IND vs PAK: ಹರ್ಷಿತ್ ರಾಣಾ, ರಿಜ್ವಾನ್ ಮಾತಿನ ಚಕಮಕಿ
ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಪಂದ್ಯಕ್ಕಾಗಿ ದುಬೈ ಅಂಗಳ ಸಾಕ್ಷಿಯಾಗಿದೆ. ಈ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿದೆ. ಈ ವೇಳೆ ಆರಂಭದಲ್ಲಿ ಕೊಂಚ ಲಯದಲ್ಲಿ ಕಾಣಿಸಿಕೊಂಡ ಪಾಕ್ ಬ್ಯಾಟರ್ಸ್ ನಂತರ ಸಂಯಮ ಕಳೆದುಕೊಂಡರು. 10 ಓವರ್‌ಗಳಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ ಬಳಿಕ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ನಿಧಾನವಾಗಿ ಬ್ಯಾಟಿಂಗ್ ಮಾಡಿದರು.
ಇದೇ ವೇಳೆ ಪಾಕಿಸ್ತಾನದ ನಾಯಕ ಮೊಹಮ್ಮದ್ ರಿಜ್ವಾನ್ ಹಾಗೂ ಭಾರತದ ವೇಗದ ಬೌಲರ್ ಹರ್ಷಿತ್ ರಾಣಾ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಭಾರತ ತಂಡದ ಪರ ಹರ್ಷಿತ್ ರಾಣಾ 21ನೇ ಓವರ್ ಎಸೆದರು. ಈ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ಪಡೆಯುವಾಗಿ ರಿಜ್ವಾನ್ ಹರ್ಷಿತ್ ರಾಣಾ ಅವರಿಗೆ ಡಿಕ್ಕಿ ಹೊಡೆದರು.

ರಿಜ್ವಾನ್ ಸಿಂಗಲ್ ತೆಗೆದುಕೊಳ್ಳುವ ಭರದಲ್ಲಿ ಮುಂದೆ ಸಾಗಿದರು. ಆಗ ಹರ್ಷಿತ್ ರಾಣಾ ತಮ್ಮ ಬೌಲಿಂಗ್ ಲೈನ್ ಅಪ್‌ನಲ್ಲಿ ಮುಂದೆ ಬಂದಿದ್ದರು. ಆಗ ಇಬ್ಬರು ಆಟಗಾರರ ನಡುವೆ ಪರಸ್ಪರ ಡಿಕ್ಕಿ ಹೊಡೆದರು. ಆದರೆ ರಿಜ್ವಾನ್ ಬಯಸಿದ್ದರೆ ತಪ್ಪಿಸಿಕೊಳ್ಳಬಹುದಿತ್ತು. ನಂತರ ಹರ್ಷಿತ್ ತನ್ನ ಕೈಗಳನ್ನು ಚಾಚಿ ಕೋಪದಿಂದ ರಿಜ್ವಾನ್‌ಗೆ ಏನೋ ಹೇಳಿದರು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಅಕ್ಷರ್ ಪಟೇಲ್ ಕ್ಲಾಸಿಕ್ ಥ್ರೋ..
ಇನ್ನು ಇದೇ ಪಂದ್ಯದ 10ನೇ ಓವರ್‌ನಲ್ಲಿ ಇಮಾಮ್ ಉಲ್ ಹಕ್ ಅವರು, ಕುಲ್‌ದೀಪ್ ಯಾದವ್ ಎಸೆತದಲ್ಲಿ ಸಿಂಗಲ್ ಪಡೆಯಲು ಮುಂದಾದರು. ಇದೇ ವೇಳೆ ಅಕ್ಷರ್ ಪಟೇಲ್ ಮಿಡ್ ಆನ್‌ನಲ್ಲಿ ಫೀಲ್ಡ್ ಮಾಡ್ತಾ ಇದ್ದರು. ಚೆಂಡು ತಮ್ಮ ಬಳಿ ಬರ್ತಾ ಇದ್ದಂತೆ ಎಚ್ಚೆತ್ತುಕೊಂಡ ಅಕ್ಷರ್ ಪಟೇಲ್ ಎರಡು ಹೆಜ್ಜೆ ಮುಂದೆ ಬಂದು ಚೆಂಡನ್ನು ಹಿಡಿದು ಪರ್ಫೆಕ್ಟ್ ಥ್ರೊ ಮಾಡಿದರು. ಈ ಥ್ರೋ ನೋಡಿದ ಅಭಿಮಾನಿಗಳು ಫುಲ್ ಶಾಕ್.
ವಿಶೇಷವಾಗಿ ಇಮಾಮ್ ಉಲ್ ಹಕ್ ರನ್ ಔಟ್ ಆಗುತ್ತಿರುವ ಪಾಕಿಸ್ತಾನಿ ಮಹಿಳಾ ಅಭಿಮಾನಿಯ ಚಿತ್ರ ವೈರಲ್ ಆಗುತ್ತಿದೆ. ಇಮಾಮ್ ಉಲ್ ಹಕ್ ಔಟ್ ಆಗುತ್ತಿದ್ದಂತೆ ಕ್ಯಾಮೆರಾ ಕಣ್ಣುಗಳು ಈ ಅಭಿಮಾನಿಯ ಮೇಲೆ ನೆಟ್ಟವು. ಕ್ಯಾಮೆರಾ ಇವರ ಮೇಲೆ ಬಿಳುತ್ತಿದ್ದಂತೆ ಸುಂದರ ಮುಖ ಬಾಡಿದ ತಾವರೆ ಆಗಿತ್ತು. ಇದಕ್ಕೆ ಕಾರಣ ಔಟ್ ಆಗಿದ್ದು. ಇಮಾಮ್ ಔಟ್ ಆಗುತ್ತಿದ್ಧಂತೆ ಇವರು ಹಣೆಯನ್ನು ಹಿಡಿದುಕೊಂಡರು.
ಇಮಾಮ್ ಉಲ್ ಹಕ್ 15 ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಫಖರ್ ಜಮಾನ್ ಗಾಯಕ್ಕೆ ತುತ್ತಾಗಿದ್ದರಿಂದ ಇವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದರು. ಆದರೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications