಧಾ ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications