ದೀಪಕ್ ಚಹರ್ ಮದುವೆಗೆ ಟೀಮ್ ಇಂಡಿಯಾ ಆಟಗಾರರ ಜತೆ ಬಂದಿದ್ರಾ ಪಾಕ್ ಆಟಗಾರ? ಇಲ್ಲಿದೆ ಸತ್ಯಾಂಶ

ಭಾರತದ ಯುವ ಕ್ರಿಕೆಟಿಗ ದೀಪಕ್ ಚಹರ್ ತಮ್ಮ ಬಹುಕಾಲದ ಗೆಳತಿ ಜಯ ಭಾರದ್ವಾಜ್ ಅವರನ್ನು ವಿವಾಹವಾಗಿದ್ದಾರೆ. ಜೂನ್ 1ರಂದು ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಜೆಪಿ ಪ್ಯಾಲೇಸ್‌ನಲ್ಲಿ ದೀಪಕ್ ಚಹರ್ ಮತ್ತು ಜಯಾ ಭಾರದ್ವಾಜ್ ಜೋಡಿ ಸಪ್ತಪದಿ ತುಳಿಯಿತು.
ಹೀಗೆ ದೀಪಕ್ ಚಹರ್ ಮತ್ತು ಜಯ ಭಾರದ್ವಾಜ್ ಅವರ ಅದ್ದೂರಿ ವಿವಾಹ ಮೂರ್ನಾಲ್ಕು ದಿನಗಳ ಕಾಲ ನಡೆದಿದ್ದು ಮೆಹಂದಿ ಶಾಸ್ತ್ರ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮಗಳು ಸಹ ಒಂದೊಂದು ದಿನ ನಡೆದಿವೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿರುವ ದೀಪಕ್ ಚಹರ್ ವಿವಾಹಕ್ಕೆ ತಂಡದ ಹಲವಾರು ಕ್ರಿಕೆಟಿಗರು ಆಗಮಿಸಿದ್ದರು ಹಾಗೂ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‍ಗೂ ಪದಾರ್ಪಣೆ ಮಾಡಿದ್ದ ದೀಪಕ್ ಚಹರ್ ವಿವಾಹಕ್ಕೆ ಟೀಮ್ ಇಂಡಿಯಾದ ಹಾಲಿ ಕ್ರಿಕೆಟಿಗರು ಹಾಗೂ ಹಲವಾರು ಮಾಜಿ ಆಟಗಾರರೂ ಸಹ ಆಗಮಿಸಿದ್ದರು.
ಹೀಗೆ ದೀಪಕ್ ಚಹರ್ ಮತ್ತು ಜಯ ಭಾರದ್ವಾಜ್ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದ ಪ್ರಸ್ತುತ ಭಾರತ ತಂಡದಲ್ಲಿ ಮಿಂಚುತ್ತಿರುವ ಯುವ ಆಟಗಾರರ ಗುಂಪಿನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಚಿತ್ರದಲ್ಲಿ ಇಶಾನ್ ಕಿಶನ್ ರಿಷಭ್, ಪಂತ್ ಸೇರಿದಂತೆ ಹಲವಾರು ಯುವ ಕ್ರಿಕೆಟಿಗರಿದ್ದರು. ಈ ವೈರಲ್ ಚಿತ್ರವನ್ನು ನೋಡಿದ ಕ್ರಿಕೆಟ್ ಪ್ರೇಮಿಗಳು ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಕೂಡ ದೀಪಕ್ ಚಹರ್ ವಿವಾಹಕ್ಕೆ ಆಗಮಿಸಿದ್ದಾರೆ ಎಂದು ಹೇಳಲು ಆರಂಭಿಸಿದರು. ಅಷ್ಟಕ್ಕೂ ದೀಪಕ್ ಚಹರ್ ವಿವಾಹಕ್ಕೆ ಹಸನ್ ಅಲಿ ಬಂದಿದ್ರಾ, ಇದರ ಹಿಂದಿರೋ ಅಸಲಿಯತ್ತೇನು ಎಂಬುದರ ಕುರಿತ ವಿವರ ಮುಂದಿದೆ ಓದಿ.

ದೀಪಕ್ ಚಹರ್ ವಿವಾಹಕ್ಕೆ ಹಸನ್ ಅಲಿ ಬಂದಿದ್ದರು ಎನ್ನಲು ಇದೇ ಕಾರಣ
ದೀಪಕ್ ಚಹರ್ ಮತ್ತು ಜಯ ಭರದ್ವಾಜ್ ವಿವಾಹಕ್ಕೆ ಪಾಕಿಸ್ತಾನದ ಹಸನ್ ಅಲಿ ಆಗಮಿಸಿದ್ದರು ಎನ್ನಲು ಕಾರಣ ವೈರಲ್ ಆಗಿದ್ದ ಯುವ ಕ್ರಿಕೆಟಿಗರ ಗುಂಪಿನ ಚಿತ್ರದಲ್ಲಿ ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ನಡುವೆ ಹಸನ್ ಅಲಿಯ ರೀತಿಯೇ ಇರುವ ವ್ಯಕ್ತಿಯೋರ್ವ ಇದ್ದದ್ದು. ಹೀಗಾಗಿಯೇ ಆ ಚಿತ್ರವನ್ನು ನೋಡಿದ ಹಲವಾರು ಮಂದಿ ಇದು ಹಸನ್ ಅಲಿಯವರೇ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಅಸಲಿಯತ್ತು ಇದು
ಇನ್ನು ವೈರಲ್ ಆಗಿದ್ದ ಈ ಚಿತ್ರದ ಹಸನ್ ಅಲಿ ರೀತಿಯೇ ಇದ್ದ ವ್ಯಕ್ತಿಯ ಹೆಸರು ಮಧುರ್ ಖತ್ರಿ. ಮಧುರ್ ಖತ್ರಿ ರಾಜಸ್ತಾನ್ ಮೂಲದ ಕ್ರಿಕೆಟಿಗನಾಗಿದ್ದು, ಸದ್ಯ ಫಿಟ್‌ನೆಸ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ನೋಡಲು ಹಸನ್ ಅಲಿ ರೀತಿಯೇ ಇದ್ದುದರಿಂದ ಕ್ರಿಕೆಟ್ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದರು. ಈ ಮೂಲಕ ಹಸನ್ ಅಲಿ ದೀಪಕ್ ಚಹರ್ ವಿವಾಹಕ್ಕೆ ಆಗಮಿಸಿದ್ದರು ಎನ್ನುವುದು ಗಾಳಿ ಸುದ್ದಿ ಎಂಬುದು ಬಹಿರಂಗವಾಗಿದೆ.

ದೀಪಕ್ ಚಹರ್ ಕಾಲೆಳೆದಿದ್ದ ಸಹೋದರಿ
ಇನ್ನು ಒಂದೆಡೆ ದೀಪಕ್ ಚಾಹರ್ ವಿವಾಹಕ್ಕೆ ಟೀಮ್ ಇಂಡಿಯಾ ಆಟಗಾರರು ಆಗಮಿಸಿದ್ದು ಸುದ್ದಿಯಾದರೆ, ಮತ್ತೊಂದೆಡೆ ದೀಪಕ್ ಚಹರ್ ಸಹೋದರಿ ಮಾಲತಿ ಚಹರ್ ಮಾಡಿದ್ದ ಟ್ವೀಟ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮಧುಚಂದ್ರದ ಸಮಯದಲ್ಲಿ ನಿಮ್ಮ ಸೊಂಟ ಹುಷಾರು, ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಸನಿಹದಲ್ಲಿದೆ ಎಂದು ಟ್ವೀಟ್ ಮಾಡುವ ಮೂಲಕ ಮಾಲತಿ ಚಾಹರ್ ತನ್ನ ಸಹೋದರನ ಕಾಲನ್ನು ಎಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications