Harry Brook: ಶತಕ ಬಾರಿಸಿ ಹಲವು ದಾಖಲೆ ಬರೆದ ಹ್ಯಾರಿ ಬ್ರೂಕ್
ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಪಂದ್ಯ ಮಂಗಳವಾರ ನಡೆಯಿತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್ 2 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು. ಈ ಮೂಲಕ ಇಂಗ್ಲೆಂಡ್ ಟೂರ್ನಿಯ ಸೆಮಿಫೈನಲ್ಸ್‌ಗೆ ಪ್ರವೇಶ ಪಡೆಯಿತು. ಇಂಗ್ಲೆಂಡ್ ಪರ ನಾಯಕ ಹ್ಯಾರಿ ಬ್ರೂಕ್ (Harry Brook) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ದಾಖಲಿಸಿದರು. ಭರ್ಜರಿ ಪ್ರದರ್ಶನ ನೀಡಿದ ಬ್ರೂಕ್ ಇತಿಹಾಸ ನಿರ್ಮಿಸಿದರು.
ಸೂಪರ್ 8 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಆರಂಭಿಕ ಆಟಗಾರ ಸಾಹೀಬ್‌ಜಾದ ಫರ್ಹಾನ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 45 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿದರು. ಇವರ ಸೊಗಸಾದ ಆಟದ ನೆರವಿನಿಂದ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಪರ ಹ್ಯಾರಿ ಬ್ರೂಕ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು. ಇವರು 51 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 100 ರನ್ ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್ 19.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಸೇರಿಸಿ ಜಯ ಸಾಧಿಸಿತು.

ಹ್ಯಾರಿ ಬ್ರೂಕ್ ಅವರ ಭರ್ಜರಿ ಶತಕದ ಮೂಲಕ ಹಲವು ದಾಖಲೆಗಳನ್ನು ಬರೆದರು. ಬ್ರೂಕ್ ಟಿ20 ವಿಶ್ವಕಪ್‌ನಲ್ಲಿ ಶತಕ ಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರ. ಈ ದಾಖಲೆಯ ಜೊತೆಗೆ, ಬ್ರೂಕ್ ಹಲವಾರು ಇತರ ದಾಖಲೆಗಳನ್ನು ಸಹ ನಿರ್ಮಿಸಿದರು.
ಬ್ರೂಕ್ ನಿರ್ಮಿಸಿದ ದಾಖಲೆಗಳ ಪಟ್ಟಿ
ಈ ಭರ್ಜರಿ ಶತಕದ ಮೂಲಕ ಬ್ರೂಕ್ ಟಿ20 ಕ್ರಿಕೆಟನಲ್ಲಿ ವೇಗವಾಗಿ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದರು. ಕ್ರಿಸ್ ಗೇಲ್ ಟಿ20 ವಿಶ್ವಕಪ್‌ನಲ್ಲಿ ವೇಗದ ಶತಕ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಗೇಲ್ 2016ರಲ್ಲಿ ನಡೆದ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50 ಎಸೆತಗಳಲ್ಲಿ ಈ ಸಾಧನೆ ಮಾಡಿ ಬೀಗಿದ್ದರು.
ಟಿ20 ವಿಶ್ವಕಪ್‌ನಲ್ಲಿ ವೇಗದ ಶತಕಗಳನ್ನು ಬಾರಿಸಿದ ಬ್ಯಾಟರ್ಸ್
47 ಎಸೆತ, ಕ್ರಿಸ್ ಗೇಲ್, ಇಂಗ್ಲೆಂಡ್ ವಿರುದ್ಧ, ಮುಂಬೈ 2016
50 ಎಸೆತ, ಕ್ರಿಸ್ ಗೇಲ್, ದಕ್ಷಿಣ ಆಫ್ರಿಕಾ ವಿರುದ್ಧ, 2007
50 ಎಸೆತ, ಹ್ಯಾರಿ ಬ್ರೂಕ್, ಪಾಕಿಸ್ತಾನ ವಿರುದ್ಧ. ಪಲ್ಲೆಕೆಲೆ, 2026
51 - ಬ್ರೆಂಡಂ ಮೆಕಲಮ್, ಬಾಂಗ್ಲಾದೇಶದ ವಿರುದ್ಧ, ಪಲ್ಲೆಕೆಲೆ, 2012
ಮತ್ತೊಂದು ದಾಖಲೆ ನಿರ್ಮಾಣ
ಪಾಕಿಸ್ತಾನ ವಿರುದ್ಧದ ಅಮೋಘ ಇನಿಂಗ್ಸ್ ಮೂಲಕ ಹ್ಯಾರಿ ಬ್ರೂಕ್ ಮತ್ತೊಂದು ದಾಖಲೆ ಬರೆದರು. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಬ್ರೂಕ್ ಪಾತ್ರರಾದು. ಇದಕ್ಕೂ ಮೊದಲು ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 2010ರಲ್ಲಿ ಭಾರತದ ವಿರುದ್ಧ 98 ರನ್ ಬಾರಿಸಿದ್ದರು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರು ಸಹ ಇದೆ.
ಟಿ20 ವಿಶ್ವಕಪ್‌ನಲ್ಲಿ ನಾಯಕನಾಗಿ ಗರಿಷ್ಠ ಸ್ಕೋರ್
100, ಹ್ಯಾರಿ ಬ್ರೂಕ್ , ಪಾಕಿಸ್ತಾನ ವಿರುದ್ಧ, 2026
98, ಕ್ರಿಸ್ ಗೇಲ್, ಭಾರತದ ವಿರುದ್ಧ, 2010
94*, ಲೋರ್ಕನ್ ಟಕರ್, ಓಮನ್ ವಿರುದ್ಧ, 2026
92, ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧ, 2024
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications