Harshal Patel: ಆರ್‌ಸಿಬಿ ಬಿಟ್ಟ ಬೌಲರ್‌ಗೆ ದುಬಾರಿ ಮೊತ್ತ ನೀಡಿದ ಪಂಜಾಬ್ ಕಿಂಗ್ಸ್!
ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಹತ್ತು ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡ ಕಟ್ಟಿಕೊಳ್ಳಲು ಸ್ಟಾರ್ ಆಟಗಾರರಿಗಾಗಿ ಬಿಡ್ಡಿಂಗ್ ವಾರ್‌ನಲ್ಲಿ ಪಾಲ್ಗೊಂಡವು.
ಇದೇ ವೇಳೆ ಭಾರತದ ಪ್ರಮುಖ ವೇಗದ ಬೌಲರ್ ಹರ್ಷಲ್ ಪಟೇಲ್ ಅವರು ಕಳೆದ ಬಾರಿಗಿಂತ 2024ರ ಐಪಿಎಲ್ ಹರಾಜಿನಲ್ಲಿ ದೊಡ್ಡ ಸದ್ದು ಮಾಡಿದರು. ಕಳೆದ ಬಾರಿಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾದರು.

ಹರ್ಷಲ್ ಪಟೇಲ್ ಅವರನ್ನು 11.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿತು. ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು.
ಗುಜರಾತ್ ಟೈಟನ್ಸ್ ಮೂಲ ಬೆಲೆ 2 ಕೋಟಿ ರೂಪಾಯಿ ಬಿಡ್ ಮಾಡಿತು. ನಂತರ ಭಾರತೀಯ ಬೌಲರ್‌ಗಾಗಿ ಪಂಜಾಬ್ ಕಿಂಗ್ಸ್ ಬಿಡ್ಡಿಂಗ್ ವಾರ್ ಪ್ರವೇಶಿಸಿತು. ಗುಜರಾತ್ ಟೈಟನ್ಸ್ 4 ಕೋಟಿ ರೂಪಾಯಿಗೆ ಹೆಚ್ಚಿಸಿತು.

ಬಿಡ್ ತ್ವರಿತವಾಗಿ 5 ಕೋಟಿ ರೂಪಾಯಿಗೆ ಏರಿಕೆಯಾಯಿತು. ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹರಾಜು ಯುದ್ಧ 11 ಕೋಟಿ ಗಡಿ ದಾಟಿತು.
11.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಖರೀದಿಸುವ ಮೂಲಕ, ಹರ್ಷಲ್ ಪಟೇಲ್ ದಿನದ ಎರಡನೇ ಅತಿ ದುಬಾರಿ ಆಟಗಾರನಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications