ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದ ಹರ್ಮನ್‌ಪ್ರೀತ್ ಕೌರ್: ವಿಡಿಯೋ

ಆ್ಯಂಟಿಗುವಾ, ನವೆಂಬರ್ 2: ಹರ್ಮನ್‌ಪ್ರೀತ್ ಕೌರ್ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಬ್ಯಾಟಿಂಗ್‌ಗಾಗಿ ಹೆಚ್ಚಾಗಿ ಗಮನ ಸೆಳೆಯುವವರು. ಆದರೆ ಶುಕ್ರವಾರ (ನವೆಂಬರ್ 2) ಆ್ಯಂಟಿಗುವಾದಲ್ಲಿ ನಡೆದ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೌರ್, ಅದ್ಭುತ ಕ್ಯಾಚ್‌ಗಾಗಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡರು.
ಭಾರತದ ಮಹಿಳಾ ತಂಡ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಆ್ಯಂಟಿಗುವಾದ ನಾರ್ತ್‌ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿದ್ದಾರೆ. ಕೌರ್ ಕ್ಯಾಚ್‌ನಿಂದಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿಂಡೀಸ್ ನಾಯಕಿ ಸ್ಟಫಾನಿ ಟೇಲರ್ 94 ರನ್‌ಗೆ ಪೆವಿಲಿಯನ್ ದಾರಿ ಹಿಡಿಯಬೇಕಾಯ್ತು.
ಪಂದ್ಯದ ಕೊನೇ ಎಸೆತ ಅಂದರೆ 50ನೇ ಓವರ್‌ನಲ್ಲಿ ಏಕ್ತಾ ಬಿಶ್ತ್ ಎಸೆತಕ್ಕೆ ಸ್ಟಫಾನಿ ಲಾಂಗ್ ಆನ್ ನತ್ತ ದೊಡ್ಡ ಹೊಡೆತ ಕೊಟ್ಟರು. ಅದು ಬಹುತೇಕ ಸಿಕ್ಸ್ ಅನ್ನಿಸುವುದರಲ್ಲಿತ್ತು. ಆದರೆ ಬೌಂಡರಿ ಲೈನ್‌ನಲ್ಲಿ ನಿಂತಿದ್ದ ಹರ್ಮನ್‌ಪ್ರೀತ್ ಹಾರಿ, ಸಿಕ್ಸ್ ಗೆರೆ ದಾಟುವುದರಲ್ಲಿದ್ದ ಚೆಂಡನ್ನು ಹಿಡಿದುಬಿಟ್ಟರು. ಅತ್ತ ಶತಕದ ನಿರೀಕ್ಷೆಯಲ್ಲಿದ್ದ ಸ್ಟಫಾನಿ, ದಂಗಾಗಬೇಕಾಯ್ತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಿದ್ದ ವೆಸ್ಟ್ ಇಂಡೀಸ್ ವನಿತೆಯರು, ನತಾಶ ಮೆಕ್‌ಲೀನ್ 51, ಸ್ಟೆಫಾನಿ 94, ಚೆಡಿಯನ್ ನೇಷನ್ 43 ರನ್ ಕೊಡುಗೆಯಿಂದ 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 225 ರನ್ ಮಾಡಿದ್ದರು. ಭಾರತ, ಪ್ರಿಯಾ ಪೂನಿಯಾ 75, ಜೆಮಿಮಾ ರೋಡ್ರಿಗಸ್ 41, ಪೂನಮ್ ರಾವತ್ 22, ಮಿಥಾಲಿ ರಾಜ್ 20 ರನ್‌ನೊಂದಿಗೆ 50 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 224 ರನ್ ಬಾರಿಸಿ ಕೇವಲ 1 ರನ್‌ನಿಂದ ಸೋತಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications