For Quick Alerts
ALLOW NOTIFICATIONS  
For Daily Alerts
 

IPL 2025: ವೃತ್ತಿಜೀವನದ ಮೂರನೇ ಟಿ20 ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ ಪಾಕ್ ಯುವ ಬ್ಯಾಟರ್

ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ 22 ವರ್ಷದ ಯುವ ಬ್ಯಾಟರ್ ಹಸನ್ ನವಾಜ್ ಶುಕ್ರವಾರ ಇತಿಹಾಸ ಸೃಷ್ಟಿಸಿದರು. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನವಾಜ್ ಬಿರುಸಿನ ಶತಕ ಬಾರಿಸಿದ್ದಾರೆ. ಈ ಶತಕದ ಮೂಲಕ, ಅವರು ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಜೀವಂತವಾಗಿರಿಸಿದಲ್ಲದೆ, ತಮ್ಮದೆ ದೇಶದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರ ದೊಡ್ಡ ದಾಖಲೆಯನ್ನು ಮುರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಹಸನ್ನವಾಜ್ ಕೇವಲ 44 ಎಸೆತಗಳಲ್ಲಿ 100 ರನ್‌ಗಳ ಗಡಿ ದಾಟಿದರು. ಇದರೊಂದಿಗೆ, ಅವರು ಪಾಕಿಸ್ತಾನ ಪರ ಅತಿ ವೇಗದ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ವಿಶಿಷ್ಟ ಸಾಧನೆಯನ್ನು ಸಾಧಿಸುವಾಗ, ನವಾಜ್ 9 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು.

Hasan Nawaz scores fastest century for Pakistan in T20 International cricket

ಹಸನ್ ನವಾಜ್ ತಮ್ಮ ಸ್ಫೋಟಕ ಪ್ರದರ್ಶನದ ಮೂಲಕ ಬಾಬರ್ ಅಜಮ್ ಅವರ ವೇಗದ ಶತಕದ ದಾಖಲೆಯನ್ನು ಮುರಿದರು. ಹಸನ್ ಗಿಂತ ಮೊದಲು, ಪಾಕಿಸ್ತಾನ ಪರ ಅತಿ ವೇಗದ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದ ದಾಖಲೆ ಬಾಬರ್ ಅಜಮ್ ಹೆಸರಿನಲ್ಲಿತ್ತು. ಅವರು 49 ಎಸೆತಗಳಲ್ಲಿ ಈ ಸಾಧನೆ ಮಾಡಿದರು.

ಪಾಕಿಸ್ತಾನ ಪರ ಅತಿ ವೇಗದ ಟಿ20 ಶತಕ

ಹಸನ್ ನವಾಜ್ - ನ್ಯೂಜಿಲೆಂಡ್ ವಿರುದ್ಧ 44 ಎಸೆತಗಳು (2025)
ಬಾಬರ್ ಅಜಮ್ - ದಕ್ಷಿಣ ಆಫ್ರಿಕಾ ವಿರುದ್ಧ 49 ಎಸೆತಗಳು (2021)
ಅಹ್ಮದ್ ಶಹಜಾದ್ - ಬಾಂಗ್ಲಾದೇಶ ವಿರುದ್ಧ 58 ಎಸೆತಗಳು (2014)

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ದಾಖಲೆ ಎಸ್ಟೋನಿಯಾದ ಬ್ಯಾಟರ್ ಸಾಹಿಲ್ ಚೌಹಾಣ್ ಅವರ ಹೆಸರಿನಲ್ಲಿದೆ. ಅವರು ಎಪಿಸ್ಕೋಪಿಯಲ್ಲಿ ಸೈಪ್ರಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಶತಕ ಗಳಿಸಿದರು.

ಪಂದ್ಯದ ಫಲಿತಾಂಶ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 19.5 ಓವರ್‍‌ಗಳಲ್ಲಿ ಆಲೌಟ್ ಆಗುವ ಮೂಲಕ 204 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಕಿವೀಸ್ ಪಡೆ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡವು 16 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 205 ರನ್‌ಗಳನ್ನು ತಲುಪಿತು. ಪಾಕಿಸ್ತಾನ ಪರ ಹಸನ್ 45 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದರು. ಅವರು ಮೊದಲ ವಿಕೆಟ್‌ಗೆ ಮೊಹಮ್ಮದ್ ಹ್ಯಾರಿಸ್ (41) ಅವರೊಂದಿಗೆ 74 ರನ್‌ಗಳ ಜೊತೆಯಾಟ ಆಡಿದರು.ನಂತರ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಎರಡನೇ ವಿಕೆಟ್‌ಗೆ ಅಜೇಯ 133 ರನ್‌ಗಳ ಜೊತೆಯಾಟ ಅಡುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು.

Story first published: Friday, March 21, 2025, 23:47 [IST]
Other articles published on Mar 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+