For Quick Alerts
ALLOW NOTIFICATIONS  
For Daily Alerts
 

2021ರ ಬೆಸ್ಟ್ T20 ಪ್ಲೇಯಿಂಗ್ 11 ಆಟಗಾರರನ್ನು ಹೆಸರಿಸಿದ ಹರ್ಷ ಬೋಗ್ಲೆ

Harsha Bhogle

ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ 2021ರ ಬೆಸ್ಟ್ ಟಿ20 ಪ್ಲೇಯಿಂಗ್ ಇಲೆವೆನ್ ಆಟಗಾರರನ್ನು ಪ್ರಕಟಿಸಿದ್ದಾರೆ. ಹರ್ಷ ಬೋಗ್ಲೆ ಪ್ರಕಾರ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಮತ್ತು ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್‌ ಓಪನರ್‌ಗಳಾಗಿ ಆಯ್ಕೆ ಮಾಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಪಾಕ್‌ನ ಬಾಬರ್ ಅಜಮ್‌, ರಿಜ್ವಾನ್ ಜೊತೆಗೂಡಿ ಅದ್ಭುತ ಆಟವಾಡಿದ್ರೂ ಸಹ ಸ್ಟ್ರೈಕ್‌ರೇಟ್‌ ವಿಚಾರದಲ್ಲಿ ರಿಜ್ವಾನ್‌ಗಿಂತ ಹಿಂದಿದ್ದಾರೆ. ಹೀಗಾಗಿ ಮೊಹಮ್ಮದ್ ರಿಜ್ವಾನ್‌ರನ್ನ ಆಯ್ಕೆ ಮಾಡಿಕೊಂಡಿರುವುದಾಗಿ ಹರ್ಷ ಬೋಗ್ಲೆ ವಿವರಿಸಿದ್ದಾರೆ.

"ಅಜಮ್ ಮತ್ತು ರಿಜ್ವಾನ್ ಅವರ ಸ್ಕೋರ್‌ಗಳನ್ನ ನೋಡಿ. ಅವರು ತಮ್ಮದೇ ಆದ ರೀತಿಯಲ್ಲಿ ಉತ್ತಮ ಜೊತೆಯಾಟವಾಡಿದ್ದಾರೆ. ಆದ್ರೆ ಸ್ಟ್ರೈಕ್ ರೇಟ್ ನೋಡಿದ್ರೆ ಇಬ್ಬರೂ 130 ರ ಆಸುಪಾಸಿನಲ್ಲಿದ್ದರೂ ಸಹ ಪವರ್‌ಪ್ಲೇ ಸ್ಟ್ರೈಕ್ ರೇಟ್‌ಗಳನ್ನು ಗಮನಿಸಿ ರಿಜ್ವಾನ್ ಆಯ್ಕೆ ಮಾಡಿರುವುದಾಗಿ '' ಕ್ರಿಕ್‌ಬಜ್‌ನಲ್ಲಿ ಮಾತನಾಡುವಾಗ ಭೋಗ್ಲೆ ಹೇಳಿದರು.

ಭೋಗ್ಲೆ ನಂತರ ಆಸೀಸ್ ಜೋಡಿಯಾದ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ತಮ್ಮ ತಂಡದಲ್ಲಿ ಆಯ್ಕೆ ಮಾಡಿಕೊಂಡಿದ್ದು, ಇಂಗ್ಲೆಂಡ್‌ನ ಮೊಯಿನ್ ಅಲಿ ಕೂಡ ತಂಡದಲ್ಲಿ ಸ್ಥಾನ ಪಡೆದರು.

ಹರ್ಷ ಬೋಗ್ಲೆ ಇಬ್ಬರು ವೆಸ್ಟ್ ಇಂಡೀಸ್ ಆಲ್‌ರೌಂಡರ್‌ಗಳನ್ನು ಸಹ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಯ್ಕೆ ಮಾಡಿಕೊಂಡಿದ್ದಾರೆ. ಆ್ಂಡ್ರೆ ರಸೆಲ್ ಮತ್ತು ಸುನಿಲ್ ನರೇನ್‌ರನ್ನ ಆಲ್‌ರೌಂಡರ್‌ ಸ್ಥಾನದಲ್ಲಿ ಆಯ್ಕೆ ಮಾಡಿಕೊಂಡಿದ್ದು ನಾಲ್ವರು ಸ್ಪೆಷಲಿಸ್ಟ್ ಬೌಲರ್‌ಗಳು ಸಹ ಹರ್ಷ ಬೋಗ್ಲೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದಿದ್ದಾರೆ.

ಸ್ಪಿನ್ನರ್‌ಗಳಲ್ಲಿ ಶ್ರೀಲಂಕಾದ ವನಿಂದು ಹಸರಂಗ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ನಡುವಿನ ಆಯ್ಕೆಯಲ್ಲಿ , ರಶೀದ್ ಕೊಂಚ ಬ್ಯಾಟಿಂಗ್‌ಗೆ ನೆರವಾಗುವ ಹಿನ್ನಲೆಯಲ್ಲಿ ಆತನನ್ನ ಆಯ್ಕೆ ಮಾಡಲಾಗಿದೆ.

ಪ್ಲೇಯಿಂಗ್ 11 ಹೊರತುಪಡಿಸಿ ಭೋಗ್ಲೆ 4 ಇತರ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. 15ರ ತಂಡದಲ್ಲಿ ನಾಲ್ವರು ಆಟಗಾರರಲ್ಲಿ ಕೆ.ಎಲ್. ರಾಹುಲ್, ಲ್ಯೂಕಿ ಫರ್ಗುಸನ್, ವನಿಂದು ಹಸರಂಗಾ ಮತ್ತು ಜಾನಿ ಬೈರ್‌ಸ್ಟೋವ್ ಸ್ಥಾನ ಪಡೆದಿದ್ದಾರೆ.

ಹರ್ಷ ಬೋಗ್ಲೆ 2021ರ ಟಿ20 ತಂಡ
ಜೋಸ್ ಬಟ್ಲರ್, ಮೊಹಮ್ಮದ್ ರಿಜ್ವಾನ್, ಮಿಚೆಲ್ ಮಾರ್ಷ್, ಮೊಯಿನ್ ಅಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಶೀದ್ ಖಾನ್, ಶಾಹೀನ್ ಅಫ್ರಿದಿ, ಅನ್ರಿಚ್ ನಾರ್ಟ್ಜೆ, ಜಸ್ಪ್ರೀತ್ ಬುಮ್ರಾ

ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಬೌಲರ್ ಡ್ಯಾನಿಶ್ ಕನೇರಿಯಾ 2021ನೇ ವರ್ಷದ ಬೆಸ್ಟ್ ಟಿ20 ಪ್ಲೇಯಿಂಗ್ 11 ಆಟಗಾರರನ್ನ ಹೆಸರಿಸಿದ್ದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರನ್ನ ಹೊರತುಪಡಿಸಿ ನಾಲ್ವರು ಭಾರತೀಯ ಆಟಗಾರರು ಈ ಲಿಸ್ಟ್‌ನಲ್ಲಿ ಇದ್ದಾರೆ.

ಪಾಕ್‌ನ ಮಾಜಿ ಲೆಗ್‌ಸ್ಪಿನ್ನರ್ ತನ್ನ ಯ್ಯೂಟ್ಯೂಬ್ ಚಾನೆ್‌ನಲ್ಲಿ 2021ರ ಉತ್ತಮ ಆಟಗಾರರನ್ನ ಹೆಸರಿಸಿದ್ದು, ಇದರಲ್ಲಿ ನಾಲ್ವರು ಭಾರತೀಯ ಆಟಗಾರರಿದ್ದಾರೆ. ಇಬ್ಬರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು, ಪಾಕಿಸ್ತಾನದ ಮೂವರು ಆಟಗಾರರು ಮತ್ತು ಟಿ20 ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್‌ನ ಓರ್ವ ಆಟಗಾರ ಡ್ಯಾನೀಶ್ ಕನೇರಿಯಾ ಹೆಸರಿಸಿದ ಬೆಸ್ಟ್ ಪ್ಲೇಯಿಂಗ್ 11 ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ.

ಟೀಂ‌ ಇಂಡಿಯಾಗೆ ಅಂದು‌ ಗೇಲಿ‌ಮಾಡಿದ್ದಕ್ಕೆ ಇಂದು ಮಾನ‌ಕಳೆದುಕೊಂಡ ಮೈಕೆಲ್ ವಾನ್ | Oneindia Kannada

ಡ್ಯಾನಿಶ್ ಕನೇರಿಯಾ 2021ರ ಟಿ20 ತಂಡ
ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ಸ್ಟೋನ್, ಮಿಚೆಲ್ ಮಾರ್ಷ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾಹೀನ್ ಅಫ್ರಿದಿ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಆ್ಯಡಂ ಜಂಪಾ, ರಿಷಬ್ ಪಂತ್ (12ನೇ ಆಟಗಾರ)

Story first published: Thursday, December 30, 2021, 9:32 [IST]
Other articles published on Dec 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+