ದುಬೈನಲ್ಲಿ ಭಾರತೀಯ ವಧುವನ್ನು ವರಿಸಿದ ಪಾಕ್ ಕ್ರಿಕೆಟರ್ ಹಸನ್ ಅಲಿ

ದುಬೈ, ಆಗಸ್ಟ್ 21: ಪಾಕಿಸ್ತಾನ ಕ್ರಿಕೆಟ್ ತಂಡ ವೇಗಿ ಹಸನ್ ಅಲಿ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿದ್ದಾರೆ. ಮಂಗಳವಾರ (ಆಗಸ್ಟ್ 20) ಅಲಿ ಮತ್ತು ಶಮಿಯಾ ಅಝ್ರೂ ವಿವಾಹ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿತು. ಇದರೊಂದಿಗೆ ಭಾರತೀಯೆಯನ್ನು ವರಿಸಿದ 4ನೇ ಪಾಕ್ ಕ್ರಿಕೆಟರ್ ಆಗಿ ಅಲಿ ಗುರುತಿಸಿಕೊಂಡಿದ್ದಾರೆ.
ಪಾಕ್ ಕ್ರಿಕೆಟರ್‌ಗಳಾದ ಝಹೀರ್ ಅಬ್ಬಾಸ್, ಮೊಹ್ಸಿನ್ ಖಾನ್ ಮತ್ತು ಶೋಯೆಬ್ ಮಲಿಕ್ ಕೂಡ ಭಾರತೀಯ ವಧುವನ್ನು ವರಿಸಿದ್ದರು. ಭಾರತೀಯಳನ್ನು ಪತ್ನಿಯಾಗಿ ಆರಿಸಿದ ನಾಲ್ಕನೇ ಪಾಕ್ ಕ್ರಿಕೆಟರ್ ಹಸನ್ ಅಲಿ. ತನ್ನ ಮದುವೆಗೆ ಭಾರತೀಯ ಕ್ರಿಕೆಟರ್‌ಗೂ ಆಹ್ವಾನವಿತ್ತಿದ್ದರು.
2016ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹಸನ್ ಅಲಿ, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡಕ್ಕೆ ಚಾಂಪಿಯನ್ಸ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಸನ್-ಶಮಿಯಾ ಪ್ರೇಮಾಂಕುರ
ಶಮಿಯಾ ಅಝ್ರೂ ಅವರು ಹರ್ಯಾಣ ರಾಜ್ಯದ ಮೆವಾತ್ ಜಿಲ್ಲೆಯವರು. ದುಬೈನಲ್ಲಿ ಹಸನ್ ಅಲಿ ಭೇಟಿಯಾಗಿದ್ದ ಶಮಿಯಾ ಅವರಲ್ಲಿ ಹಸನ್‌ಗೆ ಪ್ರೇಮಾಂಕುರವಾಗಿತ್ತು. ಹಸನ್‌ಹಗೆ ಶಮಿಯಾ ಅವರ ಪ್ರಮಾಣಿಕತೆ ಇಷ್ಟವಾಗಿತ್ತಲ್ಲದೆ, ಹಸನ್, ಶಮಿಯಾ ಅವರಲ್ಲಿ ಮದುವೆಯ ಪ್ರಸ್ತಾಪ ನೀಡಿದ್ದರು. ಇದಕ್ಕೆ ಶಮಿಯಾ ಒಪ್ಪಿಗೆ ಸೂಚಿಸಿದ್ದರು.

ಬಿ.ಟೆಕ್ ಪದವೀಧರೆ
ಮಾನವ್ ರಚನಾ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಶಮಿಯಾ, ಸದ್ಯ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯಲ್ಲಿ ಫ್ಲೈಟ್ ಎಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ದುಬೈನಲ್ಲೇ ವಾಸವಿದ್ದರು. ಆದರೆ ಶಮಿಯಾ ಕುಟುಂಬದ ಸದಸ್ಯರು ಸದ್ಯ ದಿಲ್ಲಿಯಲ್ಲಿ ನೆಲೆಸಿದ್ದಾರೆ.

ಸಾನಿಯಾ ಶುಭಾಶಯ
ಶೋಯೆಬ್ ಮಲಿಕ್ ವರಿಸಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರು ನವ ವಧು-ವರರಿಗೆ ಶುಭಾಶಯ ಕೋರಿದ್ದಾರೆ. 'ಹಸನ್‌ಗೆ ಶುಭಾಶಯಗಳು. ಇಬ್ಬರ ಮಧ್ಯೆ ಬದುಕಿನ ಕೊನೆ ತನಕ ಪ್ರೀತಿ-ಖುಷಿಯಿರಲಿ' ಎಂದು ಟ್ವಿಟರ್ ಮೂಲಕ ಮಿರ್ಝಾ ಶುಭ ಹಾರೈಸಿದ್ದಾರೆ.

ವಿಶ್ವಕಪ್‌ನಲ್ಲಿ ಹಸನ್
ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪಾಕ್ ತಂಡದಲ್ಲಿ ಕಾಣಿಸಿಕೊಂಡಿದ್ದ ಹಸನ್, ಹೇಳಿಕೊಳ್ಳುವ ಪ್ರದರ್ಶನ ತೋರಿರಲಿಲ್ಲ. ಬರೀ 4 ಪಂದ್ಯಗಳನ್ನಾಡಿದ್ದ ಅಲಿ, ಒಂದೆರಡು ವಿಕೆಟ್ ಪಡೆದಿದ್ದರು. ಅದರಲ್ಲೂ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ-ಪಾಕ್ ಪಂದ್ಯದ ವೇಳೆ 84 ರನ್ ಕೊಟ್ಟಿದ್ದ ಅಲಿಯನ್ನು ಉನ್ನುಳಿದ ಪಂದ್ಯಗಳಿಂದ ಕೈ ಬಿಡಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications