ಮಹಿಳಾ ಸೂಪರ್ ಲೀಗ್: ಆರು ಸಿಕ್ಸರ್ ಸಿಡಿಸಿದ ಹರ್ಮನ್ ಪ್ರೀತ್ ಕೌರ್

ಬ್ಲ್ಯಾಕ್‌ಪೂಲ್, ಆಗಸ್ಟ್ 15: ಇಂಗ್ಲೆಂಡ್‌ನ ಸ್ಟೇನ್ಲಿ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಕ್ರಿಕೆಟ್ ಸೂಪರ್ ಲೀಗ್ ಟಿ20 ಪಂದ್ಯದಲ್ಲಿ ಭಾರತದ ಹರ್ಮನ್ ಪ್ರೀತಿ ಕೌರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಯಾರ್ಕ್‌ಶೈರ್ ಡೈಮಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಂಕಾಶೈರ್ ಥಂಡರ್ ತಂಡದ ಹರ್ಮನ್ ಪ್ರೀತ್ ಕೌರ್ ಕೇವಲ 44 ಎಸೆತಗಳಲ್ಲಿ 74 ರನ್ ಚಚ್ಚಿದರು. ಇದರಲ್ಲಿ 4 ಬೌಂಡರಿಗಳಿದ್ದರೆ, 6 ಭರ್ಜರಿ ಸಿಕ್ಸರ್‌ಗಳಿದ್ದವು.
ಹರ್ಮನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಲಂಕಾಶೈರ್ ಒಂಬತ್ತು ರನ್‌ಗಳ ಗೆಲುವು ಸಾಧಿಸಿತು.
ಲಂಕಾಶೈರ್ ಪರವಾಗಿ ಹರ್ಮನ್ ಮತ್ತು ಆರಂಭಿಕ ಆಟಗಾರ್ತಿ ನಿಕೋಲ್ ಬೋಲ್ಟನ್ (46) ಹೊರತುಪಡಿಸಿ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಕಂಡುಬರಲಿಲ್ಲ.
155 ರನ್‌ಗಳ ಗುರಿ ಬೆನ್ನತ್ತಿದ ಯಾರ್ಕ್‌ಶೈರ್ ತಂಡವು ಕ್ಯಾಥರಿನ್ ಬ್ರಂಟ್ ಅವರ ಆಲ್‌ರೌಂಡ್ ಪ್ರದರ್ಶನದ ಹೊರತಾಗಿಯೂ (25 ಎಸೆತಗಳಲ್ಲಿ ಅಜೇಯ 44 ರನ್ ಮತ್ತು ಮೂರು ವಿಕೆಟ್) ಗೆಲುವು ಸಾಧಿಸಲು ವಿಫಲವಾಯಿತು.
ಮಹಿಳಾ ಲೀಗ್‌ನ ಪಾದಾರ್ಪಣೆಯ ಪಂದ್ಯದಲ್ಲಿ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟಿದ್ದ ಹರ್ಮನ್ ಪ್ರೀತ್, ನಂತರದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದರು.
ಸಂಕ್ಷಿಪ್ತ ಸ್ಕೋರ್
ಲಂಕಾಶೈರ್ ಥಂಡರ್: 154/9 (20) ನಿಕೋಲ್ ಬೋಲ್ಟನ್ 46 , ಹರ್ಮನ್ ಪ್ರೀತ್ ಕೌರ್ 74, ಕ್ಯಾಥರಿನ್ ಬ್ರಂಟ್ 22/3, ಬೆತ್ ಲಾಂಗ್‌ಸ್ಟನ್ 12/2
ಯಾರ್ಕ್‌ಶೈರ್ ಡೈಮಂಡ್ಸ್: 145/8 (20) ಅಲೈಸ್ ಡೇವಿಡ್ಸನ್ ರಿಚರ್ಡ್ಸ್ 33, ಕ್ಯಾಥರಿನ್ ಬ್ರಂಟ್ 44*, ಬೆತ್ ಮೂನಿ 25, ಅಲೆಕ್ಸ್ ಹಾರ್ಟ್ಲಿ, 27/2
ಫಲಿತಾಂಶ: ಲಂಕಾಶೈರ್ ಥಂಡರ್ ತಂಡಕ್ಕೆ 9 ರನ್ ಗೆಲುವು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications