For Quick Alerts
ALLOW NOTIFICATIONS  
For Daily Alerts
 

Harshit Rana: ಪದಾರ್ಪಣಾ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ "ಹರ್ಷ"

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ನಾಗ್ಪುರದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇಬ್ಬರು ಯುವ ಆಟಗಾರರಿಗೆ ಆಡುವ ಬಳಗದಲ್ಲಿ ಆಡುವ ಅವಕಾಶವನ್ನು ನೀಡಿತು. ಈ ಇಬ್ಬರು ಭರವಸೆಯ ಆಟಗಾರರು ಈಗಾಗಲೇ ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈಗ ಇವರಿಬ್ಬರಿಗೂ ಏಕದಿನ ಕ್ರಿಕೆಟ್‌ನಲ್ಲಿ ಆಡುವ ಅವಕಾಶವನ್ನು ಸಹ ನೀಡಲಾಯಿತು. ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನು ಆಡುವ ಅವಕಾಶವನ್ನು ಯಶಸ್ವಿ ಜೈಸ್ವಾಲ್‌ ಹಾಗೂ ಹರ್ಷಿತ್ ರಾಣಾ ಪಡೆದಿದ್ದಾರೆ.

ಈ ಇಬ್ಬರೂ ಸ್ಟಾರ್ ಆಟಗಾರರು ಈಗಾಗಲೇ ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಈ ವೇಳೆ ಭರವಸೆಯ ಬೌಲರ್‌ ಹರ್ಷಿತ್ ರಾಣಾ ಕೊಂಚ ಆರಂಭದಲ್ಲಿ ದುಬಾರಿಯಾದರು. ಈ ವೇಳೆ ಅವರು ಬೇಡವಾದ ದಾಖಲೆಗೂ ಸಹ ತಮ್ಮ ಹೆಸರನ್ನು ನಮೂದಿಸಿದರು. ತಮ್ಮ ಮೂರನೇ ಓವರ್‌ನಲ್ಲಿ 26 ರನ್‌ಗಳನ್ನು ನೀಡುವ ಮೂಲಕ ಹರ್ಷಿತ್ ರಾಣಾ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಬೇಡವಾದ ದಾಖಲೆಯನ್ನು ಸಹ ಬರೆದರು. ಈ ವೇಳೆ ಅವರು ಅತಿ ಹೆಚ್ಚು ರನ್‌ಗಳನ್ನು ನೀಡಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ತಮ್ಮದಾಗಿಸಿಕೊಂಡರು.

Harshit Rana Creates History on ODI Debut Despite Conceding Most Runs in an Over

ಹರ್ಷಿತ್ ಇತಿಹಾಸ

ಟಾಸ್‌ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌, ಹರ್ಷಿತ್ ರಾಣಾ ಎಸೆದ ಮೂರನೇ ಓವರ್‌ನಲ್ಲಿ ರನ್‌ ಸುರಿಮಳೆ ಸುರಿಸಿದರು. ಈ ಓವರ್‌ನಲ್ಲಿ ಸಾಲ್ಟ್ ಮೂರು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಒಟ್ಟು 26 ರನ್ ಗಳಿಸಿದರು. ಈ ಮೂಲಕ ಹರ್ಷಿತ್ ಪದಾರ್ಪಣಾ ಪಂದ್ಯದ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್‌ ಎನಿಸಿಕೊಂಡರು.

ಆದರೆ ಬಳಿಕ ಹರ್ಷಿತ್ ರಾಣಾ ಭರ್ಜರಿಯಾಗಿ ಕಂ ಬ್ಯಾಕ್ ಮಾಡಿದರು. ತಮ್ಮ ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಬೆನ್‌ ಡಕೆಟ್‌ ಹಾಗೂ ಆರನೇ ಎಸೆತದಲ್ಲಿ ಹ್ಯಾರಿ ಬ್ರೂಕ್‌ ಅವರ ವಿಕೆಟ್ ಪಡೆದು ಅಬ್ಬರಿಸಿದರು. ಇನ್ನು ಹರ್ಷಿತ್ ರಾಣಾ ಇದೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಲಿಯಾಮ್ ಲಿವಿಂಗ್‌ ಸ್ಟೋನ್ ಅವರಿಗೂ ಖೆಡ್ಡಾ ತೋಡಿದರು. ಈ ಮೂಲಕ ಹರ್ಷಿತ್ ರಾಣಾ ದೊಡ್ಡ ಸಾಧನೆಯನ್ನು ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದ ಹರ್ಷಿತ್ ಅಬ್ಬರಿಸಿದರು.

Harshit Rana Creates History on ODI Debut Despite Conceding Most Runs in an Over

ಇದಕ್ಕೂ ಮೊದಲು ಹರ್ಷಿತ್ ರಾಣಾ ಟಿ20 ಹಾಗೂ ಟೆಸ್ಟ್‌ ಪಂದ್ಯಗಳ ಪದಾರ್ಪಣೆ ಪಂದ್ಯದಲ್ಲಿ ತಲಾ ಮೂರು ವಿಕೆಟ್‌ ಪಡೆದು ಬೀಗಿದ್ದರು. ಈಗ ಏಕದಿನ ಪಂದ್ಯದಲ್ಲೂ ಮೂರು ವಿಕೆಟ್‌ ಪಡೆಯುವ ಮೂಲಕ ಇತಿಹಾಸ ಬರೆದರು.

Story first published: Thursday, February 6, 2025, 22:52 [IST]
Other articles published on Feb 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+