ಇಮಾಮ್ ಶತಕ ವ್ಯರ್ಥ, ಪಾಕ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 13 ರನ್ ಜಯ

ಸೆಂಚುರಿಯನ್, ಜನವರಿ 26: ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಶುಕ್ರವಾರ (ಜನವರಿ 25) ನಡೆದ ಪಾಕಿಸ್ತಾನ vs ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಫ್ರಿಕಾ 13 ರನ್ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಸಾಧಿಸಿದೆ. ಪಾಕ್ ಸ್ಫೋಟಕ ಬ್ಯಾಟ್ಸ್ಮನ್ ಇಮಾಮ್ ಉಲ್ ಹಖ್ ಶತಕ ವ್ಯರ್ಥಗೊಂಡಿತು.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನ, ಹಖ್ 101, ಬಾಬರ್ ಅಝಾಮ್ 69, ಮೊಹಮ್ಮದ್ ಹಫೀಜ್ 52 ರನ್ ಕೊಡುಗೆಯೊಂದಿಗೆ 50 ಓವರ್‌ಗೆ 6 ವಿಕೆಟ್ ಕಳೆದು ಭರ್ಜರಿ 317 ರನ್ ಪೇರಿಸಿತು. ದಕ್ಷಿಣ ಆಫ್ರಿಕಾ ತಂಡ 33 ಓವರ್‌ಗಳಲ್ಲಿ 2 ವಿಕೆಟ್ ಕಳೆದು 187 ರನ್ ಬಾರಿಸುವುದರೊಂದಿಗೆ (ಡಿಎಲ್‌ಎಸ್ ನಿಯಮ) ಜಯ ಗಳಿಸಿತು.
ಐದು ಪಂದ್ಯಗಳ ಈ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದುಕೊಂಡಿದ್ದವು. ಇತ್ತಂಡಗಳ ನಡುವೆ ಜನವರಿ 22ರಂದು ನಡೆದ ದ್ವಿತೀಯ ಪಂದ್ಯದಲ್ಲಿ ಸರ್ಫರಾಜ್, ಆಂಡಿಲೆ ಅವರನ್ನು 'ಕರಿಯ' ಎಂದು ಟೀಕಿಸಿದ್ದರು. ಈ ಪಂದ್ಯದಲ್ಲಿ ಆಫ್ರಿಕಾ 5 ವಿಕೆಟ್ ಗೆಲುವನ್ನಾಚರಿಸಿತ್ತು.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿ.ಕೆ.), ಹಾಶಿಮ್ ಅಮ್ಲಾ, ರೀಜಾ ಹೆಂಡ್ರಿಕ್ಸ್, ರಾಸ್ಸೀ ವಾನ್ ಡೆರ್ ಡಸೆನ್, ಫಾಫ್ ಡು ಪ್ಲೆಸಿಸ್ (ಸಿ), ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವೇವೊ, ಕಾಗಿಸೊ ರಾಬಾಡಾ, ಡೇಲ್ ಸ್ಟೈನ್, ಬ್ಯೂರಾನ್ ಹೆಂಡ್ರಿಕ್ಸ್.
ಪಾಕಿಸ್ತಾನ ತಂಡ: ಇಮಾಮ್ ಉಲ್ ಹಕ್, ಫಖರ್ ಜಮಾನ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಸರ್ಫರಾಜ್ ಅಹ್ಮದ್ (ಸಿ & ವಿಕೆ), ಇಮಾದ್ ವಾಸಿಮ್, ಶದಾಬ್ ಖಾನ್, ಮೊಹಮ್ಮದ್ ಅಮೀರ್, ಹಸನ್ ಅಲಿ, ಶಾಹೇನ್ ಅಫ್ರಿದಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications