ಬಿಗ್ ಬ್ಯಾಷ್ ಲೀಗ್ ನಲ್ಲಿ ಬ್ಯಾಟ್ ಬೀಸಲಿದ್ದಾರೆ ಹರ್ಮನ್ ಪ್ರೀತ್, ಸ್ಮೃತಿ

ಮುಂಬೈ, ನವೆಂಬರ್ 27: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಹಿಳೆಯರ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯೂಬಿಬಿಎಲ್) ನಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಅವರು ಆಡಲಿದ್ದಾರೆ.
ಭಾರತದ ಮಹಿಳೆಯರ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಅವರು ಸಿಡ್ನಿ ಥಂಡರ್ ಪರ ಮೊದಲ ಸೀಸನ್ ನಲ್ಲಿ 12 ಇನ್ನಿಂಗ್ಸ್ ಗಳಲ್ಲಿ 296ರನ್ ಚೆಚ್ಚಿದ್ದರು. 59.20ರನ್ ಸರಾಸರಿಯಂತೆ 117 ಸ್ಟ್ರೈಕ್ ರೇಟ್ ನಂತೆ ರನ್ ಗಳಿಸಿದ್ದ ಹರ್ಮನ್ ಪ್ರೀತ್ ಅವರು ಟೂರ್ನಮೆಂತ್ ನ ಆಟಗಾರ್ತಿ ಎನಿಸಿಕೊಂಡಿದ್ದರು.
ಭಾರತ ತಂಡದ ಉಪ ನಾಯಕಿ ಸ್ಮೃತಿ ಮಂಧಾನ ಅವರು ಹೊಬರ್ಟ್ ಹರಿಕೇನ್ಸ್ ಪರ ಆಡಲಿದ್ದಾರೆ. ಈ ಮುಂಚೆ ಬ್ರಿಸ್ಬೇನ್ ಹೀಟ್ ಪರ ಆಡಿದ್ದರು.
2016ರಲ್ಲಿ ತಾಸ್ಮೇನಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿರುವ ಸ್ಮೃತಿ ಅವರ ಮೇಲೆ ಭಾರಿ ನಿರೀಕ್ಷೆಗಳಿವೆ ಎಂದು ಹರಿಕೇನ್ಸ್ ತಂಡದ ಕೊಚ್ ಸಾಲಿಯನ್ ಬ್ರಿಗ್ಸ್ ಹೇಳಿದ್ದಾರೆ.
Story first published: Tuesday, November 27, 2018, 15:58 [IST]
Other articles published on Nov 27, 2018
Read in English: Harmanpreet Kaur, Mandhana in WBBL
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications